ಸೇನಾಪತಿ : ಪುಣಿಪುರದ ಸಾಂಗ್ಸೊಂಗ್ ಹಳ್ಳಿಯ ಕಲಾವಿದೆ ನೆಲಿ ಚಾಚಿಯಾ ಅವರು ಜೋಳದ ತ್ಯಾಜ್ಯಗಳನ್ನು ಬಳಸಿ ಗೊಂಬೆಗಳನ್ನು ತಯಾರಿಸುತ್ತಾರೆ.
ಪ್ರಯೋಜನವಿಲ್ಲ ಎಂದು ಎಲ್ಲರೂ ಮೆಕ್ಕೆಜೋಳದ ತ್ಯಾಜ್ಯಗಳನ್ನು ಎಸೆಯುತ್ತಾರೆ, ಆದರೆ ಈ ಕಲಾವಿದೆಗೆ ಆ ತ್ಯಾಜ್ಯವು ಅತ್ಯಂತ ಮೌಲ್ಯಯುತವಾಗಿದೆ. ಯಾಕೆಂದರೆ ಆಕೆ ಆ ತ್ಯಾಜ್ಯಗಳನ್ನು ಬಳಸಿ ಅತ್ಯಂತ ಸುಂದರವಾದ ಗೊಂಬೆಗಳನ್ನು ತಯಾರಿಸುತ್ತಾಳೆ.
ವೃತ್ತಿಯಲ್ಲಿ ಹೂವು ಮಾರುವವಳಾಗಿರುವ ಚಾಚಿಯಾ, ಅತ್ಯಂತ ಸುಂದರವಾದ ಡಾಲ್ಗಳನ್ನು ತಯಾರಿಸುತ್ತಾರೆ, ಈ ಡಾಲ್ಗಳು ಮೊದಲಿನಿಂದಲೂ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುತ್ತಾ ಬಂದಿದೆ.
ಗೊಂಬೆಗಳ ದೇಹದ ಭಾಗ, ಬಟ್ಟೆಯನ್ನು ಮೆಕ್ಕೆ ಜೋಳದ ಸಿಪ್ಪೆಗಳಿಂದ ಮತ್ತು ತಲೆಕೂದಲನ್ನು ಮೆಕ್ಕೆ ಜೋಳದ ರೇಷ್ಮೆಯಂತಿರುವ ನಾರಿನಿಂದ ತಯಾರಿಸುತ್ತಾರೆ. ಗೊಂಬೆಗಳನ್ನು ಸೂಕ್ತವಾದ ಒಣ ಹೂವುಗಳಿಂದ ಅಲಂಕಾರ ಮಾಡುತ್ತಾರೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಕಸ್ಟಮೈಸ್ ಮಾಡುತ್ತಾರೆ.
ಈಕೆ ಈ ಕಲೆಯನ್ನು ತಮ್ಮ ತಾಯಿಯಿಂದ ಬಳುವಳಿಯಾಗಿ ಪಡೆದುಕೊಂಡಿದ್ದಾರೆ. ಈಗ ಆಕೆ ತನ್ನ ಗೊಂಬೆ ಉದ್ಯಮವನ್ನು ವ್ಯಾಪಕವಾಗಿ ಮಾಡಲು ಶ್ರಮಿಸುತ್ತಿದ್ದಾರೆ.
“ಚಿಕ್ಕವಳಿದ್ದಾಗಲೇ ಈ ಗೊಂಬೆಗಳನ್ನು ಹೇಗೆ ತಯಾರಿಸಬೇಕೆಂದು ನನ್ನ ತಾಯಿ ನನಗೆ ಕಲಿಸಿಕೊಟ್ಟಿದ್ದಾರೆ. ನಾನು ಅದನ್ನು 2002ರಿಂದ ವೃತ್ತಿಯಾಗಿ ಮಾಡಿಕೊಂಡಿದ್ದೇನೆ. ನಾನು ದಿನಕ್ಕೆ 10-12 ಗೊಂಬೆಗಳನ್ನು ತಯಾರಿಸುತ್ತೇನೆ, ಒಂದು ಗೊಂಬೆಗೆ ವಿನ್ಯಾಸವನ್ನು ಅವಲಂಬಿಸಿ 200 ರಿಂದ 500 ರೂ. ನಿಗದಿಪಡಿಸುತ್ತೇನೆ” ಎಂದು ಚಾಚಿಯಾ ಹೇಳುತ್ತಾರೆ.
ಮಣಿಪುರ ಮಾತ್ರವಲ್ಲದೇ, ಇಂಫಾಲ, ನಾಗಾಲ್ಯಾಂಡ್, ಮುಂಬಯಿ, ಇತರ ಕಡೆಗಳಲ್ಲೂ ಇವರ ಗೊಂಬೆಗೆ ಭಾರೀ ಬೇಡಿಕೆ ಇದೆ. 2007ರಲ್ಲಿ ನವದೆಹಲಿಯಲ್ಲಿ ನಡೆದ ಫ್ಲೋರಾ ಎಕ್ಸ್ಪೋದಲ್ಲೂ ಇವರು ಭಾಗಿಯಾಗಿದ್ದಾರೆ. ಮಾತ್ರವಲ್ಲದೇ, ಮೈಸೂರು, ಭೋಪಾಲ್ ಮುಂತಾದ ಕಡೆ ಇವರು ವಿದ್ಯಾರ್ಥಿಗಳಿಗೆ ಗೊಂಬೆ ತಯಾರಿಸುವಿಕೆ ಮತ್ತು ಹೂವು, ಬಾಸ್ಕೆಟ್ ಅರೇಂಜ್ಮೆಂಟ್ಗಳನ್ನು ಕಲಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.