
ಧಾರವಾಡ: ಐತಿಹಾಸಿಕ ಪ್ರಪ್ರಥಮ -ಗೋಶಾಲಾ ಗೋಗ್ರಾಸ ಪರ್ಯಾಪ್ತತೆಯತ್ತ- ಭಾರತಾದ್ಯಂತ, ಕೃಷಿ ವೈಜ್ಞಾನಿಕ ಶಿಕ್ಷಣಪ್ರಬಲ ಸರ್ಕಾರಿ ಯೋಜನೆಗಳು, ಖಾಸಗಿ ಅವಕಾಶಗಳ ಪರಿಚಯ ಮತ್ತು ಕೃಷಿ ವೈಜ್ಞಾನಿಕ ಶಿಕ್ಷಣಪ್ರಬಲ, ಗೋಪಾಲಕರಿಗಾಗಿ ಸಂಪೋಷಕ(incubation) ಮುನ್ ಮಾರ್ಗದರ್ಶನ ಹೊಂದಿರುವ ಗೋ ಕಾರ್ಯಕಲ್ಪದ ಪ್ರಾಥಮಿಕ ಸಕಾರಾತ್ಮಕ ತರಬೇತಿ ಧಾರವಾಡದಲ್ಲಿ ನಡೆಯಿತು..
ನಮ್ಮ ದೇಶಾದ್ಯಂತ ಆವರಿಸಿರುವ, ತೀವ್ರಗೊಳ್ಳುತ್ತಿರುವ ಮೇವಿನ ಮತ್ತು ಮೇವಿನ ಬೀಜದ ಕೊರತೆ ನೀಗಿಸಿಕೊಳ್ಳುವ ನಿಟ್ಟಿನಲ್ಲಿ , ಮುಂದಿನ ವರುಷಗಳಲ್ಲಿ ಪೌಷ್ಟಿಕ ಗೋಗ್ರಾಸ ಉತ್ಪಾದನೆಯಲ್ಲಿ ದಶಕಾದ್ಯಂತ ಗೋಗ್ರಾಸ ಸುರಕ್ಷತೆ ಪಡೆಯುವಂತೆ , ಸ್ವಾವಲಂಬನೆ ಸಾಧಿಸುವ ಆಶಾವಾದ ಗುರಿಯೊಂದಿಗೆ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಗೋ ಗ್ರಾಸ ಪ್ರಭಾವಂ -ರಾಜ್ಯಮಟ್ಟದ ಶೈಕ್ಷಣಿಕ ಸಾಂಪರ್ಕಿಕ ಪ್ರಾಥಮಿಕ ತರಬೇತಿಯ ಮೊದಲನೇಯ ಮತ್ತು ಎರಡನೇಯ ಕಾರ್ಯಾಗಾರಗಳನ್ನು ಈಗಾಗಲೇ ಸಫಲವಾಗಿ ಹಮ್ಮಿಕೊಳ್ಳಲಾಗಿದೆ.

ಭಾರತಾದ್ಯಂತ “ಗೋಗ್ರಾಸ ಪ್ರಭಾವಂ” ಸಾಮಾಜಿಕ ಉಪಕ್ರಮವು , ಭಾರತ ಸರ್ಕಾರದ ಗಣ್ಯಸಂಶೋಧನಾ ಕೇಂದ್ರವಾದ ಐ.ಸಿ.ಎ.ಆರ್ (ICAR) – ಇಂಡಿಯನ್ ಗ್ರಾಸ್‌ಲ್ಯಾಂಡ್ ಎಂಡ್ ಫಾಡರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (IGFRI) ಪ್ರಧಾನ ಮಾರ್ಗದರ್ಶಕ ಸಹಯೋಗದೊಂದಿಗೆ , ಇಂಡಿಯನ್ ಫಾರೆಸ್ಟ್ ಸರ್ವೀಸ್ (IFS) ಸಹಕಾರದೊಂದಿಗೆ , ಪಶುಸಂಗೋಪನಾ ಇಲಾಖೆ ಹಾಗೂ ಕರ್ನಾಟಕ ಮಿಲ್ಕ್ ಫೆಡೆರೇಶನ್ ಯೋಜನೆಗಳ ಸಲಹೆಯೊಂದಿಗೆ (KMF) ಭಾರತಾಭಿವೃದ್ಧಿಗಾಗಿ ಈ ಮಹತ್ವದ ಕಾರ್ಯಾಗಾರ ಆಯೋಜನೆಗೊಂಡಿತ್ತು . ದೇಶದ ಉನ್ನತ ವೈಜ್ಞಾನಿಕ ಸಂಶೋಧಕರು ಮತ್ತು ಗ್ರಾಮ ವಿಕಸನ ಕಾರ್ಯಕರ್ತರು ಒಟ್ಟಾಗಿ ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾರ್ಯನಿರತರಾಗಿರುತ್ತಾರೆ .

ಗೋಗ್ರಾಸ ಕೊರತೆಯ ಆತಂಕಕಾರಿ ಅಂಕಿ-ಅಂಶಗಳು
ಪ್ರಸ್ತುತ ಗೋಪಾಲನೆಯಲ್ಲಿ ಎದುರಾಗುತ್ತಿರುವ ಕಠಿಣ ಪರಿಸ್ಥಿತಿಗಳ ಮೇಲ್ನೋಟ ತೆರೆ :
* ಪೌಷ್ಟಿಕಾಂಶದ ಕೊರತೆ: ಸರ್ಕಾರಿ ಮೂಲಗಳ ಪ್ರಕಾರ ದೇಶದ ಪ್ರತಿ 10 ರಲ್ಲಿ 4 ಹಸುಗಳಿಗೆ ಪೌಷ್ಟಿಕ ಆಹಾರ ಉಪಲಬ್ಧವಿಲ್ಲಾ. ಇನ್ನು ಸಾಮಾಜಿಕ ಸಂಶೋಧನಾ ವರದಿಗಳ ಪ್ರಕಾರ ಪ್ರತಿ 10 ಗೋವುಗಳಲ್ಲಿ 6.5 ಗೋವುಗಳು ತೀವ್ರ ಪೌಷ್ಟಿಕಾಂಶದ ಕೊರತೆಯಿಂದ ಬಳಲುವಂತಾಗಿರುವುದು.
* ಕುಸಿಯುತ್ತಿರುವ ಹಾಲಿನ ಇಳುವರಿ: ಮೇವಿನ ಕೊರತೆಯಿರುವ ಪ್ರಾಂತ್ಯಗಳಲ್ಲಿ ಹಸುಗಳ ಆರೋಗ್ಯ ಕ್ಷೀಣಿಸುತ್ತಿದ್ದು, ಕರು ಹಾಕುವುದು ಕಡಿಮೆಯಾಗಿದೆ.
ಬಹುತೇಕ ಗೋಗಳಲ್ಲಿ ಪಶು ಆಹಾರ ಕೊರತೆಯಿಂದ ಹಾಲಿನ ಉತ್ಪಾದನೆ ಕೇವಲ 1 ರಿಂದ 1.5 ಲೀಟರ್‌ಗೆ ಸೀಮಿತವಾಗಿದೆ.
* ಕಣ್ಮರೆಯಾಗುತ್ತಿರುವ ಗೋಮಾಳಗಳು: ಭಾರತಾದ್ಯಂತ ಸಾಮುದಾಯಿಕ ಗೋವುಗಳ ಬಳಕೆಗಾಗಿ ಮೀಸಲಾಗಿರುವ ಗೋಮಾಳಗಳು 50% ರಷ್ಟು ಕಡಿಮೆಯಾಗಿದ್ದರೆ, ದಕ್ಷಿಣ ಭಾರತದಲ್ಲಿ ಇದು 60% ಕ್ಕಿಂತ ಹೆಚ್ಚು ನಶಿಸಿ ಬೆಳೆಯಿಲ್ಲದ ಹಾಳು ಭೂಮಿಯಾಗಿರುವುದು.
ಪಂಚಾಯತಿಯಲ್ಲಿ ಗೋಮಾಳವಾಗಿ ಉಳಿದಿರುವ ಜಾಗದಲ್ಲೂ ಗೋಗ್ರಾಸ ಉತ್ಪಾದನೆ ಕಂಡು ಬರುವುದು ವಿರಳವಾಗಿದೆ .
* ಆರ್ಥಿಕ ಹೊರೆ ಮತ್ತು ಆಮದು: ಮಾರುಕಟ್ಟೆಯಲ್ಲಿ ಗೋಗ್ರಾಸದ ಬೇಡಿಕೆ 35% ಹೆಚ್ಚಿದ್ದರೂ, ಉತ್ಪಾದನೆ, ಕೇವಲ 5% ರಷ್ಟು ಮಾತ್ರ ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ. ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರ ₹5,988 ಕೋಟಿ ವೆಚ್ಚದಲ್ಲಿ ವಿದೇಶದಿಂದ ಮೇವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಒದಗಿರುವುದು. ಮುಂದಿನ ದಿನಗಳಲ್ಲಿ ಇದರ ಬೆಲೆ 200% ರಿಂದ 300% ಹೆಚ್ಚಾಗುವ ನಿರೀಕ್ಷೆಯಿದ್ದು, ಇದು ರೈತರಿಗೆ ಭಾರಿ ಹೊರೆಯಾಗಲಿದೆ.
ಗ್ರಾಮೀಣ ಆರ್ಥಿಕತೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲಿನ ಪರಿಣಾಮ:
ದೇಶದಲ್ಲಿ ಹಸು ಸಾಕಾಣಿಕೆಯಲ್ಲಿ ತೊಡಗಿರುವವರಲ್ಲಿ 91% ರಷ್ಟು ಜನರು ಆರ್ಥಿಕವಾಗಿ ದುರ್ಬಲರಾಗಿರುವ, ಸ್ವಂತ ನೆಲವಿಲ್ಲದ ಕೃಷಿ ಕಾರ್ಮಿಕರಾಗಿರುತ್ತಾರೆ . ಅಲ್ಲದೆ, 50% ಕ್ಕಿಂತ ಹೆಚ್ಚು ಗ್ರಾಮೀಣ ಹಿಂದುಳಿದ ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಇದುವೇ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಭದ್ರತೆಯ ಮೂಲವಾಗಿದೆ. ಮಳೆ-ಬೆಳೆ ನಂಬಿದ ಗ್ರಾಮೀಣ ಕುಟುಂಬಗಳಿಗೆ 25% ಆರ್ಥಿಕ ಬೆಂಬಲ ನೀಡುವ ಈ ಉದ್ಯೋಗ ವಲಯ ಇಂದು ಸಂಕಷ್ಟದಲ್ಲಿರುವುದನ್ನು ಕಾಣಬಹುದಾಗಿದೆ.ಮೇವಿನ ಬೆಲೆ ಏರಿಕೆಯಿಂದಾಗಿ ರೈತರು ಗೋವುಗಳನ್ನು ತ್ಯಾಗ ಮಾಡುತ್ತಿದ್ದು, ಇದು ಗೋಶಾಲೆಗಳ ಮೇಲಿನ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತಿದೆ.
ಮತ್ತೊಂದೆಡೆ, ಅತಿ ಹೆಚ್ಚು ಹಾಲು ಪಡೆಯಲು ಹಸುಗಳಿಗೆ ಅಪಾಯಕಾರಿ ಸಿಂಥೆಟಿಕ್ ಹಾರ್ಮೋನ್ ಇಂಜೆಕ್ಷನ್‌ಗಳನ್ನು ನೀಡಲಾಗುತ್ತಿದೆ. ಈ ಹಾಲನ್ನು ಸೇವಿಸುವ ಜನರಲ್ಲಿ ಕ್ಯಾನ್ಸರ್, ಬಂಜತನ, ಗರ್ಭಪಾತ, ಸಕ್ಕರೆ ಕಾಯಿಲೆ, ಹಾರ್ಮೋನ್ ಏರುಪೇರು ಮತ್ತು ಮಾನಸಿಕ ಖಿನ್ನತೆಯಂತಹ ಗಂಭೀರ ಕಾಯಿಲೆಗಳು ಹೆಚ್ಚಾಗುತ್ತಿರುವುದು ಆರೋಗ್ಯ ಸಂಶೋಧಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಮೇವಿನ ಕೊರತೆಯಿಂದಾಗಿ ಸಾವಯವ ಕೃಷಿಗಾಗಿ ಅತ್ಯಗತ್ಯವಾದ ಸೆಗಣಿಯ ಗುಣಮಟ್ಟ ಮತ್ತು ಪ್ರಮಾಣವೂ ಕುಗ್ಗಿರುವುದು.
ಗೋಶಾಲಾ, ಗೋಗ್ರಾಸ ಪರ್ಯಾಪ್ತತೆ ಮತ್ತು ಗೋಗ್ರಾಸ ಸ್ವಾವಲಂಬನೆಯತ್ತ “ಗೋ ಗ್ರಾಸ ಪ್ರಭಾವಂ” ಹೆಜ್ಜೆ
ಈ ಎಲ್ಲ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ “ಗೋ ಗ್ರಾಸ ಪ್ರಭಾವಂ” ಕಾರ್ಯಕಾರಿಣಿ ರೂಪಿಸಲಾಗಿದೆ. ಕಡಿಮೆ ನೀರು ಮತ್ತು ಸಾಮಾನ್ಯ ಭೂಮಿಯಲ್ಲಿ ಸುಲಭವಾಗಿ, ಪ್ರಾಕೃತಿಕವಾಗಿ ಬೆಳೆಯಬಹುದಾದ ಪೌಷ್ಟಿಕ ಗೋಗ್ರಾಸದ ತಳಿಗಳನ್ನು ಕೃಷಿ ಕೇಂದ್ರೀಕೃತ ವೈಜ್ಞಾನಿಕ ಸಂಶೋಧನಾತ್ಮಕವಾಗಿ ವಿಶಿಷ್ಟವಾಗಿ ಅಭಿವೃದ್ಧಿಪಡಿಸಲಾಗಿರುವುದು, ಪ್ರಾಂತ ಪ್ರತ್ಯೇಕ ಗೋ ಗ್ರಾಸ ಬೆಳೆ ಮತ್ತು ಬೀಜ ಮಾಹಿತಿಯನ್ನು ನೀಡಲಾಗುತ್ತಿದೆ . ಈ ಯೋಜನೆಯಡಿ ಗೋಪಾಲಕರಿಗೆ ಗೋಗ್ರಾಸ ಸಾಕಾಣಿಕೆ ತರಬೇತಿ , ಉತ್ತಮ ಮಟ್ಟದ ಬೀಜಗಳು, ಆಧುನಿಕ ಸುಧಾರಿತ ಸಲಕರಣೆಗಳ ಬಳಕೆ , ಸರ್ಕಾರಿ ಮತ್ತು ಸಹಕಾರ ಸಂಘ ಯೋಜನೆಗಳನ್ನು ಗ್ರಾಮ-ಗ್ರಾಮಕ್ಕೂ ಮತ್ತು ಗೋ- ಗೋವಿಗೂ ತಲುಪಿಸುವ ಹೊಣೆಗಾರಿಕೆ ವಹಿಸಿರುತ್ತಾರೆ .
ವಿಶೇಷವೆಂದರೆ, ಈ ಸಹಕಾರ ಯೋಜನೆಯಡಿ ಗೋಶಾಲೆಗಳು ಮತ್ತು ಕೃಷಿಕರು ಕೇವಲ ತಮ್ಮ ಹಸುಗಳಿಗಷ್ಟೇ ಅಲ್ಲದೆ, ತಮ್ಮ ಗ್ರಾಮದ ಭೂ ರಹಿತ ಬಡ ರೈತರ ಮತ್ತು ಸಮುದಾಯದ ದೇಗುಲದ ಹಸುಗಳಿಗಾಗಿಯೂ ಗೋಗ್ರಾಸ ಒದಗಿಸುವ ಸಂಕಲ್ಪ ತೊಟ್ಟಲ್ಲಿ ಅಂಥಹಾ ಸಹಯೋಗಿ ಗ್ರಾಮಗಳಿಗೆ ಹೆಚ್ಚುವರಿ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಒದಗಿಸಲಾಗುವುದು. ಒಗ್ಗೂಡಿರುವ ಗ್ರಾಮಗಳೇ ಸಮೃದ್ಧ ಗ್ರಾಮಗಳು ! ವೃದ್ಧ ಹಸುಗಳನ್ನು ಸೇವಿಸುತ್ತಿರುವ ಗೋಶಾಲಾ ಗೋಗ್ರಾಸ ಪರ್ಯಾಪ್ತತೆಯತ್ತ ತರಬೇತಿಯ ನೋಂದಣಿ ಪ್ರಕ್ರಿಯೆ ಚಾಲನೆಯಲ್ಲಿದೆ. ಹತ್ತಾರು ಜಿಲ್ಲೆಗಳಿಂದ ಹಲವು ಸಾವಿರ ಗೋಗಳ ಅನುಕೂಲಕ್ಕಾಗಿ,ಆಹ್ವಾನಿತರಿಗಾಗಿ ಜೂನ್ 30 ರಂದು ಮತ್ತು ಅಕ್ಟೋಬರ್ 6 ರಂದು ರಾಜ್ಯಮಟ್ಟದ ಎರಡು ಕಾರ್ಯಾಗಾರ ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಆವರಣದಲ್ಲಿ ಈಗಾಗಲೇ ಸಂಪನ್ನವಾಗಿರುವುದು.
ಸಂಪೂರ್ಣ ಪಾರದರ್ಶಕತೆಯಿಂದ ಕೂಡಿರುವ ಗೋಗ್ರಾಸ ಪ್ರಭಾವಂ ಯೋಜನೆಯು ‘ಮೊದಲು ನೋಂದಣಿಯಾದವರಿಗೆ ಮೊದಲ ಆದ್ಯತೆ’ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಲಿರುವುದು.
ತಮ್ಮ ಸುತ್ತಮುತ್ತಲಿನ ಸ್ವಯಂಸೇವಕ ಸಂಘಗಳು ,ದೇಗುಲಗಳು, ಗೋಶಾಲೆಗಳ ಒಕ್ಕೂಟಗಳಲ್ಲಿ ತೀವ್ರ ಗೋಗ್ರಾಸದ ಕೊರತೆ ಇದ್ದಲ್ಲಿ, ಅಥವಾ ಪೌಷ್ಟಿಕಾಂಶ ಹೆಚ್ಚಿಸುವ ಹಂಬಲ ಇದ್ದಲ್ಲಿ , ನೋಂದಣಿಯಾಗಿಸುವುದು .
ಹೆಚ್ಚಿನ ಮಾಹಿತಿ ಹಾಗೂ ಸಂಸ್ಥೆಯ ಹೆಸರು ಮಾಹಿತಿಗಳನ್ನು ನೋಂದಾಣಿಸಲು “ಗೋ ಗ್ರಾಸ ಪ್ರಭಾವಂ” ಅಧಿಕೃತ ಸಹಾಯವಾಣಿ ಸಂಖ್ಯೆ 6363991092 /8618570784/ 9538011632 ಗೆ ಕರೆ ಮಾಡುವುದು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



