ಬೆಂಗಳೂರು : ಬೆಂಗಳೂರಿನ ಕೆರೆಗಳೆಲ್ಲಾ ಅಕ್ಷರಶಃ ಕೆಮಿಕಲ್ ಕೆರೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕಳೆದ ವರ್ಷ ಇಲ್ಲಿನ ವರ್ತೂರು, ಬೆಳ್ಳಂದೂರು ಮತ್ತು ಯಮಲೂರು ಕೆರೆಗಳಲ್ಲಿ ಹೊಗೆ ಮತ್ತು ಬೆಂಕಿ ಅಲ್ಲದೆ ಬಿಳಿ ನೊರೆ ಕಾಣಿಸಿಕೊಂಡು ಭಾರೀ ಆತಂಕವನ್ನು ಸೃಷ್ಟಿಸಿತ್ತು.
ಇಷ್ಟಾದರೂ ರಾಜ್ಯ ಸರ್ಕಾರವಂತೂ ಕೆರೆಯ ಶುಚಿತ್ವದ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸಿಯೇ ಇಲ್ಲ. ಇವುಗಳು ಜನರ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮದಿಂದ ಆತಂಕಕ್ಕೊಳಗಾಗಿರುವ ಸುಮಾರು 1 ಸಾವಿರ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆರೆಗಳ ರಕ್ಷಣೆಯ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ SOS ಕಳಿಸಿದ್ದಾರೆ.
ಒಂದರಿಂದ ಹತ್ತನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವರ್ತೂರು ಸಮೀಪದಲ್ಲಿರುವ ಕೆ.ಕೆ. ಸ್ಕೂಲ್ನಲ್ಲಿನ ಸುಮಾರು 1 ಸಾವಿರ ವಿದ್ಯಾರ್ಥಿಗಳು ಮೋದಿಯವರಿಗೆ ಪೋಸ್ಟ್ ಕಾರ್ಡ್ ಮೇಲೆ ಸಮಸ್ಯೆಯನ್ನು ಬರೆದು ಕಳುಹಿಸಿ ಶೀಘ್ರದಲ್ಲೇ ಕೆರೆಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
ಕೆರೆಗಳಲ್ಲಿ ಕಾಣಿಸಿಕೊಳ್ಳುವ ಹೊಗೆ ಸ್ಥಳೀಯರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತಿದೆ. ಆದರೂ ಸ್ಥಳೀಯ ಪರಿಸರ ಇಲಾಖೆ ಮಾತ್ರ ಈ ಕೆರೆಗಳಿಂದ ಆರೋಗ್ಯಕ್ಕೇನೂ ಸಮಸ್ಯೆಯಿಲ್ಲ. ಅದರಿಂದ ಬರುವ ವಾಸನೆಯಿಂದಷ್ಟೇ ಸಮಸ್ಯೆಯಾಗುತ್ತಿದೆ ಎಂದಿದೆ.
ಅಲ್ಲದೆ ಕೆರೆಯ ಶುಚಿತ್ವ ಕಾರ್ಯವನ್ನೂ ಶೀಘ್ರದಲ್ಲೇ ಆರಂಭ ಮಾಡುತ್ತೇವೆ. ಆದರೆ ಇದು ಸಂಪೂರ್ಣವಾಗಿ ಶುಚಿಗೊಳ್ಳಲು ವರ್ಷಗಳೇ ಬೇಕಾಗಬಹುದು ಎಂದಿದೆ.
ಇದೀಗ ವಿದ್ಯಾರ್ಥಿಗಳು ನೇರವಾಗಿ ಪ್ರಧಾನಿಯವರಿಗೇ ಮನವಿ ಮಾಡಿರುವುದರಿಂದ ಸ್ಥಳೀಯ ಇಲಾಖೆಗಳು ಎಚ್ಚೆತ್ತುಕೊಳ್ಳುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.