ನವದೆಹಲಿ: ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಸಂಪೂರ್ಣ ತಂಡವನ್ನು 45 ದಿನಗಳೊಳಗೆ ಸರ್ವನಾಶ ಮಾಡಲಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಯಾವೊಬ್ಬ ಭಯೋತ್ಪಾದಕನೂ ಈಗ ಬದುಕಿಲ್ಲ ಎಂದು ವರದಿಗಳು ತಿಳಿಸಿವೆ.
2019ರಲ್ಲಿ ಭಾರತೀಯ ಸೇನೆಯು ಒಟ್ಟು 66 ಉಗ್ರರನ್ನು ಹತ್ಯೆ ಮಾಡಿವೆ. ಇದರಲ್ಲಿ 27 ಮಂದಿ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು. ಇದರಲ್ಲಿ 19 ಮಂದಿಯನ್ನು ಪುಲ್ವಾಮ ದಾಳಿಯ ಬಳಿಕ ಹತ್ಯೆ ಮಾಡಲಾಗಿದೆ.
ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ ನಾಲ್ಕು ಮಂದಿ ಜೈಶೇ ಉಗ್ರರನ್ನು ಹತ್ಯೆ ಮಾಡಲಾಗಿದೆ. ಇನ್ನು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಸತ್ತವರ ಪೈಕಿ ಮುಶಾಶಿರ್ ಅಹ್ಮದ್ ಖಾನ್ ಮತ್ತು ಸಜ್ಜದ್ ಭಟ್ ಕೂಡ ಸೇರಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಜೈಶೇ ಜೊತೆ ಸಂಪರ್ಕ ಹೊಂದಿದ್ದ 40 ಮಂದಿಯನ್ನು ವಿಚಾರಣೆಗೊಳಪಡಿಸಿದ ಕಾರಣದಿಂದಾಗಿ ದಾಳಿಕೋರರ ಹತ್ಯೆ ಮಾಡುವುದು ಸಾಧ್ಯವಾಗಿದೆ.
ಇದರ ಜೊತೆಗೆ, ನಿಸಾರ್ ಅಹ್ಮದ್ ತಾಂತ್ರೇಯ ಮತ್ತು ಸಜ್ಜದ್ ಎಂಬ ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ. ಇವರು ಪುಲ್ವಾಮ ದಾಳಿ ನಡೆಸಿದ ಸುಸೈಡ್ ಬಾಂಬರ್ ಆದಿಲ್ ಅಹ್ಮದ್ ದಾರ್ಗೆ ನಿರ್ದೇಶನ ನೀಡುತ್ತಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.