ನವದೆಹಲಿ: ಜನಪ್ರಿಯ ‘ರುದ್ರ ಹನುಮಾನ್’ ಚಿತ್ರವನ್ನು ಬಿಡಿಸಿರುವ ಮಂಗಳೂರಿನ ಯುವಕ ಕರಣ್ ಆಚಾರ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಶ್ಲಾಘನೆ ಪಡೆದು ಪುಳಕಿತರಾಗಿದ್ದಾರೆ.
ನನ್ನ ಚಿತ್ರಕಲೆ ಇಷ್ಟೊಂದು ಫೇಮಸ್ ಆಗುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ, ಪ್ರಧಾನಿಯಿಂದ ಇದಕ್ಕೆ ಮೆಚ್ಚುಗೆಯನ್ನು ಪಡೆದುಕೊಂಡಿರುವುದು ನನ್ನ ಬದುಕಿನ ಅತೀದೊಡ್ಡ ಯಶಸ್ಸು ಎಂದಿದ್ದಾರೆ.
‘ಭಾನುವಾರದಿಂದ ನನ್ನ ಸ್ನೇಹಿತರು ನಿರಂತರವಾಗಿ ಕರೆಗಳನ್ನು ಮಾಡುತ್ತಲೇ ಇದ್ದಾರೆ. ಪ್ರಧಾನಿ ನನ್ನನ್ನು ಶ್ಲಾಘಿಸಿದ್ದಾರೆ ಎಂಬುದನ್ನು ತಿಳಿಸಲು ಅವರು ನನಗೆ ಕರೆ ಮಾಡುತ್ತಿದ್ದಾರೆ. ಇದನ್ನು ನಾನು ಮೊದಲು ನಂಬಲಿಲ್ಲ, ಬಳಿಕ ಮಂಗಳೂರು ಸಮಾವೇಶದ ಆಡಿಯೋ ಕ್ಲಿಪ್ನ್ನು ನೋಡಿ ಆಶ್ಚರ್ಯಚಕಿತನಾಗಿದ್ದೇನೆ’ ಎಂದರು.
ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮೋದಿ, ‘ರುದ್ರ ಹನುಮಾನ್’ನನ್ನು ಬಿಡಿಸಿದ ಕರಣ್ರನ್ನು ಶ್ಲಾಘಿಸಿದ್ದರು, ಅವರ ಸೃಜನಶೀಲತೆಯನ್ನು ಕೊಂಡಾಡಿದ್ದರು. ಆದರೆ ಕಾಂಗ್ರೆಸ್ ಮತ್ತು ಅದರಂತಹ ಮನಸ್ಥಿತಿಯವರು ಇದನ್ನೂ ವಿರೋಧಿಸುತ್ತಾರೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.