ನವದೆಹಲಿ: ನೀತಿ ಆಯೋಗದ ಆರೋಗ್ಯ ಪೂರ್ಣ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬಿಹಾರ ಮತ್ತು ಉತ್ತರಪ್ರದೇಶಗಳು ಪಟ್ಟಿಯಲ್ಲಿ ಅತೀ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆ. ‘ಆರೋಗ್ಯಪೂರ್ಣ ರಾಜ್ಯಗಳು, ಪ್ರಗತಿಪೂರ್ಣ ಭಾರತ” ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಇಂದು ಬಿಡುಗಡೆಗೊಳಿಸಿದರು.
ಹರಿಯಾಣ, ಝಾರ್ಖಾಂಡ್ ಮತ್ತು ಅಸ್ಸಾಂ ಆರೋಗ್ಯದಲ್ಲಿ ಮಹತ್ವದ ಸುಧಾರಣೆಯನ್ನು ಕಾಣುತ್ತಿರುವ ರಾಜ್ಯಗಳಾಗಿ ಹೊರಹೊಮ್ಮಿವೆ, ಛತ್ತೀಸ್ಗಢ ಕಡಿಮೆ ಸುಧಾರಣೆ ಕಾಣುತ್ತಿರುವ ರಾಜ್ಯವಾಗಿದೆ.
ಆರೋಗ್ಯಪೂರ್ಣ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕೇರಳ ಪಡೆದರೆ ಬಳಿಕದ ಸ್ಥಾನವನ್ನು ಕ್ರಮವಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಹರಿಯಾಣ, ಛತ್ತೀಸ್ಗಢ, ಝಾರ್ಖಂಡ್, ಅಸ್ಸಾಂ, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ, ಒಡಿಶಾ, ಬಿಹಾರ, ಉತ್ತರ ಪ್ರದೇಶಗಳು ಪಡೆದುಕೊಂಡಿವೆ.
ಮಂಗಳವಾರ ಬಿಡುಗಡೆಯಾದ ವರದಿಯ ಎರಡನೇ ಆವೃತ್ತಿಯು, ಎರಡು ವರ್ಷಗಳ ಅವಧಿಯಲ್ಲಿ (2016-17 ಮತ್ತು 2017-18) ಆರೋಗ್ಯದ ವಿಷಯದಲ್ಲಿ ರಾಜ್ಯಗಳ ಒಟ್ಟಾರೆ ಕಾರ್ಯಕ್ಷಮತೆ ಮತ್ತು ವೃದ್ಧಿಸುತ್ತಿರುವ ಸುಧಾರಣೆಯನ್ನು ತೋರಿಸಿದೆ. ಆರೋಗ್ಯ ಫಲಿತಾಂಶಗಳು, ಆಡಳಿತ ಪ್ರಕ್ರಿಯೆಗಳು ಮತ್ತು ನೀತಿ ಮಧ್ಯಸ್ಥಿಕೆಗಳ ಪ್ರಭಾವವನ್ನು ವರದಿಯು ಗಣನೆಗೆ ತೆಗೆದುಕೊಂಡಿದೆ.
ಈ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಮತ್ತು ವಿಶ್ವಬ್ಯಾಂಕ್ನ ತಾಂತ್ರಿಕ ನೆರವಿನೊಂದಿಗೆ ಸಿದ್ಧಪಡಿಸಲಾಗಿದೆ.
The second edition of #NITIAayog‘s Healthy States, Progressive India report – #HealthIndex released by VC @RajivKumar1, CEO @amitabhk87, Secretary @MoHFW_India Preeti Sudan and NITI Adviser (Health) @IasAlok, today.
Know more: https://t.co/74UEjcYsuu pic.twitter.com/wUUEBkESTb
— NITI Aayog (@NITIAayog) June 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.