Date : Tuesday, 14-07-2015
ನಾಸಿಕ್: ಈ ಭೂಮಿಯ ಮೇಲಿನ ಅತಿದೊಡ್ಡ ಧಾರ್ಮಿಕ ಆಚರಣೆ ಸಿಂಹಸ್ತ ಕುಂಭ ಮೇಳ ಮಂಗಳವಾರ ಆರಂಭಗೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧುಗಳು, ಭಕ್ತರು ಈ ಮೇಳದಲ್ಲಿ ಪಾಲ್ಗೊಳ್ಳಲು ನಾಸಿಕ್‌ನತ್ತ ಹರಿದು ಬರುತ್ತಿದ್ದಾರೆ. ನಾಸಿಕ್ ನಗರದ ರಾಮಕುಂಡದಲ್ಲಿ ಬೆಳಿಗ್ಗೆ 6.16ರ ಸುಮಾರಿಗೆ ಧ್ವಜಾರೋಹಣ ನೆರವೇರಿಸಲಾಗಿದೆ....
Date : Tuesday, 14-07-2015
ನವದೆಹಲಿ: 8 ದಿನಗಳ ಕಾಲ ರಷ್ಯಾ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಪಲಾಮ್ ಟೆಕ್ನಿಕಲ್ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಅವರು, ‘ಐತಿಹಾಸಿಕ ಮಧ್ಯ ಏಷ್ಯಾ ಭೇಟಿಯನ್ನು ಮುಗಿಸಿ ತಾಯ್ನಾಡಿಗೆ...
Date : Monday, 13-07-2015
ನವದೆಹಲಿ: 26/11 ಮುಂಬಯಿ ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸುವ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆಯನ್ನು ರಷ್ಯಾದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದರು. ಈ ಬಾರಿಯಾದರೂ ಪಾಕಿಸ್ಥಾನ ನುಡಿದಂತೆ ನಡೆಯುತ್ತದೆ ಎಂಬ ಆಶಾವಾದ ಭಾರತೀಯರಿಗಿತ್ತು. ಆದರೆ...
Date : Monday, 13-07-2015
ಲೆಬನಾನ್: ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಲೆಬನಾನಿನಲ್ಲಿ ಸಿರಿಯಾದ ನಿರಾಶ್ರಿತ ಹೆಣ್ಣುಮಕ್ಕಳಿಗಾಗಿ ನಿರ್ಮಿಸಲಾದ ಶಾಲೆಯನ್ನು ಉದ್ಘಾಟಿಸುವ ಮೂಲಕ ತಮ್ಮ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶಾಲೆಗೆ ‘ಮಾಲಾಲ ಯೂಸುಫ್‌ಝಾಯಿ ಆಲ್-ಗರ್ಲ್ಸ್ ಸ್ಕೂಲ್’ ಎಂದು...
Date : Monday, 13-07-2015
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ಸೋಮವಾರ ಇಫ್ತಾರ್ ಕೂಟ ಆಯೋಜನೆ ಮಾಡಲಿದ್ದು, ಎನ್‌ಡಿಎ ವಿರುದ್ಧ ಬಲ ಪ್ರದರ್ಶನಕ್ಕೆ ಇದನ್ನು ವೇದಿಕೆಯನ್ನಾಗಿಸಿಕೊಳ್ಳಲಿದ್ದಾರೆ. ಲಲಿತ್ ಮೋದಿ ವಿವಾದ, ವ್ಯಾಪಮ್ ಹಗರಣಗಳ ಬಿಸಿಯನ್ನು ಎದುರಿಸುತ್ತಿರುವ ಬಿಜೆಪಿಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಕಟ್ಟಿ ಹಾಕುವ ಸಲುವಾಗಿ...
Date : Monday, 13-07-2015
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ಗ್ರಹಚಾರ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ವಿದೇಶಿ ವಿನಿಮಯ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕೈಬಿಡುವಂತೆ ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು ಸೋಮವಾರ...
Date : Monday, 13-07-2015
ಜಾನ್ಸಿ: ಸಾರ್ಕ್ ಸಮಿತ್‌ಗೆಂದು 2016ರಲ್ಲಿ ಪಾಕಿಸ್ಥಾನಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ವಾಪಾಸ್ ಬರುವಾಗ ತಮ್ಮ ವಿಮಾನದಲ್ಲಿ ಭಯೋತ್ಪಾದಕರನ್ನು ಕರೆದುಕೊಂಡು ಬರಬೇಕು ಎಂದು ಸಮಾಜವಾದಿ ಮುಖಂಡ ಅಜಂ ಖಾನ್ ಹೇಳಿದ್ದಾರೆ. ವಿಮಾನದ ಮೂಲಕ ಕಂದಹಾರ್‌ಗೆ ಉಗ್ರರನ್ನು ಕಳಹಿಸಿದಂತೆಯೇ ಮೋದಿ ಪಾಕಿಸ್ಥಾನದಿಂದ ವಾಪಾಸ್...
Date : Monday, 13-07-2015
ನವದೆಹಲಿ: ವಿಂಬಲ್ಡನ್ ಗೆದ್ದ ಬಗೆಗಿನ ತನ್ನ ಟ್ವಿಟ್‌ನಲ್ಲಿ ಭಾರತದ ಸಾನಿಯಾ ಮಿರ್ಜಾರನ್ನು ಕಡೆಗಣಿಸಿದ್ದ ಬಿಬಿಸಿ ಇಂಡಿಯಾಗೆ ಸಚಿವೆ ಸ್ಮೃತಿ ಇರಾನಿ ಬಿಸಿ ಮುಟ್ಟಿಸಿದ್ದಾರೆ. ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲ್ಯಾಂಡಿನ ಮಾರ್ಟಿನ ಹಿಂಗೀಸ್ ಜೋಡಿ ವಿಂಬಲ್ಡನ್‌ನ ಮಹಿಳೆಯರ ಡಬಲ್ಸ್...
Date : Monday, 13-07-2015
ಕುವೈಟ್: ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗಳನ್ನು (5೦,೦೦೦ ದಿನಾರ್)ಹೊಂದಿದ್ದರೂ ಇನ್ನಷ್ಟು ಗಳಿಸಬೇಕೆಂಬ ದುರಾಸೆಯಿಂದ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕುವೈಟ್ ಪೊಲೀಸರು ಜೈಲಿಗಟ್ಟಿದ್ದಾರೆ. ಕುವೈಟ್‌ನಲ್ಲಿ ಭಿಕ್ಷೆ ಬೇಡುವುದು ಅಪರಾಧ, ಹಾಗಿದ್ದರೂ ಈ ವ್ಯಕ್ತಿ ಮಸೀದಿ ಪಕ್ಕದಲ್ಲಿ ನಿಂತುಕೊಂಡು ಪ್ರತಿನಿತ್ಯ ಭಿಕ್ಷೆ...
Date : Monday, 13-07-2015
ಬೋಸ್ಟನ್: ಅಮೆರಿಕಾದ ನ್ಯೂಯಾಕ್‌ನಿಂದ ಲಂಡನ್‌ಗೆ ಕೇವಲ 3 ಗಂಟೆಯಲ್ಲಿ ಹಾರಬಲ್ಲ ಅತಿ ವೇಗದ ಸೂಪರ್‌ಸಾನಿಕ್ ವಿಮಾನವನ್ನು ಬೋಸ್ಟನ್ ಮೂಲದ ಸ್ಪೈಸ್ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿದೆ. ವಿಶೇಷವೆಂದರೆ ಈ ವಿಮಾನ ಅಭಿವೃದ್ಧಿಯ ಹಿಂದೆ ಸಾಕಷ್ಟು ಭಾರತೀಯ ಮೂಲದ ಎಂಜಿನಿಯರ್‌ಗಳ ಪರಿಶ್ರಮವಿದೆ. ಈ ಎಸ್-512ಸೂಪರ್‌ಸಾನಿಕ್...