
ನವದೆಹಲಿ: ಚೆಸ್ ಜಗತ್ತಿನಲ್ಲಿ ಇನ್ನೊಂದು ಐತಿಹಾಸಿಕ ಸಾಧನೆ. ಭಾರತೀಯ ಮೂಲದ ಬ್ರಿಟಿಷ್ ಬಾಲಕಿ ಬೋಧನಾ ಸಿವಾನಂದನ್ (11) ಅಂತರರಾಷ್ಟ್ರೀಯ ಮಾಸ್ಟರ್ ಬಿರುದನ್ನು ಪಡೆದು, ಹೆಣ್ಣುಮಕ್ಕಳಲ್ಲಿ ಅತಿ ಚಿಕ್ಕ ಪ್ರಾಯದ ಇಂಟರ್ನ್ಯಾಷನಲ್ ಮಾಸ್ಟರ್ ಆಗಿದ್ದಾರೆ.
ಅಕ್ಟೋಬರ್ 23 ರಂದು ಮಾಂಟೆನೆಗ್ರೋದ ಬುದ್ವಾದಲ್ಲಿ ನಡೆದ ಯುರೋಪಿಯನ್ ಕ್ಲಬ್ ಕಪ್ ಪಂದ್ಯಾವಳಿಯಲ್ಲಿ ಅವರು ತಮ್ಮ ಮೂರನೇ ಮತ್ತು ಅಂತಿಮ ಇಂಟರ್ನ್ಯಾಷನಲ್ ಮಾಸ್ಟರ್ ನಾರ್ಮ್ನ್ನು ಸಾಧಿಸಿದ್ದಾಳೆ. ಸ್ವೀಡನ್ನ WIM ವಿಕ್ಟೋರಿಯಾ ಜೊಹಾನ್ಸನ್ ವಿರುದ್ಧ ಗೆಲುವು ಸಾಧಿಸಿ 5.5/7 ಅಂಕಗಳೊಂದಿಗೆ ಪಂದ್ಯಾವಳಿ ಮುಗಿಸಿದ್ದಾಳೆ. ಆ ಸಮಯಕ್ಕೆ ಅವರ ವಯಸ್ಸು 11 ವರ್ಷ, 7 ತಿಂಗಳು, 16 ದಿನ.
ಈ ಸಾಧನೆಯೊಂದಿಗೆ ಅವರು 1988ರಲ್ಲಿ 12 ವರ್ಷದಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಬಿರುದು ಪಡೆದಿದ್ದ ಹಂಗೇರಿಯದ ಪೌರಾಣಿಕ ಆಟಗಾರ್ತಿ ಜುಡಿತ್ ಪೋಲ್ಗರ್ ಅವರ 38 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಒಟ್ಟಾರೆ (ಹುಡುಗರು ಮತ್ತು ಹುಡುಗಿಯರು ಸೇರಿ) ಅತಿ ಯುವ ಇಂಟರ್ನ್ಯಾಷನಲ್ ಮಾಸ್ಟರ್ಗಳ ಪಟ್ಟಿಯಲ್ಲಿ ಅವರು 7ನೇ ಸ್ಥಾನದಲ್ಲಿದ್ದಾರೆ.
ಬೋಧನಾ ಬಮಾರ್ಚ್ 7, 2015 ರಂದು ಲಂಡನ್ಲ್ಲಿ ಜನಿಸಿದ್ದು, ಈಕೆಯ ತಂದೆ ತಮಿಳುನಾಡಿನ ತಿರುಚಿರಾಪಳ್ಳಿ ಮೂಲದವರು. ಈಕೆ ಚೆಸ್ನಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



