ಅಯೋಧ್ಯಾ: ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಎಷ್ಟೇ ಆದ್ಯತೆ ನೀಡಿದರೂ, ರಾಮ ಮಂದಿರ ನಿರ್ಮಾಣವಾಗದಿದ್ದಲ್ಲಿ ಎಲ್ಲ ಅಭಿವೃದ್ಧಿಯೂ ಅಪೂರ್ಣ ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಆರಂಭವಾದ ವಿಧಾನ ಸಭೆಯ 5 ನೇ ಹಂತದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಎಲ್ಲ ಅಭಿವೃದ್ಧಿಗಿಂತ ರಾಮ ಮಂದಿರ ನಿರ್ಮಾಣ ಮುಖ್ಯ. ಅದು ನಿರ್ಮಾಣವಾಗದಿದ್ದರೆ ಯಾವ ಅಭಿವೃದ್ಧಿಗೂ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಪ್ರಾದೇಶಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಧನಾತ್ಮಕ ಅಭಿವೃದ್ಧಿಯಾಗುವುದು ಅತ್ಯವಶ್ಯ. ಆದರೆ ರಾಮ ಮಂದಿರ ನಿರ್ಮಿಸದಿದ್ದಲ್ಲಿ ಇವ್ಯಾವ ಅಭಿವೃದ್ಧಿ ಕಾರ್ಯಗಳಿಗೂ ಮಹತ್ವವಿಲ್ಲ ಎಂದು ಕಟಿಯಾರ್ ಹೇಳಿದ್ದಾರೆ.
ಖಬರಸ್ಥಾನ್ ಹಾಗೂ ಸ್ಮಶಾನ ಭೂಮಿ ಕುರಿತ ಮೋದಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಉಭಯ ಧರ್ಮದವರಿಗೂ ಒಳಿತಾಗುವಂತೆ ಸಮಾತನತೆಯ ಹೇಳಿಕೆ ನೀಡಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.