ನವದೆಹಲಿ: ಭಾರತೀಯ ವಾಯುಸೇನೆಯ ಫೈಟರ್ ಪೈಲೆಟ್ಗಳು ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ಪ್ರಮುಖ ಗಗನಯಾನಿಗಳಾಗಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬಿಪಿನ್ ಪುರಿ ಹೇಳಿದ್ದಾರೆ.
‘ವಾಯುಸೇನೆಯ ಫೈಟರ್ ಪೈಲೆಟ್ಗಳ ದೊಡ್ಡ ತಂಡದಿಂದ ಇಬ್ಬರು ಅಥವಾ ಮೂವರ ಅತ್ಯುತ್ತಮ ಪಟುಗಳನ್ನು ಆರಿಸಿ ಗಗನಯಾನಕ್ಕೆ ಆಯ್ಕೆ ಮಾಡಲಾಗುವುದು’ ಎಂದಿದ್ದಾರೆ.
ಬೆಂಗಳೂರು ಮೂಲದ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್(ಐಎಎಂ)ಈಗಾಗಲೇ ಗಗನಯಾನಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಭಾರತ ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ 2022ರಲ್ಲಿ ಈ ಗಗನಯಾನ ಆರಂಭವಾಗಲಿದೆ.
ಗಗನಯಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ವಾಯುಸೇನೆ ಮತ್ತು ಇಸ್ರೋ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದೆ ಎನ್ನಲಾಗಿದೆ.
ಇಸ್ರೋದ ಜೊತೆಗೆ ಹಾರಾಟಕ್ಕೆ ಸಂಬಂಧಿಸಿದ ಡಾಟಾಬೇಸ್ ಆಯ್ಕೆ, ಏರೋಸ್ಪೇಸ್ ಮೆಡಿಸಿನ್ ಇತ್ಯಾದಿಗಳ ಬಗ್ಗೆ ಇಸ್ರೋದೊಂದಿಗೆ ಕಾರ್ಯನಿರ್ವಹಿಸುವಂತೆ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ಗೆ ಸರ್ಕಾರ ಸೂಚನೆ ನೀಡುತ್ತದೆ. ಗಗನಯಾನಕ್ಕೆ ಆರೋಗ್ಯವಂತ, ಸಮರ್ಥ ಸಿಬ್ಬಂದಿಗಳನ್ನು ಆಯ್ಕೆ ಮಾಡಲು ಇದು ಸಹಕಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.