ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಮುನ್ನ ದಿನವಾದ ಇಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಪಾಕಿಸ್ಥಾನಕ್ಕೆ ಕಟು ಎಚ್ಚರಿಕೆಯನ್ನು ರವಾನಿಸಿದ್ದಾರೆ. 1999ರ ಕಾರ್ಗಿಲ್ ಯುದ್ಧದಂತಹ ದುಸ್ಸಾಹಸಕ್ಕೆ ಕೈ ಹಾಕದಂತೆ ನೆರೆಯ ರಾಷ್ಟ್ರಕ್ಕೆ ಸಂದೇಶ ರವಾನಿಸಿದ್ದಾರೆ.
“ಪಾಕಿಸ್ಥಾನ ಅಂತಹ ದುಸ್ಸಾಹಸವನ್ನು ಮತ್ತೆಂದೂ ಮಾಡುವುದಿಲ್ಲ ಎಂದು ಅಂದುಕೊಂಡಿದ್ದೇನೆ. ಅವರನ್ನು ಇಂತಹ ಪ್ರಯತ್ನದಲ್ಲಿ ಯಶಸ್ವಿಯಾಗಲು ಬಿಡುವುದಿಲ್ಲ, ಎಷ್ಟೇ ಎತ್ತರವನ್ನು ಅವರು ಆಕ್ರಮಿಸಿಕೊಳ್ಳಲಿ ಅದನ್ನು ವಾಪಾಸ್ ಪಡೆದೇ ತೀರುತ್ತೇವೆ. ಮತ್ತೊಮ್ಮೆ ಅವರಿಗೆ ಅಂತಹ ಪ್ರಯತ್ನ ಮಾಡಲು ಧೈರ್ಯ ಬರಲಾದರು” ಎಂದಿದ್ದಾರೆ.
“ಅಲರ್ಟ್ನಲ್ಲಿ ಇರುವುದು ಯಾವತ್ತೂ ಒಳ್ಳೆಯದು, ಅವರಿಗೆ ಪ್ರತ್ಯುತ್ತರ ನೀಡುವ ಸಾಮರ್ಥ್ಯ ನಮಗೂ ಇದೆ. ಅವರನ್ನು ಹೆಜ್ಜೆ ಹಿಂದಿಡುವಂತೆ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ” ಎಂದಿದ್ದಾರೆ.
ಪುಲ್ವಾಮ ಭಯೋತ್ಪಾದನಾ ದಾಳಿಯ ಬಗ್ಗೆ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಸತ್ಯದ ಬಗ್ಗೆ ನಮಗೆ ಅರಿವಿದೆ. ಯಾರ ಹೇಳಿಕೆಯನ್ನೂ ಕೇಳ ಬೇಕಾದ ಅಗತ್ಯ ನಮಗಿಲ್ಲ. ಅಂತಾರಾಷ್ಟ್ರೀಯ ಏಜೆನ್ಸಿಗಳಿಗಾಗಿ ಹೇಳಿಕೆ ನೀಡಬೇಕಾದ ಅನಿವಾರ್ಯತೆಯೂ ನಮಗಿಲ್ಲ, ಈಗಾಗಲೇ ಎಲ್ಲಾ ಸಾಕ್ಷಿಗಳನ್ನು ನಾವು ಒದಗಿಸಿದ್ದೇವೆ” ಎಂದಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳ ಜಾಗರೂಕತೆಯಿಂದಾಗಿ ಗಡಿ ಪ್ರದೇಶಗಳಲ್ಲಿ ಒಳನುಸುಳುವಿಕೆ ಕಡಿಮೆಯಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
“ಎರಡು ಕಾರಣಗಳಿಂದಾಗಿ ಒಳನುಸುಳುವಿಕೆ ಕಡಿಮೆಯಾಗಿದೆ. ಒಂದು, ಸೈನ್ಯವು ಎಚ್ಚರದಿಂದ ಕಾಯುತ್ತಿದೆ. ಎರಡನೆಯದು, ಗ್ರಿಡ್ ಅನ್ನು ಬಲಪಡಿಸಲು ನಾವು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದೇವೆ. ಒಂದು ವೇಳೆ ಪಾಕಿಸ್ಥಾನದ ಸೈನಿಕರು ಮತ್ತು ಭಯೋತ್ಪಾದಕರು ಎಲ್ಒಸಿ ಬಳಿ ಬಂದರೆ, ಅವರು ಶವವಾಗಿಯೇ ಹಿಂದಿರುಗಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ”ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.