ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ಸೋಮವಾರ ಇಫ್ತಾರ್ ಕೂಟ ಆಯೋಜನೆ ಮಾಡಲಿದ್ದು, ಎನ್ಡಿಎ ವಿರುದ್ಧ ಬಲ ಪ್ರದರ್ಶನಕ್ಕೆ ಇದನ್ನು ವೇದಿಕೆಯನ್ನಾಗಿಸಿಕೊಳ್ಳಲಿದ್ದಾರೆ.
ಲಲಿತ್ ಮೋದಿ ವಿವಾದ, ವ್ಯಾಪಮ್ ಹಗರಣಗಳ ಬಿಸಿಯನ್ನು ಎದುರಿಸುತ್ತಿರುವ ಬಿಜೆಪಿಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಕಟ್ಟಿ ಹಾಕುವ ಸಲುವಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸಬೇಕಾದ ಅಗತ್ಯ ಕಾಂಗ್ರೆಸ್ಗಿದೆ.
ಅದಕ್ಕಾಗಿ ಇಫ್ತಾರ್ ಮೂಲಕ ಸೋನಿಯಾ ಸಮಾನಮನಸ್ಕ ಎಲ್ಲಾ ಪಕ್ಷಗಳನ್ನು ಒಂದುಗೂಡಿಸಲಿದ್ದಾರೆ. ಇದರಿಂದಾಗಿ ಈ ಬಾರಿಯ ಅಧಿವೇಶನ ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವು ತರುವ ಎಲ್ಲಾ ಸಾಧ್ಯತೆಗಳೂ ಇದೆ.
ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಶರದ್ ಪವರ್, ಸೀತಾರಾಮ್ ಯಚೂರಿ, ದೇವೇಗೌಡ, ಕನ್ನಿಮೋಳಿ, ಡಿ.ರಾಜಾ, ಫಾರೂಖ್ ಅಬ್ದುಲ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರನ್ನು ಇಫ್ತಾರ್ಗೆ ಆಹ್ವಾನಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.