ಬಿಷ್ಕೆಕ್ : ಭಾರತ ಮತ್ತು ಚೀನಾ ದೇಶಗಳು ಎಂದಿಗೂ ಪರಸ್ಪರ ಅಪಾಯವನ್ನೊಡ್ಡುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದು, ಉಭಯ ದೇಶಗಳ ನಡುವೆ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಬೀಜಿಂಗ್ ನವದೆಹಲಿಯೊಂದಿಗೆ ಸೇರಲಿದೆ ಎಂದು ತಿಳಿಸಿದ್ದಾರೆ.
ಕರ್ಜೀಸ್ತಾನದ ರಾಜಧಾನಿ ಬಿಷ್ಕೆಕ್ ನಲ್ಲಿ ಗುರುವಾರ ನಡೆದ ಶಾಂಘೈ ಕೊಅಪರೇಶನ್ ಸಮಿತ್ ನ ಸೈಡ್ಲೈನ್ನಲ್ಲಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿ ಅವರು ಮಾತನಾಡಿದರು. ಎರಡನೇ ಬಾರಿಗೆ ಅಭೂತಪೂರ್ವ ದಿಗ್ವಿಜಯವನ್ನು ಸಾಧಿಸಿ ಭಾರತದ ಪ್ರಧಾನಿಯಾದ ಬಳಿಕ ಮೋದಿ ಮತ್ತು ಕ್ಸಿ ನಡುವೆ ನಡೆಯುತ್ತಿರುವ ಮೊದಲ ಮಹತ್ವದ ಮಾತುಕತೆ ಇದಾಗಿದೆ.
ಭಿನ್ನಾಭಿಪ್ರಾಯಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಭಾರತ ಮತ್ತು ಚೀನಾ ಪರಸ್ಪರ ಸಹಕಾರವನ್ನು ವೃದ್ಧಿಸಿಕೊಳ್ಳಬೇಕು, ಗಡಿಯಲ್ಲಿ ಸ್ಥಿರತೆಯನ್ನು ಕಾಪಾಡುವ ಸಲುವಾಗಿ ವಿಶ್ವಾಸ ನಿರ್ಮಾಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕ್ಸಿ ಅಭಿಪ್ರಾಯಿಸಿದ್ದಾರೆ ಎನ್ನಲಾಗಿದೆ.
“ಉಭಯ ದೇಶಗಳ ನಡುವೆ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಚೀನಾ ಭಾರತದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸಲು ಸಿದ್ಧವಿದೆ” ಎಂದು ಕ್ಸಿ ಹೇಳಿದ್ದಾರೆ.
ಅಭಿವೃದ್ಧಿಗೆ ಪರಸ್ಪರ ಅವಕಾಶಗಳನ್ನು ನೀಡುತ್ತೇವೆ ಮತ್ತು ಪರಸ್ಪರ ಬೆದರಿಕೆಗಳನ್ನು ಉಂಟು ಮಾಡುವುದಿಲ್ಲ” ಎಂಬ ಮೂಲಭೂತ ತೀರ್ಪುಗೆ ಭಾರತ ಮತ್ತು ಚೀನಾ ಅಂಟಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪರಸ್ಪರ ನಂಬಿಕೆ ವೃದ್ಧಿಸುವ, ಸಹಕಾರದ ಮೇಲೆ ಗಮನ ಕೇಂದ್ರೀಕರಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿಭಾಯಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ತಮ್ಮ ತಮ್ಮ ಅಭಿವೃದ್ಧಿಗೆ ಒಂದು ಸಕಾರಾತ್ಮಕ ಅಂಶವಾಗಿ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಚೀನಾ ಮತ್ತು ಭಾರತವು ವಿಶ್ವದ ಒಂದು ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಎರಡು ಉದಯೋನ್ಮುಖ ಮಾರುಕಟ್ಟೆಗಳು ಎಂದು ಬಣ್ಣಿಸಿರುವ ಅವರು, ಇವೆರಡೂ ದೇಶಗಳು ತ್ವರಿತ ಬೆಳವಣಿಗೆಯ ಪ್ರಮುಖ ಹಂತದಲ್ಲಿವೆ ಎಂದಿದ್ದಾರೆ.
ಒಟ್ಟಿಗೆ ಕೆಲಸ ಮಾಡುವುದರಿಂದ ಚೀನಾ ಮತ್ತು ಭಾರತ ಪರಸ್ಪರರ ಬೆಳವಣಿಗೆಯನ್ನು ಮಾತ್ರ ವೃದ್ಧಿಸಿಕೊಳ್ಳುವುದಿಲ್ಲ, ಬದಲಾಗಿ ಏಷ್ಯಾ ಮತ್ತು ಪ್ರಪಂಚದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಕೂಡಾ ಕೊಡುಗೆ ನೀಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.