Date : Monday, 27-02-2017
ಇಂದೋರ್: ಮಾಸ್ಟರ್‌ಮೈಂಡ್ ಸಫ್ದಾರ್ ನಗೋರಿ ಸೇರಿದಂತೆ 11 ಜನ ಸಿಮಿ ಉಗ್ರರಿಗೆ ಇಂದೋರ್ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಕ್ರಮ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳ ಹೊಂದುವಿಕೆ ಹಾಗೂ ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2008 ರಲ್ಲಿ...
Date : Monday, 27-02-2017
ಮುಂಬೈ: ಇಲ್ಲಿನ ಖರ್ (ಪಶ್ಚಿಮ) ಪ್ರದೇಶದಲ್ಲಿ ಹೊರಟಿದ್ದ ಆಟೋದ ಎರಡೂ ಬದಿಯಲ್ಲಿದ್ದ ಸುಂದರ ಸಸಿಗಳು ಎಲ್ಲರ ಗಮನ ಸೆಳೆದಿವೆ. ಹೌದು. ಮಾನವನ ಕೊಡಲಿ ಏಟಿಗೆ ಬೆದರಿ ಹೋಗಿರುವ ಗಿಡ ಮರಗಳು ದಿನದಿಂದ ದಿನಕ್ಕೆ ರಸ್ತೆ ಬದಿ ಕಾಣುವುದೇ ಅಪರೂಪವಾಗಿವೆ. ಅಭಿವೃದ್ಧಿಯ ಹುಚ್ಚಿನಲ್ಲಿ...
Date : Monday, 27-02-2017
ಮುಂಬೈ: ಆರೋಪಿಯನ್ನು ಹಿಡಿಯಲು ಪೊಲೀಸರು ಅನೇಕ ಮಾರುವೇಷ ಧರಿಸಿರುವುದನ್ನು ನಾವು ಕೇಳಿದ್ದೇವೆ. ಆದರೆ ಮುಂಬೈ ಪೊಲೀಸ್ ಪೇದೆಯೊಬ್ಬರು ಆಟೊ ಚಾಲನೆ ಕಲಿತು ಆರೋಪಿಯನ್ನು ಖೆಡ್ಡಾಕ್ಕೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಖಡಕ್ಪಾಡಾ ಪ್ರದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಗಣೇಶ ಕಿಲ್ಲಾರೆ ಎಂಬ ವಾಚಮನ್ ಕೊಲೆ...
Date : Monday, 27-02-2017
ಅಯೋಧ್ಯಾ: ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಎಷ್ಟೇ ಆದ್ಯತೆ ನೀಡಿದರೂ, ರಾಮ ಮಂದಿರ ನಿರ್ಮಾಣವಾಗದಿದ್ದಲ್ಲಿ ಎಲ್ಲ ಅಭಿವೃದ್ಧಿಯೂ ಅಪೂರ್ಣ ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಆರಂಭವಾದ ವಿಧಾನ ಸಭೆಯ 5 ನೇ ಹಂತದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ...
Date : Monday, 27-02-2017
ರಾಜಕೋಟ್: ಗುಜರಾತ್‌ನ ಛೋಟಿಲಾ ಮಂದಿರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಭಯೋತ್ಪಾದಕ ಸಂಘಟನೆಯ ನಾಸಿಮ್ ಹಾಗೂ ನಿತಿನ್ ಎಂಬಿಬ್ಬರನ್ನು ಉಗ್ರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. 2 ವರ್ಷಗಳ ಹಿಂದೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಉಗ್ರರ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದ ಡಾ.ರಾಮಮೂರ್ತಿ ಅವರು...
Date : Monday, 27-02-2017
ಅಯೋಧ್ಯಾ(ಉ.ಪ್ರದೇಶ): ಉತ್ತರ ಪ್ರದೇಶದಲ್ಲಿ 5 ಹಂತದ ಮತದಾನ 12 ಜಿಲ್ಲೆಯ 51 ಕ್ಷೇತ್ರಗಳಲ್ಲಿ ಇಂದು ಆರಂಭವಾಗಿದೆ. ಒಟ್ಟು 607 ಅಭ್ಯರ್ಥಿಗಳು ಕಣದಲ್ಲಿದ್ದು, ಗರಿಷ್ಠವೆಂದರೆ ಅಮೇಥಿಯಲ್ಲಿ 24 ಹಾಗೂ ಕಪಿಲವಾಸ್ತು ಹಾಗೂ ಎತ್ವಾ ಕ್ಷೇತ್ರದಲ್ಲಿ ಕನಿಷ್ಟ ತಲಾ 6 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 1.84 ಕೋಟಿ ಜನ ಮತದಾರರಿದ್ದು, 18,882 ಮತದಾನದ ಬೂತ್‌ಗಳನ್ನು...
Date : Monday, 27-02-2017
ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಭಾನುವಾರ ರಾತ್ರಿಯೇ ಪಳನಿಸ್ವಾಮಿ ನವದೆಹಲಿಗೆ ಬಂದಿಳಿದಿದ್ದಾರೆ. ತಮಿಳುನಾಡಿಗೆ ನೀಟ್ ಪರೀಕ್ಷೆಯಲ್ಲಿ ವಿನಾಯ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲಿದ್ದಾರೆ. ಫೆ.24 ರಂದು ಕೊಯಿಮತ್ತೂರ್‌ಗೆ...
Date : Monday, 27-02-2017
ನವದೆಹಲಿ: ದೇಶಕಂಡ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಹುತಾತ್ಮ ದಿನವನ್ನು ಸೋಮವಾರ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಮಹಾನ್ ದೇಶಪ್ರೇಮಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ...
Date : Friday, 24-02-2017
ಐಜ್ವಾಲ್: ಶಾಸಕರೋರ್ವರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಹಿಳೆಯೊಬ್ಬರ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಶಾಸಕ ಕೆ.ಬೈಚುವಾ ಕಾರ್ಯಕ್ರಮ ನಿಮಿತ್ತ ಗ್ರಾಮವೊಂದಕ್ಕೆ ತೆರಳಿದ್ದರು. ಆಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ವೈದ್ಯರೇ...
Date : Friday, 24-02-2017
ಅಜಮಘರ್: ರಾಜಕೀಯದಲ್ಲಿನ್ನೂ ಅಪ್ರಬುದ್ಧ ಎಂದು ಗೊತ್ತಿದ್ದೂ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯವರಿಗೆ ಅಷ್ಟೊಂದು ಆದ್ಯತೆಯನ್ನು ಕಾಂಗ್ರೆಸ್ ಯಾಕೆ ನೀಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಪ್ರಶ್ನಿಸಿದ್ದಾರೆ. ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ, ಇನ್ನೂ...