ಉತ್ತರಾಖಂಡ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಮಹಿಳಾ ಸಿಬ್ಬಂದಿಗಳು ಬದ್ರಿನಾಥದಲ್ಲಿ ಅಲಕನಂದ ನದಿ ದಂಡೆಗಳನ್ನು ಸ್ವಚ್ಛತಾ ಕಾರ್ಯಕ್ರಮದ ಭಾಗವಾಗಿ ಸ್ವಚ್ಛಗೊಳಿಸಿದರು.
ಮಂಗಳವಾರ ಸಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬ್ರಿಡ್ಜ್ನಿಂದ ಹಗ್ಗಗಳ ಮೂಲಕ ನದಿಗೆ ಇಳಿದು ಸ್ವಚ್ಛತೆಯನ್ನು ಮಾಡಿದ್ದಾರೆ. ಮಹಿಳಾ ಯೋಧೆಯರ ಈ ಕಾರ್ಯ ಭಾರೀ ಶ್ಲಾಘನೆಗೆ ಪಾತ್ರವಾಗಿದೆ.
ಇನ್ನೊಂದೆಡೆ ಬದ್ರಿನಾಥಕ್ಕೆ ಪ್ರವಾಸಿಗರ ದಂಡೇ ಆಗಮಿಸಿದ್ದು, ಅವರಿಗೆ ಸುರಕ್ಷತೆಯನ್ನು ಒದಗಿಸಿ ಅವರ ಚಾರ್ ಧಾಮ್ ಯಾತ್ರೆ ಸುಲಲಿತವಾಗಿರುವಂತೆ ಐಟಿಬಿಪಿ ಯೋಧರು ಮಾಡಿದ್ದಾರೆ.
ಮೇ 7 ರಂದು ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲನ್ನು ತೆರೆಯುವ ಮೂಲಕ ಚಾರ್ ಧಾಮ್ ಯಾತ್ರೆ ಆರಂಭಗೊಂಡಿತ್ತು. ಮೇ 9 ರಂದು ಕೇದಾರನಾಥದ ಬಾಗಿಲು ತೆರೆದುಕೊಂಡಿತು. ಬದ್ರೀನಾಥದ ಬಾಗಿಲು ಮೇ 10 ರಿಂದ ತೆರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.