ನವದೆಹಲಿ: 26/11 ಮುಂಬಯಿ ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸುವ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆಯನ್ನು ರಷ್ಯಾದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದರು. ಈ ಬಾರಿಯಾದರೂ ಪಾಕಿಸ್ಥಾನ ನುಡಿದಂತೆ ನಡೆಯುತ್ತದೆ ಎಂಬ ಆಶಾವಾದ ಭಾರತೀಯರಿಗಿತ್ತು. ಆದರೆ ಆ ಆಶಯ ಈಗ ಸುಳ್ಳಾಗಿದೆ.
ಮುಂಬಯಿ ದಾಳಿಗೆ ಸಂಬಂಧಿಸಿದ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಭಾರತ ಒದಗಿಸಬೇಕು ಎಂಬ ಬೇಡಿಕೆಯನ್ನು ಪಾಕಿಸ್ಥಾನ ಮುಂದಿಟ್ಟಿದೆ.
ಮುಂಬಯಿ ದಾಳಿಯ ವಿಚಾರಣೆಯನ್ನು ಮುಂದುವರೆಸಲು ಭಾರತದಿಂದ ನಮಗೆ ಇನ್ನಷ್ಟು ಸಾಕ್ಷ್ಯಾಧಾರಗಳು ಬೇಕಾಗಿದೆ ಎಂದು ಪಾಕಿಸ್ಥಾನ ವಿದೇಶಾಂಗ ಕಾರ್ಯದರ್ಶಿ ಸರ್ತಾಜ್ ಅಜೀಝ್ ತಿಳಿಸಿದ್ದಾರೆ.
ಅಲ್ಲದೇ ಕಾಶ್ಮೀರ ವಿಷಯವನ್ನು ಹೊರಗಿಟ್ಟು ಭಾರತ ಮತ್ತು ಪಾಕಿಸ್ಥಾನ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪಾಕಿಸ್ಥಾನದ ಧೋರಣೆಯನ್ನು ಭಾರತ ಕಟುವಾಗಿ ಖಂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.