ಬೋಸ್ಟನ್: ಅಮೆರಿಕಾದ ನ್ಯೂಯಾಕ್ನಿಂದ ಲಂಡನ್ಗೆ ಕೇವಲ 3 ಗಂಟೆಯಲ್ಲಿ ಹಾರಬಲ್ಲ ಅತಿ ವೇಗದ ಸೂಪರ್ಸಾನಿಕ್ ವಿಮಾನವನ್ನು ಬೋಸ್ಟನ್ ಮೂಲದ ಸ್ಪೈಸ್ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿದೆ. ವಿಶೇಷವೆಂದರೆ ಈ ವಿಮಾನ ಅಭಿವೃದ್ಧಿಯ ಹಿಂದೆ ಸಾಕಷ್ಟು ಭಾರತೀಯ ಮೂಲದ ಎಂಜಿನಿಯರ್ಗಳ ಪರಿಶ್ರಮವಿದೆ.
ಈ ಎಸ್-512ಸೂಪರ್ಸಾನಿಕ್ ವಿಮಾನ ಗಂಟೆಗೆ 2205 ಕಿಲೋ ಮೀಟರ್ ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದನ್ನು 2013ರಲ್ಲಿ ಪರಿಚಯಿಸಲಾಯಿತಾದರೂ, ಕಂಪನಿ ಇದರ ವಿನ್ಯಾಸದಲ್ಲಿ ಕೆಲವೊಂದು ಅಪ್ಡೇಟ್ಗಳನ್ನು ಇತ್ತೀಚಿಗಷ್ಟೇ ಮಾಡಿತ್ತು. ಈ ಅಪ್ಡೇಟ್ ವಿಮಾನದ ವೇಗವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಈ ವಿಮಾನದ ಮೂಲಕ ನ್ಯೂಯಾರ್ಕ್ನಿಂದ ಲಂಡನ್ಗೆ 3 ಗಂಟೆಗಳಲ್ಲಿ ಪ್ರಯಾಣಿಸಬಹುದು, ಅಲ್ಲದೇ ಪ್ಯಾರೀಸ್ನಿಂದ ದುಬೈಗೆ ಶಾಪಿಂಗ್, ಮನೋರಂಜನೆಗಾಗಿ ತೆರಳಿ ಡಿನ್ನರ್ ಸಮಯಕ್ಕೆ ವಾಪಾಸ್ ಆಗಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಅತಿ ವೇಗವಾಗಿ ಹಾರಬಲ್ಲ ಈ ವಿಮಾನದ ಬೆಲೆ ಕೂಡ ದುಬಾರಿಯಾಗಿದ್ದು, 500 ಕೋಟಿಗೂ ಅಧಿಕವಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.