ಡೆಹರಾಡೂನ್ : ಭಾರೀ ಮಳೆಯ ಪರಿಣಾಮವಾಗಿ 44 ವರ್ಷ ಹಳೆಯ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಸೇತುವೆಯೊಂದು ಗುರುವಾರ ಕುಸಿದು ಬಿದ್ದಿದೆ. ಅದು ಕುಸಿಯುತ್ತಿರುವ ಸಂಪೂರ್ಣ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಭಾರೀ ಮಳೆಗೆ ಸೇತುವೆಯ ಮೇಲೆ ನೀರು ರಭಸವಾಗಿ ಹರಿದ ಪರಿಣಾಮವಾಗಿ ಸೇತುವೆ ಕುಸಿದಿದೆ. ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.
160 ಮೀ. ಉದ್ದದ ಸೇತುವೆಯ ಭಾಗ ಕುಸಿಯುತ್ತಿರುವುದು ಮತ್ತು ಅದರ ಪಿಲ್ಲರ್ಗಳು ಅಲುಗಾಡುತ್ತಿರುವ ದೃಶ್ಯ ಅತ್ಯಂತ ರೋಚಕವಾಗಿದೆ.
ಸೇತುವೆಯ 10 ಪಿಲ್ಲರ್ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಈ ಸೇತುವೆ ಹಿಮಾಚಲದ ನುಲ್ಫೇರ್ ತೆಹಸಿಲ್ನ ಹಲವಾರು ಹಳ್ಳಿಗಳನ್ನು ನೆರೆಯ ಪಂಜಾಬ್ನೊಂದಿಗೆ ನೇರವಾಗಿ ಸಂಪರ್ಕಿಸುತ್ತಿತ್ತು.
ಬುಧವಾರವೇ ಅಧಿಕಾರಿಗಳು ಈ ಸೇತುವೆ ಮೇಲಿನ ಓಡಾಟವನ್ನು ಸ್ಥಗಿತಗೊಳಿಸಿದ ಪರಿಣಾಮವಾಗಿ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.