ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು)ವು ತನ್ನ ಮಾಜಿ ಪ್ರೊಫೆಸರ್ ಮತ್ತು ಕಾಂಗ್ರೆಸ್ ಲೋಕಸಭಾ ಸದಸ್ಯ ಅಂಗೋಮ್ಚಾ ಬಿಮೋಲ್ ಅಕೋಯ್ಜಾಮ್ ಅವರನ್ನು ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ನಡೆಸಿದ ಆಂತರಿಕ ತನಿಖೆಯ ನಂತರ ಸೇವೆಯಿಂದ ವಜಾಗೊಳಿಸಿದೆ.
ಈ ಪ್ರಕರಣವನ್ನು ಬಳಸಿಕೊಂಡು ಬಿಜೆಪಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ‘ಸ್ಮ್ಯಾಶ್ ಪ್ಯಾಟ್ರಿಯಾರ್ಕಿ ’ ಘೋಷಣೆಯಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸುತ್ತಿದೆ. ಜೆಎನ್ಯು ವೈಸ್-ಚಾನ್ಸೆಲರ್ ಸಂತಿಶ್ರೀ ಡಿ. ಪಂಡಿತ್ ಅವರು ಅಕ್ಟೋಬರ್ 9ರಂದು ಹೊರಡಿಸಿದ ಆದೇಶದಲ್ಲಿ, ವಿಶ್ವವಿದ್ಯಾಲಯದ ಆಂತರಿಕ ಸಮಿತಿ ತನಿಖೆ ನಡೆಸಿ ಪ್ರಮುಖ ಶಿಕ್ಷೆಯನ್ನು ಶಿಫಾರಸು ಮಾಡಿದ ನಂತರ ಅಕೋಯ್ಜಾಮ್ ಅವರನ್ನು ತಕ್ಷಣದಿಂದ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ವರದಿಗಳ ಪ್ರಕಾರ, 11 ಮಹಿಳಾ ವಿದ್ಯಾರ್ಥಿನಿಯರು ದೂರುಗಳನ್ನು ಸಲ್ಲಿಸಿದ್ದರು. ಆರೋಪಗಳಲ್ಲಿ, ಅವರು ವಿದ್ಯಾರ್ಥಿನಿಯರನ್ನು ತಮ್ಮ ನಿವಾಸಕ್ಕೆ ಕರೆಸಿ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದರು ಮತ್ತು ತರಗತಿಗಳಲ್ಲಿ ಅನುಚಿತ ಹೇಳಿಕೆಗಳನ್ನು ನೀಡುತ್ತಿದ್ದರು ಎಂದು ಸೇರಿವೆ.
ಬಿಜೆಪಿ ಮಹಿಳಾ ಮೋರ್ಚಾ ಈ ಪ್ರಕರಣವನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದು, ಅಕ್ಟೋಬರ್ 12ರಂದು ‘ನಾರಿ ಶಕ್ತಿ ಹುಂಕಾರ ಆಂದೋಲನ’ ಅಡಿಯಲ್ಲಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದೆ. ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿ ಅವರ ‘ಸ್ಮಾಶ್ ದಿ ಪ್ಯಾಟ್ರಿಯಾರ್ಕಿ’ ಅಭಿಯಾನವು ಕೇವಲ ರಾಜಕೀಯ ಘೋಷಣೆಯಾಗಿದೆಯೇ ಎಂದು ಪ್ರಶ್ನಿಸಿದರು. “ಕಾಂಗ್ರೆಸ್ನ ಸ್ತ್ರೀವಾದ ಹ್ಯಾಶ್ಟ್ಯಾಗ್ನಿಂದ ಪ್ರಾರಂಭವಾಗಿ, ಜವಾಬ್ದಾರಿ ನಿಗದಿಪಡಿಸುವಲ್ಲಿ ನಿಲ್ಲುತ್ತದೆಯೇ?” ಎಂದು ಅವರು ಕೇಳಿದರು.
ಪಕ್ಷವು ಅಕೋಯ್ಜಾಮ್ ಅವರನ್ನು ಕಾಂಗ್ರೆಸ್ ಅಮಾನತುಗೊಳಿಸಬೇಕು ಮತ್ತು ಆಂತರಿಕ ತನಿಖೆ ನಡೆಸಬೇಕು ಎಂದು ಬಿಜೆಪಿ ಬೇಡಿಕೆ ಇಟ್ಟಿದೆ.ಅಕೋಯ್ಜಾಮ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಣಿಪುರದ ಒಳ ಮಣಿಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದಿದ್ದಾರೆ. ಇದಕ್ಕೂ ಮೊದಲು ಅವರು ಜೆಎನ್ಯುವಿನ ಸೋಶಿಯಲ್ ಸೈನ್ಸಸ್ ಸ್ಕೂಲ್ನಲ್ಲಿ ಪ್ರೊಫೆಸರ್ ಆಗಿದ್ದರು. ಎಬಿವಿಪಿ ಸಂಘಟನೆಯು ವಜಾಗೊಳಿಸುವಿಕೆಯನ್ನು ಸ್ವಾಗತಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟಿದೆ.
ಈ ವಿಷಯವು ಮಹಿಳೆಯರ ಸುರಕ್ಷತೆ ಮತ್ತು ರಾಜಕೀಯ ಪಕ್ಷಗಳ ಜವಾಬ್ದಾರಿಯ ಬಗ್ಗೆ ರಾಷ್ಟ್ರೀಯ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ ಕಾಂಗ್ರೆಸ್ ಇನ್ನೂ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



