News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಂದೂ ಆಚಾರ, ಸಂಪ್ರದಾಯಗಳ ಬಗ್ಗೆ ಜಗನ್‌ ಮೋಹನ್‌ ರೆಡ್ಡಿಗೆ ಕಾಳಜಿಯಿಲ್ಲ: ಬಿಜೆಪಿ ಟೀಕೆ

ಹೈದರಾಬಾದ್‌: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ‘ಪ್ರಸಾದ’ವಾಗಿ ನೀಡುವ ಲಡ್ಡುಗಳಲ್ಲಿ “ಪ್ರಾಣಿಗಳ ಕೊಬ್ಬು” ಇರುವ ಆರೋಪ ತೀವ್ರ ವಿವಾದದ ಸ್ವರೂಪ ಪಡೆದ ನಡುವೆ, ಕೇಂದ್ರವು ಆಂಧ್ರಪ್ರದೇಶ ಸರ್ಕಾರದಿಂದ ಈ ಬಗ್ಗೆ ವಿವರವಾದ ವರದಿ ಕೇಳಿದೆ. ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಕೂಡ...

Read More

ಹ್ಯಾಕ್‌ನಿಂದ ನಿಷ್ಕ್ರಿಯಗೊಂಡಿದ್ದ ಸುಪ್ರೀಂಕೋರ್ಟ್‌ ಯೂಟ್ಯೂಬ್‌ ಚಾನೆಲ್‌ ಪುನರಾರಂಭ

ನವದೆಹಲಿ: ಹ್ಯಾಕಿಂಗ್‌ನಿಂದಾಗಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿದ್ದ ತನ್ನ ಯೂಟ್ಯೂಬ್ ಚಾನೆಲ್ ಈಗ ಲೈವ್ ಆಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿದೆ. “ಭಾರತದ ಸುಪ್ರೀಂಕೋರ್ಟ್‌ನ ಯೂಟ್ಯೂಬ್ ಚಾನೆಲ್ ಲೈವ್ ಮತ್ತು ಅಪ್ ಆಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿನ ಸೇವೆಗಳನ್ನು ಪುನರಾರಂಭಿಸಲಾಗಿದೆ” ಎಂದು ಸುಪ್ರೀಂಕೋರ್ಟ್ ಹೇಳಿಕೆಯಲ್ಲಿ...

Read More

ಶ್ರೀಲಂಕಾದಲ್ಲಿ ಅಧ್ಯಕ್ಷರ ಆಯ್ಕೆಗೆ ಮತದಾನ ಆರಂಭ: 38 ಅಭ್ಯರ್ಥಿಗಳು ಕಣದಲ್ಲಿ

ಕೊಲಂಬೋ: ಬಹುದೊಡ್ಡ ಆರ್ಥಿಕ ಕುಸಿತವನ್ನು ಕಂಡು ಪ್ರಸ್ತುತ ನಿಧಾನಕ್ಕೆ ಚೇತರಿಕೆಯ ಹಾದಿಗೆ ಮರಳುತ್ತಿರುವ ಶ್ರೀಲಂಕಾದಲ್ಲಿ ಇಂದು ನಿರ್ಣಾಯಕವಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ರವರೆಗೆ ನಡೆಯಲಿದೆ. ಭಾನುವಾರದ ವೇಳೆಗೆ ಫಲಿತಾಂಶ ಬರುವ ನಿರೀಕ್ಷೆ...

Read More

ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ನುಸುಳಿದ್ದಾರೆ 900 ಕುಕಿ ಉಗ್ರಗಾಮಿಗಳು

ಗುವಾಹಟಿ: ಮ್ಯಾನ್ಮಾರ್‌ನಿಂದ ಸುಮಾರು 900 ಸುಶಿಕ್ಷಿತ ಕುಕಿ ಉಗ್ರಗಾಮಿಗಳು ಒಳನುಸುಳಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಮಣಿಪುರದ ಮುಖ್ಯಮಂತ್ರಿಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಶುಕ್ರವಾರ ಖಚಿತಪಡಿಸಿದ್ದಾರೆ. ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಪೊಲೀಸ್ ಇಲಾಖೆಯು ಈ ಆತಂಕಕಾರಿ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ...

Read More

ಮೂರು ದಿನಗಳ ಅಮೆರಿಕಾ ಪ್ರವಾಸ ಆರಂಭಿಸಿದ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮೂರು ದಿನಗಳ ಅಮೇರಿಕಾ ಪ್ರವಾಸವನ್ನು ಕೈಗೊಂಡಿದ್ದು, ಉನ್ನತ ಮಟ್ಟದ ಸಭೆಗಳು ಮತ್ತು ಕಾರ್ಯಕ್ರಮಗಳ ಸರಣಿಯಲ್ಲಿ ಭಾಗಿಯಾಗಲಿದ್ದಾರೆ. ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ 4 ನೇ ವಾರ್ಷಿಕ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುವ ಮೂಲಕ  ಮೋದಿ ತಮ್ಮ...

Read More

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಪ್ರಸಾದಕ್ಕೆ ನಂದಿನ ತುಪ್ಪ ಕಡ್ಡಾಯವೆಂದ ಸರ್ಕಾರ

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವ ಬಗ್ಗೆ ವಿವಾದ ಸೃಷ್ಟಿಯಾಗಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಗಳ ದೇಗುಲಗಳಲ್ಲಿ ಪ್ರಸಾದ ಸೇರಿ ವಿವಿಧ ದಾಸೋಹಗಳಿಗೆ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ರಾಜ್ಯ...

Read More

ಅಮೆರಿಕಾದಲ್ಲಿ ಸಿಖ್ಖರ ಬಗ್ಗೆ ಹೇಳಿಕೆ: ರಾಹುಲ್‌ ವಿರುದ್ಧ ಮೂರು ಎಫ್‌ಐಆರ್‌ ದಾಖಲು

ರಾಯ್‌ಪುರ: ಇತ್ತೀಚೆಗಿನ ಅಮೆರಿಕ ಪ್ರವಾಸದ ವೇಳೆ ಸಿಖ್ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಛತ್ತೀಸ್‌ಗಢದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಎರಡು ಪ್ರಕರಣಗಳು...

Read More

ಆರೋಪಿಗಳ ಕೇಸ್ ಹಿಂಪಡೆಯಲಾಗಿದೆ, ಇದು ರಾಜಕೀಯ, ತುಷ್ಟೀಕರಣದಿಂದಾದ ಗಲಭೆ: ಡಾ.ಅಶ್ವತ್ಥನಾರಾಯಣ್

ಬೆಂಗಳೂರು: ನಾಗಮಂಗಲದಲ್ಲಿ ಅದ್ಭುತವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು...

Read More

ಗಲಭೆ ಪ್ರಕರಣಗಳನ್ನು ಎನ್‍ಐಎ ತನಿಖೆಗೆ ನೀಡಿ: ಸತ್ಯಶೋಧನಾ ವರದಿ ಬಳಿಕ ವಿಜಯೇಂದ್ರ ಆಗ್ರಹ

ಬೆಂಗಳೂರು: ದೇಶದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರದ ಮೃದು ಧೋರಣೆಯಿಂದ ಶಾಂತಿ- ಸುವ್ಯವಸ್ಥೆ ಕದಡುವ ಕೆಲಸ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...

Read More

ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

ಕನ್ಯಾಡಿ:  ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್ & ಬೈಟ್ ಐಟಿ ಕಂಪನಿಯ ಪ್ರಕಾಶ್ ರಾವ್ ಇವರು ನೀಡಿದ ಒಂದು ಲಕ್ಷ ಅರವತ್ತೈದು ಸಾವಿರ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಅನ್ನು ಶ್ರೀ...

Read More

Recent News

Back To Top