Date : Saturday, 19-08-2017
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ಪಾಕಿಸ್ಥಾನದಿಂದ ಮುಕ್ತಿ ಬೇಕೆಂದು ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪಾಕಿಸ್ಥಾನದಿಂದ ಸ್ವಾತಂತ್ರ್ಯ ಬೇಕು ಎಂದು ಆಗ್ರಹಿಸಿ ಜಂದಲಿಯಲ್ಲಿ ಜಮ್ಮು ಕಾಶ್ಮೀರ ಸ್ಟುಡೆಂಟ್ಸ್ ಫೆಡರೇಶನ್ ಬೃಹತ್ ಪ್ರತಿಭಟನೆಯನ್ನು ನಡೆಸಿತು. ಪಾಕಿಸ್ಥಾನ ತಮ್ಮ ಪ್ರದೇಶಕ್ಕೆ ಭಯೋತ್ಪಾದಕರನ್ನು ಕಳುಹಿಸಿ...
Date : Saturday, 19-08-2017
ನವದೆಹಲಿ: ಮಹಾತ್ಮ ಗಾಂಧಿ ಸಿರೀಸ್ನ ರೂ.50 ಮುಖಬೆಲೆಯ ಹೊಸ ನೋಟ್ಗಳನ್ನು ಆರ್ಬಿಐ ಹೊರ ತರುತ್ತಿದೆ. ಇದರ ಮಾದರಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದ್ದು, ಮುಂಭಾಗದಲ್ಲಿ ಗಾಂಧೀಜಿ ಭಾವಚಿತ್ರವಿದ್ದರೆ, ಹಿಂದೆ ಐತಿಹಾಸಿಕ ಹಂಪಿಯ ಕಲ್ಲಿನ ರಥ ರಾರಾಜಿಸುತ್ತಿದೆ. ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಸಹಿ ಇದರಲ್ಲಿದ್ದು,...
Date : Friday, 18-08-2017
ಬೆಂಗಳೂರು: ರಾಜ್ಯ ಸರ್ಕಾರದ ದುರಾಡಳಿ ಮತ್ತು ಭ್ರಷ್ಟ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶುಕ್ರವಾರ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ‘ವಿಧಾನ ಸೌಧ ಚಲೋ’ವನ್ನು ನಡೆಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಧೋರಣೆಗಳನ್ನು ಖಂಡಿಸಿದರು....
Date : Friday, 18-08-2017
ನವದೆಹಲಿ: ಕೇಂದ್ರ ಸರ್ಕಾರದ ಮುದ್ರಾ ಸಾಲ ಯೋಜನೆಯ ಲಾಭವನ್ನು ಶೇ.78ರಷ್ಟು ಮಹಿಳೆಯರೇ ಪಡೆದುಕೊಂಡಿದ್ದಾರೆ. ಒಟ್ಟು 6.2 ಕೋಟಿ ಮಹಿಳೆಯರು ಮುದ್ರಾ ಸಾಲ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಯೋಜನೆಯಡಿ ರೂ.3, 55,590 ಕೋಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರೂ.1,78,313 ಕೋಟಿ...
Date : Friday, 18-08-2017
ನ್ಯೂಯಾರ್ಕ್: ಫಾರ್ಚ್ಯುನ್ ಮ್ಯಾಗಜೀನ್ನ 40 ವರ್ಷದೊಳಗಿನ ಜಗತ್ತಿನ ಪ್ರಭಾವಿ 40 ಮಂದಿಯ ಪಟ್ಟಿಯಲ್ಲಿ ಭಾರತೀಯ ಮೂಲದ 5 ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತೀಯ ಮೂಲದ ಐರಿಶ್ ಪ್ರಧಾನಿ ಲಿಯೋ ವಡರ್ಕರ್, ಆ್ಯಪಲ್ನ ರಿಸರ್ಚ್ ಕಿಟ್, ಕೇರ್ ಕಿಟ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಿವ್ಯಾ ನಾಗ್,...
Date : Friday, 18-08-2017
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಕ್ಕಿಂನ ಡೋಕ್ಲಾಂನಲ್ಲಿ ಭಾರತ-ಚೀನಾ ನಡುವೆ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಜಪಾನ್ ಭಾರತ ಮತ್ತು ಭೂತಾನ್ಗೆ ಬೆಂಬಲ ವ್ಯಕ್ತಪಡಿಸಿದೆ. ಡೋಕ್ಲಾಂನಲ್ಲಿ ಭಾರತ ಸೇನೆಯನ್ನು ನಿಯೋಜಿಸಿರುವ ಕ್ರಮದಲ್ಲಿ ಬದಲಾವಣೆಯಿಲ್ಲ ಎಂದು ಜಪಾನ್ನ ರಾಯಭಾರಿ ಕೆಂಜಿ ಹಿರಮಸ್ತು ಹೇಳಿದ್ದಾರೆ. ‘ದೋಕ್ಲಾಂನಲ್ಲಿನ ಪರಿಸ್ಥಿತಿಯನ್ನು...
Date : Friday, 18-08-2017
ಬೆಂಗಳೂರಿನ ಕೆರೆಗಳು ರಾಸಾಯನಿಕಯುಕ್ತ ನೊರೆಗಳನ್ನು ಹೊರ ಚಿಮ್ಮಿಸುತ್ತಿದೆ. ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕಾದ ಸರ್ಕಾರ ಮಾತ್ರ ನಿದ್ರೆಯ ಮೂಡ್ನಿಂದ ಇನ್ನೂ ಹೊರಬಂದಿಲ್ಲ. ಆದರೆ ಶಾಲಾ ವಿದ್ಯಾರ್ಥಿಗಳ ತಂಡವೊಂದು ಕೆರೆಯ ಮಾಲಿನ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 10ನೇ ತರಗತಿಯ ವಿಖ್ಯಾತ್...
Date : Friday, 18-08-2017
ಮುಂಬಯಿ: ‘ನದಿಗಳಿಗಾಗಿ ಸಮಾವೇಶ’ವನ್ನು ಆಯೋಜಿಸಿರುವ ಆಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ ಅವರು ದೇಶದ ಬೆಳವಣಿಗೆಯ ಪಥವನ್ನು ಮತ್ತು ಅನಾಣ್ಯೀಕರಣವನ್ನು ಕೊಂಡಾಡಿದ್ದಾರೆ. ಹಣ ಎಂಬುದು ಕೇವಲ ವ್ಯವಹಾರಿಕ ವಿಧಾನವೇ ಹೊರತು ಸರಕು ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅನಾಣ್ಯೀಕರಣದಿಂದ ಇದು ಸಾಬೀತಾಗಿದೆ...
Date : Friday, 18-08-2017
ನವದೆಹಲಿ: ವಿದ್ಯುತ್ ಪ್ರಸರಣ ವಲಯ ಮತ್ತು ಟೆಲಿಕಾಂ ವಲಯಗಳ ವ್ಯವಹಾರಗಳಿಗಾಗಿ ತನ್ನ ನೆಲಕ್ಕೆ ಪ್ರವೇಶಿಸುವ ವಿದೇಶಿ ಕಂಪನಿಗಳಿಗೆ ನೀತಿ, ನಿಯಮಗಳನ್ನು ಭಾರತ ಬಿಗಿಗೊಳಿಸುತ್ತಿದೆ. ಚೀನಾವನ್ನು ಗುರಿಯಾಗಿಸಿಯೇ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ ಎನ್ನಲಾಗಿದೆ. ಚೀನಾದ ಸಂಸ್ಥೆಗಳಾದ ಹರ್ಬಿನ್ ಎಲೆಕ್ಟ್ರಿಕ್, ದಾಂಗ್ಫಾಂಗ್ ಎಲೆಕ್ಟ್ರಾನಿಕ್ಸ್, ಶಾಂಘೈ ಎಲೆಕ್ಟ್ರಿಕ್ಸ್...
Date : Friday, 18-08-2017
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗುರುವಾರ MobiKwikನ ಸಹಭಾಗಿತ್ವದೊಂದಿಗೆ ಮೊಬೈಲ್ ವ್ಯಾಲೆಟ್ ಆರಂಭಿಸಿದೆ. ಈ ಮೂಲಕ ತನ್ನ 100 ಮಿಲಿಯನ್ ಬಳಕೆದಾರರಿಗೆ ಒನ್ ಟ್ಯಾಪ್ ಬಿಲ್ ಪೇಮೆಂಟ್ ಲಭ್ಯವಾಗುವಂತೆ ಮಾಡಿದೆ. ಅಷ್ಟೇ ಅಲ್ಲದೇ ಬಳಕೆದಾರರು ಡಿಜಿಟಲ್ ವ್ಯಾಲೆಟ್ನ್ನು ದೇಶದಾದ್ಯಂತದ ಸುಮಾರು 1.5 ವ್ಯಾಪಾರಸ್ಥರೊಂದಿಗೆ ಬಳಸಬಹುದಾಗಿದೆ....