ಗ್ರೀಸ್ ರಾಷ್ಟ್ರ ಆರ್ಥಿಕ ದಿವಾಳಿ ತನದತ್ತ ಸಾಗಿದೆ. ಗ್ರೀಸ್ನ ಜನರ ಐಷಾರಾಮಿ ಜೀವನವೇ ಇದಕ್ಕೆ ಕಾರಣ ಎನ್ನಬಹುದು, ಅಲ್ಲಿಯ ಸರಕಾರ 57 ವರ್ಷದಲ್ಲಿ ಎಲ್ಲರಿಗೂ ಪಿಂಚಣಿ ನೀಡುತ್ತಿತ್ತು. ಅಲ್ಲಿ ಅಪಾಯಕಾರಿ ವಲಯದಲ್ಲಿ ದುಡಿಯುವವರಿಗೆ 50 ವರ್ಷದಲ್ಲೇ ನಿವೃತ್ತಿ ಮತ್ತು ಪಿಂಚಣಿ ನೀಡಲಾಗುತ್ತಿತ್ತು. ಹೀಗೆ ತನ್ನ ಜನರಿಗೆ ಐಷಾರಾಮಿ ಜೀವನಕ್ಕೆ ಸರಕಾರವೇ ನಾಂದಿ ಹಾಡಿದಾಗಿತ್ತು.
ವೈದಕೀಯ ಸೌಲಭ್ಯ, ನಿರುದ್ಯೋಗಿಗಳಿಗೆ ವಿಶೇಷ ಸೌಲಭ್ಯ ಇವೆಲ್ಲದರಿಂದಲೇ ಸರಕಾರ ಈ ಸ್ಥಿತಿಗೆ ಬಂದಿದೆ. ಅಲ್ಲಿನ ಜನರ ಪ್ರಕಾರ ಸರಕಾರ ಯಾವುದೇ ಹಣವನ್ನು ಸಂಪಾದನೆ ಮಾಡದೇ ಕೇವಲ ಜನರು ತೆರಿಗೆಯಾಗಿ ನೀಡಿದ ಹಣವನ್ನೆ ಬಳಸಿಕೊಂಡಿದೆ. ಗ್ರೀಸ್ ಒಟ್ಟು 323 ಬಿಲಿಯನ್ ಯೂರೋಗಳಷ್ಟು ಮೊತ್ತದ ಸಾಲವನ್ನು ಹೊಂದಿದೆ ಎಂಬುದು ಆರ್ಥಿಕ ಪರಿಣಿತರು ಹೇಳುವಂತಹ ಮಾತು. ಈ ಹಣದಲ್ಲಿ ಶೇ.೧೦ರಷ್ಟನ್ನು ಐ.ಎಂ.ಎಫ್ ನಿಧಿಗೆ ನೀಡಬೇಕಾಗಿದೆ ಮತ್ತು ಶೇ.೬೦ರಷ್ಟನ್ನು ಯೂರೋ ಝೋನ್ಗೆ ನೀಡಬೇಕಾಗಿದೆ. ಅಲ್ಲದೇ ಅದು ಇನ್ನಿತರರಿಗೆ ಸಾಲವನ್ನು ವಾಪಾಸ್ ಮಾಡಬೇಕಾಗಿಯೂ ಇದೆ. ಈ ವಿದ್ಯಾಮಾನದಿಂದ ಜಾಗತಿಕ ಮಾರುಕಟ್ಟೆಯ ದೇಶಗಳಿಗೆ ಬಿಸಿತಟ್ಟಲಿದೆ. ಅದರಲ್ಲೂ ಐರೋಪ್ಯ ರಾಷ್ಟ್ರಗಳಿಗೆ ಸ್ಪಲ್ಪ ಹೆಚ್ಚೇ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಗ್ರೀಸ್ 180 ಪ್ರತಿಶತ ಸಾಲವನ್ನು ಹೊಂದಿದ್ದು, ಈ ಸಾಲದ ಹೊರೆಯಿಂದ ಹೊರಬರಬರುವುದು ಸಾಧ್ಯವಿಲ್ಲದ ಮಾತೇನಲ್ಲ. ಆದರೆ ಪ್ರಸ್ತುತ ಗ್ರೀಸ್ ಜಿಡಿಪಿ 2.5ಪ್ರತಿಶತವಾಗಿದ್ದು ಈಗ ಅದು ಸೊನ್ನೆ ಯಾಗಿದೆ. ಗ್ರೀಸ್ ದೇಶದ ಆರ್ಥಿಕತೆ ಪುನಃ ಚೇತರಿಸಿಕೊಳ್ಳಲು ಕನಿಷ್ಟ ಪಕ್ಷ ೨೦ ವರ್ಷ ಬೇಕಾಗಬಹುದು ಎಂದು ಆರ್ಥಿಕ ತಜ್ಞರ ಅಭಿಪ್ರಾಯ.
ಅಲ್ಲಿನ ಜನತೆಗೆ ಬೇಕಾದ ವಸ್ತುಗಳ ಪೂರೈಕೆಗಾಗಿ ಗ್ರೀಸ್ ಸಾಲಮಾಡಿತ್ತು. ಅದನ್ನು ಮರು ಪಾವತಿಸುವಲ್ಲಿ ಹೆಚ್ಚಿನ ಬಡ್ಡಿದರವನ್ನು ನೀಡುವುದು ಆ ದೇಶಕ್ಕೆ ಕಷ್ಟಸಾಧ್ಯವಾಗಿದೆ. ಸರಕಾರದ ಬಳಿ ಯಾವುದೇ ಆದಾಯ ಇಲ್ಲದಿರುದರಿಂದ ಆರ್ಥಿಕ ಸಮಸ್ಯೆ ಉಲ್ಭಣಿಸಿದೆ. ಸೇನಾ ಅಧಿಕಾರಿ ಮತ್ತು ಸೈನಿಕರಿಗೆ 40% ವೇತನ ಕಡಿಮೆಗೊಳಿಸಿ ಅದನ್ನು ಸೇನಾ ಭಧ್ರತೆಗೆ ಖರ್ಚುಮಾಡುತ್ತಿದೆ.
ಇತಂಹ ಹಲವು ಹೆಜ್ಜೆಗಳು ಗ್ರೀಸ್ ಅನ್ನು ದಿವಾಳಿಯನ್ನಾಗಿ ಮಾಡಿದೆ. ಅಲ್ಲದೆ ಹಳದಿಲೋಹ ಚಿನ್ನದ ಮೇಲೆಯೂ ಇದು ಪರಿಣಾಮ ಬೀರಿದ್ದು ಚಿನ್ನ ಬೆಲೆ ಕಡಿಮೆ ಯಾಗಬಹುದು ಎನ್ನಲಾಗುತ್ತಿದೆ. ಗ್ರೀಸ್ನ ದಿವಾಳಿತನವು ಐರೋಪ್ಯ ರಾಷ್ಟ್ರಗಳ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.