ಭಾರತದ ಸಂಸ್ಕೃತಿ ತನ್ನದೇ ಆದ ಸೊಬಗು ಮತ್ತು ಸೊಗಡನ್ನು ಹೊಂದಿದೆ. ಆಹಾರ, ವಿಹಾರ, ಯಾತ್ರಾ ಸ್ಥಳಗಳು, ದೇವಾಲಯಗಳು, ಸಾರಿಗೆ ಹೀಗೆ ಪ್ರತಿಯೊಂದರಲ್ಲೂ ನಾವು ವಿಶೇಷತೆಯನ್ನು ಕಾಣಬಹುದು. ನಾವು ಭೇಟಿ ಕೊಡುವ ಪವಿತ್ರ ಸ್ಥಳಗಳೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಲ್ಲಿ ಜನರ, ಭಕ್ತಾದಿಗಳ ಹಸಿವನ್ನು ನೀಗಿಸುವ ಕಾರ್ಯ ನಿರಂತರ ನಡೆಯುತ್ತಲೇ ಇದೆ. ಇಂತಹ ಮಹಾ ಅನ್ನದಾನ ವ್ಯವಸ್ಥೆಯನ್ನು ಹೊಂದಿರುವ 7 ಬೃಹತ್ ಅನ್ನಛತ್ರಗಳ ಪಟ್ಟಿ ಇಲ್ಲಿದೆ.
ಶಿರಡಿಯ ಶ್ರೀ ಸಾಯಿ ದೇವಸ್ಥಾನದ ಪ್ರಸಾದಾಲಯ : ಶಿರಡಿ ಪ್ರಸಾದಾಲಯವು ಸೌರ ವಿದ್ಯುತ್ ಬಳಿಸಿ ಅಡುಗೆ ಮಾಡುವ ಭಾರತದ ಮೊದಲ ಭೋಜನ ಶಾಲೆ. ಪ್ರತಿನಿತ್ಯ ಇಲ್ಲಿ 40,000 ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ 40,000 ದಷ್ಟು ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿ ಬರುವ ಭಕ್ತಾದಿಗಳಿಗೆ ಪೊಟ್ಟಣಗಳಲ್ಲಿ ಉಚಿತ ಆಹಾರ ನೀಡಲಾಗುತ್ತದೆ. ಸೌರಶಕ್ತಿ ಬಳಕೆಗೆ 73 ಡಿಶ್ಗಳನ್ನು ಬಳಸಲಾಗುತ್ತದೆ.ಆ ಮೂಲಕ ಇಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ.
ಭಾರತೀಯ ರೈಲ್ವೇ : ಭಾರತವನ್ನು ಸಂಪರ್ಕಿಸುವ ಅತೀ ದೊಡ್ಡ ಸಾರಿಗೆ ವ್ಯವಸ್ಥೆಯಾದ ಭಾರತೀಯ ರೈಲ್ವೆಯು 6 ಲಕ್ಷ ಜನರಿಗೆ ಆಹಾರವನ್ನು ಪ್ರತಿ ದಿನ ಪೂರೈಸುತ್ತಿದೆ. ರೈಲ್ವೆಯಲ್ಲಿನ ಪ್ಯಾನ್ಟ್ರೀಗಳಿಗೆ ಆಹಾರ ಸರಬರಾಜು ಮಾಡಲಾಗುತ್ತದೆ. ಇದು ತನ್ನ ಗುಣಮಟ್ಟದ ಆಹಾರಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದು ಇಲ್ಲಿಯ ಕೆಲಸ ಮಾಡುವ ನೌಕರರು ಕೆಲಸಮಾಡುವಾಗ ಪ್ಲಾಸ್ಟಿಕ್ ಗ್ಲೌಸ್ಗಳನ್ನು ಬಳಸುತ್ತಾರೆ. ಅಲ್ಲದೇ ಉತ್ಕೃಷ್ಟ ಯಂತ್ರಗಳನ್ನು ಬಳಸಲಾಗುತ್ತದೆ.
ತಾಜ್ ಸಾಟ್ಸ್ ಕೆಟರಿಂಗ್ ಲಿಮಿಟೆಡ್ : ವಿಮಾನದಲ್ಲಿ ಸಂಚರಿಸುವ ಯಾತ್ರಾರ್ಥಿಗಳಿಗೆ ಆಹಾರ ಸರಬರಾಜು ಮಾಡುವಲ್ಲಿ ಭಾರತದಲ್ಲಿ ಮೊದಲನೇಯ ಮತ್ತು ಪ್ರಪಂಚದ 4ನೇ ಸಂಸ್ಥೆಯೆಂಬ ಹೆಗ್ಗಳಿಕೆ ತಾಜ್ ಸಾಟ್ಸ್ ಕೆಟರಿಂಗ್ ಲಿಮಿಟೆಡ್ ಸಂಸ್ಥೆಗಿದೆ. ಅಲ್ಲದೇ 2011ರವರೆಗೆ 1,00,00,000 ಕೆ.ಜಿ ಯಷ್ಟು ಆಹಾರವನ್ನು ದಿನಕ್ಕೆ ತಯಾರಿಸಲಾಗುತ್ತಿತ್ತು. ಈಗ ಅದರ ಪ್ರಮಾಣ ಏರಿಕೆಯಾಗಿದೆ.
ಅಮೃತ್ಸರ್ ದೇಗುಲ: ಸಿಕ್ ಸಮುದಾಯದ ಪ್ರಮುಖ ಕ್ಷೇತ್ರವಾದ ಅಮೃತಸರದಲ್ಲಿ ದಿನಕ್ಕೆ 2ಲಕ್ಷ ರೋಟಿ ಮತ್ತು 1.5 ಟನ್ ನಷ್ಟು ದಾಲ್ ಅನ್ನು ತಯಾರಿಸಲಾಗುತ್ತದೆ. ಇಲ್ಲಿಯ ಭೋಜನಾಲಯದಲ್ಲಿ 100 ಅಡುಗೆ ಸಿಲಿಂಡರ್ ಮತ್ತು 5000 ಕೆಜಿಯಷ್ಟು ಸೌದೆಯನ್ನು ಬಳಸಲಾಗುತ್ತದೆ.
ಇಸ್ಕಾನ್ ಅಕ್ಷಯ ಪಾತ್ರ : ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರವು ದಿನ ಒಂದಕ್ಕೆ 1,50,000 ಶಾಲಾ ಮಕ್ಕಳಿಗೆ ಊಟವನ್ನು ತಯಾರಿಸುತ್ತದೆ ಮತ್ತು ಇದನ್ನು ಕೇವಲ 5 ಗಂಟೆಗಳಲ್ಲಿ ವಿತರಿಸುತ್ತದೆ, ಹುಬ್ಬಳ್ಳಿಯಲ್ಲಿ ಇದರ ಮುಖ್ಯ ಘಟಕವಿದೆ. ಇಲ್ಲಿ ಸ್ಟೀಮ್ ಮೂಲಕ ಅಡುಗೆ ಮಾಡಲಾಗುತ್ತದೆ.
ಧರ್ಮಸ್ಥಳ ಅನ್ನಪೂರ್ಣ ಅನ್ನಛತ್ರ : ಕರ್ನಾಟಕದ ಧರ್ಮಸ್ಥಳ ದೇವಸ್ಥಾನದ ಅನ್ನಪೂರ್ಣ ಅನ್ನಛತ್ರದಲ್ಲಿ ನಿತ್ಯ 15 ರಿಂದ 2೦ ಸಾವಿರ ಜನರು ಪ್ರತೀ ದಿನ ಇಲ್ಲಿ ಅನ್ನಪ್ರಸಾದ ಸೇವೆಯನ್ನು ಪಡೆಯುತ್ತಾರೆ. ಇಲ್ಲಿ ನಿತ್ಯ 70 ಕ್ವಿಂಟಾಲ್ ಅಕ್ಕಿ, 15 ಕ್ವಿಂಟಾಲ್ ತರಕಾರಿ, 2000 ತೆಂಗಿನಕಾಯಿಗಳನ್ನು ಊಟ ತಯಾರಿಕೆಗೆ ಬಳಸಲಾಗುತ್ತದೆ. ಇಲ್ಲಿನ ಅನ್ನಛತ್ರದಲ್ಲಿ ಒಂದು ಬಾರಿಗೆ 2500 ಸಾವಿರ ಜನರು ಊಟಮಾಡಬಹುದಾದ ವ್ಯವಸ್ಥೆಯಿದೆ. ಇದು ಹೆಗ್ಗಡೆಯವರ ಮನೆತನದಿಂದ ನಡೆಸಿಕೊಂಡು ಬರುವ ಸೇವೆಯಾಗಿದೆ.
ತಿರುಪತಿ : ತಿರುಪತಿಯ ಶ್ರೀ ವೆಂಕಟೇಶ್ವರ ನಿತ್ಯ ಆನಂದಧಾಮ ಕಾರ್ಯಕ್ರಮದ ಅಂಗವಾಗಿ ಇಲ್ಲಿ ಪ್ರತಿದಿನ 15 ರಿಂದ 20 ಸಾವಿರ ಜನರಿಗೆ ಅನ್ನಪ್ರಸಾದ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.