News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಿಒಕೆ ನಿವಾಸಿಗಳಿಂದ ಆಜಾದಿ ಪರ ಘೋಷಣೆ ; ಶರೀಫ್‌ಗೆ ಮುಖಭಂಗ

ನವದೆಹಲಿ : ಭಾರತದ ಆಂತರಿಕ ವಿಷಯವಾದ ಕಾಶ್ಮೀರದ ಬಗ್ಗೆ ಪದೇ ಪದೇ ಅನಗತ್ಯ ಹೇಳಿಕೆಗಳನ್ನು ನೀಡಿ ಸುದ್ದಿ ಮಾಡುತ್ತಿದ್ದ ಪಾಕಿಸ್ಥಾನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಇದೀಗ ತೀವ್ರ ಮುಖಭಂಗವಾಗಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನತೆ ಮತ್ತೆ ಬೀದಿಗಿಳಿದಿದ್ದು, ಆಜಾದಿ ಪರ...

Read More

ಗುಜರಾತ್‌ನ ಗ್ರಾಮದಲ್ಲಿ ಮುಸ್ಲಿಂ ಮಹಿಳೆಗೆ ದೇವಿಯ ಸ್ಥಾನ

ಅಹ್ಮದಾಬಾದ್ : ಗುಜರಾತ್‌ನ ಗಾಂಧೀನಗರ ಸಮೀಪದ ಗ್ರಾಮವೊಂದರಲ್ಲಿ ನಿಜಕ್ಕೂ ಆಶ್ಚರ್ಯಚಕಿತಗೊಳ್ಳುವಂತಹ ಸನ್ನಿವೇಶವಿದೆ.  ಇಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಸ್ವತಃ ದೇವಿಯಾಗಿ ಪೂಜಿಸಲ್ಪಡುತ್ತಿದ್ದಾಳೆ. ಜುಲಾಸನ್ ಎಂಬ ಗ್ರಾಮದಲ್ಲಿ ಡೋಲಾ ಮಾತಾ ದೇವಿ ಎಂಬ ದೇಗುಲವಿದೆ. ವಿಶೇಷವೆಂದರೆ ಮುಸ್ಲಿಂ ಮಹಿಳೆಯೊಬ್ಬಳನ್ನು ಡೋಲಾ ದೇವಿಯಾಗಿ ಇಲ್ಲಿ ಆರಾಧಿಸಲಾಗುತ್ತದೆ....

Read More

ಕೆರೆಗಳ ರಕ್ಷಣೆಗೆ ಮುಂದಾಗುವಂತೆ ಮೋದಿಗೆ ಪತ್ರ ಬರೆದ 1 ಸಾವಿರ ಮಕ್ಕಳು

ಬೆಂಗಳೂರು : ಬೆಂಗಳೂರಿನ ಕೆರೆಗಳೆಲ್ಲಾ ಅಕ್ಷರಶಃ ಕೆಮಿಕಲ್ ಕೆರೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕಳೆದ ವರ್ಷ ಇಲ್ಲಿನ ವರ್ತೂರು, ಬೆಳ್ಳಂದೂರು ಮತ್ತು ಯಮಲೂರು ಕೆರೆಗಳಲ್ಲಿ ಹೊಗೆ ಮತ್ತು ಬೆಂಕಿ ಅಲ್ಲದೆ ಬಿಳಿ ನೊರೆ ಕಾಣಿಸಿಕೊಂಡು ಭಾರೀ ಆತಂಕವನ್ನು ಸೃಷ್ಟಿಸಿತ್ತು. ಇಷ್ಟಾದರೂ ರಾಜ್ಯ ಸರ್ಕಾರವಂತೂ ಕೆರೆಯ...

Read More

ಭಾರೀ ಮಳೆಗೆ ಕುಸಿದು ಬಿದ್ದ 44 ವರ್ಷ ಹಳೆಯ ಹಿಮಾಚಲದ ಸೇತುವೆ

ಡೆಹರಾಡೂನ್ : ಭಾರೀ ಮಳೆಯ ಪರಿಣಾಮವಾಗಿ 44 ವರ್ಷ ಹಳೆಯ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಸೇತುವೆಯೊಂದು ಗುರುವಾರ ಕುಸಿದು ಬಿದ್ದಿದೆ.  ಅದು ಕುಸಿಯುತ್ತಿರುವ ಸಂಪೂರ್ಣ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಭಾರೀ ಮಳೆಗೆ ಸೇತುವೆಯ ಮೇಲೆ ನೀರು ರಭಸವಾಗಿ ಹರಿದ ಪರಿಣಾಮವಾಗಿ ಸೇತುವೆ...

Read More

ಸೌದಿಯಲ್ಲಿ ಉದ್ಯೋಗ ಕಳೆದುಕೊಂಡ 26 ಮಂದಿಯ ಮೊದಲ ತಂಡ ಭಾರತಕ್ಕೆ ಆಗಮನ

ನವದೆಹಲಿ : ಸೌದಿಯಲ್ಲಿ ಉದ್ಯೋಗವನ್ನು ಕಳೆದುಕೊಂಡ 26 ಮಂದಿಯನ್ನೊಳಗೊಂಡ ಭಾರತೀಯರ ಮೊದಲ ತಂಡ ಗುರುವಾರ ನವದೆಹಲಿಗೆ ಆಗಮಿಸಿದೆ. ಸರಕಾರ ಇವರುಗಳಿಗೆ ಎಕ್ಸಿಟ್ ವೀಸಾಗಳನ್ನು ನೀಡಿದ ಹಿನ್ನಲೆಯಲ್ಲಿ ಇವರು ಭಾರತಕ್ಕೆ ವಾಪಾಸಾಗಿದ್ದಾರೆ. ಕಳೆದ ವಾರ ಗಲ್ಫ್ ದೇಶಕ್ಕೆ ಭೇಟಿ ಕೊಟ್ಟಿದ್ದ ವಿದೇಶಾಂಗ ಸಚಿವಾಲಯದ ರಾಜ್ಯ...

Read More

ರಿಯೋ ಒಲಿಂಪಿಕ್ಸ್ ಸಮಿತಿಯಿಂದ ಕ್ರೀಡಾ ಸಚಿವ ವಿಜಯ್ ಗೋಯಲ್ ಮಾನ್ಯತೆ ರದ್ದು ಪಡಿಸುವ ಎಚ್ಚರಿಕೆ

ರಿಯೋ : ಬಾರತೀಯ ಕ್ರೀಡಾಳುಗಳಿಗೆ ಚಿಯರ್ ಅಫ್ ಮಾಡುವ ಸಲುವಾಗಿ ರಿಯೋ ಡಿ ಜನೈರೋಗೆ ತೆರಳಿರುವ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಇದೀಗ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ರಿಯೋ ಒಲಿಂಪಿಕ್ಸ್ ಸಮಿತಿ ಅವರಿಗೆ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದೆ....

Read More

ಬಿಜೆಪಿ ನಾಯಕ ಬ್ರಿಜ್‌ಪಾಲ್ ತೆವತಿಯಾ ಮೇಲೆ 100 ಸುತ್ತು ಗುಂಡು ಹಾರಿಸಿದ ದುಷ್ಕರ್ಮಿಗಳು

ಗಾಜಿಯಾಬಾದ್ : ಉತ್ತರ ಪ್ರದೇಶದ ಬಿಜೆಪಿ ಹಿರಿಯ ಮುಖಂಡ ಬ್ರಿಜ್‌ಪಾಲ್ ತೆವತಿಯಾ ಅವರ ಮೇಲೆ ದುಷ್ಕರ್ಮಿಗಳು ಗುರುವಾರ ಸಂಜೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಗಾಜಿಯಾಬಾದ್‌ನಲ್ಲಿ ಅವರು ತನ್ನ ಬೆಂಗಾವಲಿನೊಂದಿಗೆ ತೆರಳುತ್ತಿದ್ದ ವೇಳೆ ಎಕೆ-47 ರೈಫಲ್‌ನಿಂದ ಅವರ ಮೇಲೆ ಕನಿಷ್ಠ 100 ಸುತ್ತುಗಳ ಗುಂಡನ್ನು...

Read More

16 ಸಾವಿರ ಅಡಿ ಹತ್ತಿದ ಕಾರ್ಗಿಲ್ ಹುತಾತ್ಮನ ತಂದೆ

ನವದೆಹಲಿ : ಕಾರ್ಗಿಲ್ ಹೀರೋ ವಿಜಯಾಂತ್ ಥಾಪರ್ ಪಾಕಿಸ್ಥಾನಿ ಪಡೆಗಳ ವಿರುದ್ಧ ಹೋರಾಡುತ್ತಾ ಕಾರ್ಗಿಲ್‌ನಲ್ಲಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದವರು. ಇದೀಗ ಅವರ ತಂದೆ, ನಿವೃತ್ತ ಕರ್ನಲ್ ವಿಜೇಂದ್ರ ಥಾಪರ್ ಅವರು ತಮ್ಮ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ ತಮ್ಮ ಮಗ ಪ್ರಾಣ...

Read More

ನಕಲಿ ಗೋರಕ್ಷಕರ ಪತ್ತೆಗೆ ಹೊಸ ತಂತ್ರ ಆರಂಭಿಸಿದ ಹರಿಯಾಣ

ನವದೆಹಲಿ : ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚಿ ಅವರು ಮಾಡುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣದ ಗೋ ಸಮಿತಿ ಹೊಸ ತಂತ್ರವೊಂದನ್ನು ಜಾರಿಗೊಳಿಸಿದೆ. ಪ್ರಾಮಾಣಿಕ ಗೋರಕ್ಷಕರಿಗೆ ಗುರುತಿನ ಚೀಟಿಯನ್ನು ನೀಡಲು ಅದು ನಿರ್ಧರಿಸಿದೆ. ಕೆಲ ಕ್ರಿಮಿನಲ್ಸ್‌ಗಳು ಗೋರಕ್ಷಕರಂತೆ ಫೋಸ್ ಕೊಡುತ್ತಿದ್ದಾರೆಂದು ಗೋ...

Read More

ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ನ 8 ಶಾಸಕರು ಇಂದು ಬಿಜೆಪಿಗೆ ಸೇರ್ಪಡೆ

ಲಕ್ನೋ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಗುರುವಾರ ಲಕ್ನೋದಲ್ಲಿ 3 ಎಸ್‌ಪಿ, 2 ಬಿಎಸ್‌ಪಿ, 3 ಕಾಂಗ್ರೆಸ್‌ನ ಒಟ್ಟು 8 ಜನ ಶಾಸಕರು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು....

Read More

Recent News

Back To Top