ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುತ್ತಿರುವ ಸುಮಾರು 26 ಇಸ್ಲಾಂ ಬೋಧಕರ ಮೇಲೆ ಕೇಂದ್ರೀಯ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಕಣ್ಗಾವಲನ್ನು ಇಟ್ಟಿವೆ. ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ತರುವಾಯ ಇಸಿಸ್ ಮಾದರಿಯ ಸಂಘಟನೆಗಳು ಕೇರಳದಲ್ಲಿ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿತ್ತು.
ಸುಮಾರು 26 ಇಸ್ಲಾಂ ಬೋಧಕರು ಕೇರಳದಲ್ಲಿ, ತಮಿಳುನಾಡಿನಲ್ಲಿ ಧರ್ಮದ ಹೆಸರಿನಲ್ಲಿ ವಿಷ ಬೀಜವನ್ನು ಬಿತ್ತುತ್ತಿದ್ದಾರೆ. ತಮ್ಮ ಪ್ರಚೋದನಾಕಾರಿ ಮಾತುಗಳ ಮೂಲಕ ಯುವ ಜನತೆಯನ್ನು ಜಿಹಾದ್ ಮಾಡಲು ಪ್ರೇರೇಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಮಾರು 25-26 ಇಸ್ಲಾಂ ಬೋಧಕರು ಕೇರಳದಲ್ಲಿ ನಿರಂತರವಾಗಿ ಪ್ರಚೋದನಾಕಾರಿ ಬೋಧನೆಗಳನ್ನು ನೀಡುತ್ತಿದ್ದಾರೆ, ಧಾರ್ಮಿಕ ಮೂಲಭೂತವಾದಿತನ, ಜಿಹಾದಿ ಬೋಧನೆಗಳ ಬಗ್ಗೆ ಇವರು ಹೇಳಿಕೊಡುತ್ತಿದ್ದಾರೆ. ಇತರ ಧರ್ಮಗಳನ್ನು ಅವಹೇಳನ ಮಾಡುತ್ತಾರೆ. ಶರಿಯಾ ಕಾನೂನನ್ನು ಪ್ರಚುರಪಡಿಸುವಂತೆ ಯುವಜನತೆಗೆ ಪ್ರೇರಣೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್, ಸಿರಿಯಾ ಮುಂತಾದ ಭಯೋತ್ಪಾದನಾ ಸಂಘಟನೆಗಳಿಗೆ ಇವರು ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ.
ಬಂಧಿತರಾದ ಕೆಲವು ಉಗ್ರರು ಕೆಲವು ಇಂತಹ ಬೋಧಕರ ಹೆಸರನ್ನು ತನಿಖೆಯ ವೇಳೆ ಹೇಳಿದ್ದಾರೆ, ಇನ್ನೂ ಕೆಲವು ಬೋಧಕರನ್ನು ಅವರ ಭಾಷಣ, ಕಾರ್ಯಕ್ರಮಗಳ ವೀಡಿಯೋಗಳ ಮೂಲಕ ಪಟ್ಟಿ ಮಾಡಲಾಗಿದೆ ಎನ್ನಲಾಗಿದೆ.
ಭದ್ರತಾ ಮೂಲಗಳು ಈ ಇಸ್ಲಾಮಿಕ್ ಬೋಧಕರ ಹೆಸರನ್ನು ಬಹಿರಂಗಪಡಿಸಿಲ್ಲವಾದರೂ, ಅವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.