ನವದೆಹಲಿ: 2019ರ ಜೂನ್ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 126 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದೆ. ಅಲ್ಲದೇ, ಕಳೆದ ಮೂರವರೆ ವರ್ಷದಲ್ಲಿ 27 ಭಯೋತ್ಪಾದಕ ಆರೋಪಿಗಳನ್ನು ಕೇಂದ್ರ ಗಡಿಪಾರು ಮಾಡಿದೆ ಎಂದಿದೆ.
ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ಅನುಸರಿಸುತ್ತಿದ್ದು, ಭಯೋತ್ಪಾದಕರನ್ನು ಸದೆ ಬಡಿಯಲು ಭದ್ರತಾ ಪಡೆಗಳು ಹೆಚ್ಚು ಪರಿಣಾಮಕಾರಿ, ಕ್ರಿಯಾಶೀಲ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಗೃಹಸಚಿವಾಲಯ ತಿಳಿಸಿದೆ.
ಮೋದಿ ಸರ್ಕಾರವು 2019 ರಲ್ಲಿ ಇಲ್ಲಿಯವರೆಗೆ, ಇಂಟರ್ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಝೇಶನ್ (ಇಂಟರ್ಪೋಲ್) ಮೂಲಕ 16 ಭಯೋತ್ಪಾದಕರನ್ನು ಯಶಸ್ವಿಯಾಗಿ ಬಂಧಿಸಿದೆ. 2018 ರಲ್ಲಿ ಈ ಜಾಗತಿಕ ಪೊಲೀಸ್ ಸಂಘಟನೆಯ ಮೂಲಕ 24 ಮಂದಿಯನ್ನು, 2017 ರಲ್ಲಿ 35 ಮತ್ತು 2016 ರಲ್ಲಿ 36 ಜನರನ್ನು ಬಂಧಿಸಿದೆ ಎಂದು ಮಾಹಿತಿಯನ್ನು ನೀಡಿದೆ.
2019 ರಲ್ಲಿ ಇಂಟರ್ಪೋಲ್ಗೆ ಅಂತಾರಾಷ್ಟ್ರೀಯ ಬಂಧನಕ್ಕಾಗಿ ಭಾರತವು 41 ರೆಡ್ ಕಾರ್ನರ್ ನೋಟಿಸ್ ಕಳುಹಿಸಿದೆ, ಅದರಲ್ಲಿ 32 ಅನ್ನು ಪ್ರಕಟಿಸಲಾಗಿದೆ. 2016 ರಲ್ಲಿ ಸಿಬಿಐ 91 ನೋಟಿಸ್ ಕಳುಹಿಸಿದ್ದು, ಅದರಲ್ಲಿ 87 ಅನ್ನು ಪ್ರಕಟಿಸಲಾಗಿದೆ. 2017 ರಲ್ಲಿ 94 ನೋಟಿಸ್ಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ 87 ಪ್ರಕಟಿಸಲಾಗಿದ್ದರೆ, 2018 ರಲ್ಲಿ 123 ನೋಟಿಸ್ಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಕೇವಲ 76 ನೋಟಿಸ್ಗಳನ್ನು ಪ್ರಕಟಿಸಲಾಗಿದೆ.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ 2014 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 963 ಭಯೋತ್ಪಾದಕರನ್ನು ಹತ್ತಿಕ್ಕಲಾಗಿದೆ. ಲೋಕಸಭೆಯಲ್ಲಿ ಮಂಗಳವಾರ ಗೃಹ ಸಚಿವಾಲಯ ಈ ಬಗ್ಗೆ ಲಿಖಿತ ಮಾಹಿತಿಯನ್ನು ನೀಡಿದೆ.
ಜಮ್ಮು ಮತ್ತು ಕಾಶ್ಮೀರವು 2018 ರಲ್ಲಿ ಒಟ್ಟು 318 ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿದೆ ಎಂದು ಸೋಮವಾರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ ಮಾಹಿತಿ ನೀಡಿದ್ದರು, ಇದು 2017 ರಲ್ಲಿ ನಡೆದ ದಾಳಿಯ ಸಂಖ್ಯೆಗಿಂತ 187 ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.