ನಾಸಿಕ್: ಈ ಭೂಮಿಯ ಮೇಲಿನ ಅತಿದೊಡ್ಡ ಧಾರ್ಮಿಕ ಆಚರಣೆ ಸಿಂಹಸ್ತ ಕುಂಭ ಮೇಳ ಮಂಗಳವಾರ ಆರಂಭಗೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧುಗಳು, ಭಕ್ತರು ಈ ಮೇಳದಲ್ಲಿ ಪಾಲ್ಗೊಳ್ಳಲು ನಾಸಿಕ್ನತ್ತ ಹರಿದು ಬರುತ್ತಿದ್ದಾರೆ.
ನಾಸಿಕ್ ನಗರದ ರಾಮಕುಂಡದಲ್ಲಿ ಬೆಳಿಗ್ಗೆ 6.16ರ ಸುಮಾರಿಗೆ ಧ್ವಜಾರೋಹಣ ನೆರವೇರಿಸಲಾಗಿದೆ. ಈ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಾಸಿಕ್ ಗಂಗಾ ಗೋದಾವರಿ ಪಂಚಕೋಟಿ ಪುರೋಹಿತ್ ಸಂಘ ಮತ್ತು ತ್ರಿಂಬಕೇಶ್ವರ ಪುರೋಹಿತ್ ಸಂಘಗಳು ಆಯೋಜನೆ ಮಾಡಿವೆ.
ಪ್ರತಿ 12ವರ್ಷಗಳಿಗೊಮ್ಮೆ ಕುಂಭ ಮೇಳ ಆಚರಣೆ ಮಾಡಲಾಗುತ್ತದೆ, ಈ ಬಾರಿ ಸುಮಾರು 8 ಕೋಟಿ ಭಕ್ತರು ಕುಂಭ ಮೇಳಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೂ ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.