ನವದೆಹಲಿ: ಭಾರತೀಯ ರೈಲ್ವೆಯು 2020 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ, ಎಲ್ಲಾ ಲೊಕೊಮೊಟಿವ್ಗಳನ್ನು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಸಾಧನಗಳೊಂದಿಗೆ ಸಜ್ಜುಗೊಳಿಸಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ ಪ್ರಮುಖ ಜಂಕ್ಷನ್ಗಳಲ್ಲಿ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ನಿರ್ಧರಿಸಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ.
ರಿಯಲ್-ಟೈಮ್ ಟ್ರೈನ್ ಪೊಸಿಶನ್ ಇನ್ಫಾರ್ಮೇಶನ್ ಸಿಸ್ಟಮ್ (RTIS) ಯೋಜನೆಯ ಭಾಗವಾಗಿ, ರೈಲುಗಳ ನೈಜ ಸಮಯದ ಸ್ಥಾನವನ್ನು ಕಂಡುಹಿಡಿಯಲು ಜಿಪಿಎಸ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ರೈಲುಗಳ ಸಮಯಪ್ರಜ್ಞೆಯನ್ನು ಸುಧಾರಿಸಲು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದೊಂದಿಗೆ RTIS ಅನ್ನು ಜಾರಿಗೆ ತರಲಾಗುತ್ತಿದೆ ಎಂದು ಯಾದವ್ ಹೇಳಿದ್ದಾರೆ.
“ಕಂಟ್ರೋಲ್ ಚಾರ್ಟ್ಗಳನ್ನು ಸ್ವಯಂಚಾಲಿತವಾಗಿ ರೂಪಿಸಲು ರೈಲ್ವೆಯ ಕಂಟ್ರೋಲ್ ಆಫೀಸ್ ಅಪ್ಲಿಕೇಷನ್ (ಸಿಒಎ) ವ್ಯವಸ್ಥೆಗೆ ರೈಲಿನ ಸ್ಥಾನ ಮತ್ತು ವೇಗವನ್ನು ಇಸ್ರೋ ಉಪಗ್ರಹಗಳ ಮೂಲಕ ಪ್ರಸಾರ ಮಾಡಲಾಗುತ್ತದೆ. ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳು ಸೆಪ್ಟೆಂಬರ್ ವೇಳೆಗೆ ವೈಫೈ ಹೊಂದಿರುತ್ತವೆ” ಎಂದು ಯಾದವ್ ತಿಳಿಸಿದ್ದಾರೆ.
ಈಸ್ಟ್ ಕೋಸ್ಟ್ ರೈಲ್ವೆ (ಇಸಿಒಆರ್) ಕುರಿತು ಮಾತನಾಡಿದ ಅವರು, ಈ ಹಣಕಾಸು ವರ್ಷದಲ್ಲಿ 200 ಮಿಲಿಯನ್ ಟನ್ (ಎಂಟಿ) ಸರಕು ಸಾಗಿಸುವ ಗುರಿಯನ್ನು ಇಸಿಒಆರ್ ಹೊಂದಿದೆ ಎಂದಿದ್ದಾರೆ. ಒಡಿಶಾದಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಹಣವನ್ನು ಹಂಚಿಕೆ ಮಾಡಲಾಗುವುದು, ಭೂಸ್ವಾಧೀನ ಸಮಸ್ಯೆಗಳು ಈ ಹಣಕಾಸು ವರ್ಷದಲ್ಲಿ ಪರಿಹಾರಗೊಳ್ಳುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.