ಮಹಿಳಾ ಸುರಕ್ಷತೆ ಎಂಬುದು ಕೇವಲ ಚರ್ಚಾ ವಿಷಯವಾಗುತ್ತಿದೆಯೇ ಹೊರತು, ಅನುಷ್ಠಾನಕ್ಕೆ ಬರುತ್ತಿಲ್ಲ. ರಾಜಕಾರಣಿಗಳು, ಸರ್ಕಾರ ಮಹಿಳಾ ಸುರಕ್ಷತೆಯನ್ನು ಮಾಡುತ್ತದೆ ಎಂದು ಕಾಯುತ್ತಾ ಕುಳಿತುಕೊಳ್ಳುವಷ್ಟು ತಾಳ್ಮೆ ಜನರಿಗಿಲ್ಲ, ಮಹಿಳೆ ತನ್ನ ಸುರಕ್ಷತೆಗಾಗಿ ತಾನೇ ಏನಾದರು ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಪುಣೆ ಮೂಲದ ಮಹಿಳಾ ಸುರಕ್ಷತೆಗಾಗಿ ಮಹಿಳಾ ಬೌನ್ಸರ್ಗಳನ್ನು ತರಬೇತಿಗೊಳಿಸುತ್ತಿದೆ. ಸಮಾಜ ಘಾತುಕ ಶಕ್ತಿಗಳೊಂದಿಗೆ ಹೇಗೆ ಹೋರಾಟ ನಡೆಸಬೇಕು ಎಂಬುದನ್ನು ಅವರಿಗೆ ಹೇಳಿಕೊಡುತ್ತಿದೆ.
ಅಮಿತಾ ಕದಮ್ ಎಂಬ ಬ್ಯೂಟಿಷಿಯನ್ ‘ಸ್ವಾಮಿನಿ ಲೇಡಿ ಬೌನ್ಸರ್’ ಕಂಪನಿಯನ್ನು ಆರಂಭಿಸಿದ್ದು, ಆರಂಭದಲ್ಲಿ ಇದರಲ್ಲಿ 5 ಮಂದಿ ಉದ್ಯೋಗಿಗಳು ಇದ್ದರು, ಇಂದು 50 ಮಂದಿ ಇಲ್ಲಿದ್ದಾರೆ.
ಸಮಾರಂಭ, ಜನನಿಬಿಡ ಸ್ಥಳಗಳಲ್ಲಿ, ಬಾರ್ ಇತ್ಯಾದಿಗಳಲ್ಲಿ ಇವರ ಕಂಪನಿಯಲ್ಲಿನ ಬೌನ್ಸರ್ಗಳನ್ನು ನಿಯೋಜನೆಗೊಳಿಸಲಾಗುತ್ತದೆ. ಮಹಿಳೆಯರಿಗೆ ಯಾರಾದರು ದೌರ್ಜನ್ಯ, ಕಿರಿಕಿರಿ ಉಂಟು ಮಾಡಿದರೆ ಅವರನ್ನು ಬಡಿದು ನೆಲಕ್ಕುರುಳಿಸುವ ತರಬೇತಿಯನ್ನು ಪಡೆದಿದ್ದಾರೆ ಇವರು.
ಅಮಿತಾ ಅವರ ಸಹೋದರ, ಸಹೋದರಿಯ ಪತಿ ಕೂಡ ಬೌನ್ಸರ್ಗಳಾಗಿದ್ದು, ಅವರಿಂದಲೇ ಕೆಲವೊಂದು ಸ್ಕಿಲ್ಗಳನ್ನು ಇವರು ಕಲಿತಿದ್ದಾರೆ.
ಒಟ್ಟಿನಲ್ಲಿ ಮಹಿಳೆಯರ ರಕ್ಷಣೆಯನ್ನು ಮಹಿಳೆಯರೇ ಮಾಡಬೇಕು ಎಂಬುದು ಈ ಮಹಿಳಾ ಬೌನ್ಸರ್ಗಳ ಗುರಿಯಾಗಿದೆ.
source: www.indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.