ನವದೆಹಲಿ: ಜನವರಿ ತಿಂಗಳ ಜಿಎಸ್ಟಿ ಸಂಗ್ರಹ ಕಳೆದ ತಿಂಗಳಿಗಿಂತ ಹೆಚ್ಚಾಗಿದ್ದು, ರೂ.1ಲಕ್ಷ ಕೋಟಿಯನ್ನು ಮೀರಿದೆ. 2018ರ ಡಿಸೆಂಬರ್ನಲ್ಲಿ ರೂ.94,725 ಕೋಟಿ ಸಂಗ್ರಹವಾಗಿತ್ತು. 2018ರ ಜನವರಿಯಲ್ಲಿ ರೂ.89,825 ಕೋಟಿ ಸಂಗ್ರಹವಾಗಿತ್ತು.
ಗ್ರಾಹಕರ ಮೇಲಿನ ತೆರಿಗೆ ಹೊರೆಯನ್ನು ಕುಗ್ಗಿಸಲು ತೆಗೆದುಕೊಂಡ ಹಲವಾರು ಕ್ರಮಗಳ ನಡುವೆಯೂ ಜಿಎಸ್ಟಿ ಸಂಗ್ರಹ ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.
ಟ್ವಿಟ್ ಮಾಡಿರುವ ಅದು, ‘ಫೆ.2ರಂದು ಜನವರಿಯಲ್ಲಿ ಸಂಗ್ರಹವಾದ ಜಿಎಸ್ಟಿಯ ಸಂಪೂರ್ಣ ವಿವರವನ್ನು ಬಹಿರಂಗಪಡಿಸುತ್ತೇವೆ. ಆದರೆ ಜನವರಿಯಲ್ಲಿ ಎರಡನೇ ಬಾರಿಗೆ ಜಿಎಸ್ಟಿ ಸಂಗ್ರಹ ರೂ.1ಲಕ್ಷ ಕೋಟಿಯನ್ನು ದಾಟಿದೆ’ ಎಂದಿದೆ.
ಡಿಸೆಂಬರ್ನಲ್ಲಿ ಜಿಎಸ್ಟಿ ಮಂಡಳಿಯು 23 ವಸ್ತುಗಳ ಮೇಲಿನ ಜಿಎಸ್ಟಿಯನ್ನು ಕಡಿತಗೊಳಿಸಿತ್ತು, ಜನವರಿ 1ರಿಂದ ಇದು ಅನುಷ್ಠಾನಕ್ಕೆ ಬಂದಿತ್ತು. ಆದರೆ ಈ ಕಡಿತ ಜಿಎಸ್ಟಿ ಸಂಗ್ರಹದ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ ಎಂದು ವಿತ್ತ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.