ಕೊಲಂಬೋ: ಬಹುದೊಡ್ಡ ಆರ್ಥಿಕ ಕುಸಿತವನ್ನು ಕಂಡು ಪ್ರಸ್ತುತ ನಿಧಾನಕ್ಕೆ ಚೇತರಿಕೆಯ ಹಾದಿಗೆ ಮರಳುತ್ತಿರುವ ಶ್ರೀಲಂಕಾದಲ್ಲಿ ಇಂದು ನಿರ್ಣಾಯಕವಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ರವರೆಗೆ ನಡೆಯಲಿದೆ. ಭಾನುವಾರದ ವೇಳೆಗೆ ಫಲಿತಾಂಶ ಬರುವ ನಿರೀಕ್ಷೆ ಇದೆ.
38 ಅಧ್ಯಕ್ಷೀಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 17 ಮಿಲಿಯನ್ ಜನರು 13,400 ಮತದಾನ ಕೇಂದ್ರಗಳಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸುಗುಮ ಚುನಾವಣೆಯನ್ನು ಖಚಿತಪಡಿಸಲು 200,000 ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, 63,000 ಪೊಲೀಸ್ ಸಿಬ್ಬಂದಿ ಕಣ್ಗಾವಲು ಇರಿಸಿದ್ದಾರೆ.
ಪ್ರಸ್ತುತ ಅಧ್ಯಕ್ಷ 75 ವರ್ಷದ ರನಿಲ್ ವಿಕ್ರಮಸಿಂಘೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಐದು ವರ್ಷಗಳ ಅವಧಿಗೆ ಮರುಚುನಾವಣೆ ಬಯಸುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಹೊರತೆಗೆಯುವಲ್ಲಿನ ತನ್ನ ಅವರ ಪ್ರಯತ್ನಗಳ ಯಶಸ್ಸಿನ ಮೇಲೆ ಅವರು ಜನರಲ್ಲಿ ಮತ ಕೇಳಿದ್ದಾರೆ. ಶ್ರೀಲಂಕಾದ ಆರ್ಥಿಕ ಚೇತರಿಕೆ ಜಗತ್ತಿನ ಅತ್ಯಂತ ತ್ವರಿತ ಚೇತರಿಕೆಗಳಲ್ಲಿ ಒಂದಾಗಿದೆ ಎಂದು ಅನೇಕ ತಜ್ಞರು ಪ್ರಶಂಸಿಸಿದ್ದಾರೆ.
2022 ರಲ್ಲಿ ಶ್ರೀಲಂಕಾ ಆರ್ಥಿಕ ಕುಸಿತಕ್ಕೆ ಸಿಲುಕಿ ಅಲ್ಲಿ ದಂಗೆ ಪ್ರಾರಂಭವಾಯಿತು, ಇದಕ್ಕೆ ಬೆದರಿ ಆಗಿನ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ್ದರು. ಬಳಿಕ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಬೇಲ್ಔಟ್ಗೆ ಸಂಬಂಧಿಸಿದ ಕಟ್ಟುನಿಟ್ಟಿನ ಸುಧಾರಣೆಗಳೊಂದಿಗೆ ವಿಕ್ರಮಸಿಂಘೆ ಅವರ ಚೇತರಿಕಾ ಯೋಜನೆಯು ಅಷ್ಟೇನೂ ಜನಪ್ರಿಯವಾಗಿಲ್ಲವಾದರೂ, ಇದು ಸತತ ತ್ರೈಮಾಸಿಕಗಳ ನಕಾರಾತ್ಮಕ ಬೆಳವಣಿಗೆಯಿಂದ ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಸಹಾಯ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.