News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುನಿಚ್ ವರ್ಲ್ಡ್ ಕಪ್: ಬಂಗಾರ ಗೆದ್ದ ಭಾರತದ ತೇಜಸ್ವಿನಿ ಸಾವಂತ್

ನವದೆಹಲಿ: ಜರ್ಮನಿಯ ಮುನಿಚ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್‌ನ ಆರಂಭಿಕ ದಿನದಲ್ಲೇ ಭಾರತ ಶೂಟರ್ ತೇಜಸ್ವಿನಿ ಸಾವಂತ್ ಅವರು ಮಹಿಳೆಯರ 50ಮೀಟರ್ ರೈಫಲ್ ಪ್ರೋನ್ ಈವೆಂಟ್‌ನಲ್ಲಿ ಬಂಗಾರದ ಪದಕವನ್ನು ಜಯಿಸಿದ್ದಾರೆ. ಸಾವಂತ್ ಅವರು 621.4 ಪಾಯಿಂಟ್‌ಗಳನ್ನು ಪಡೆದು ಬಂಗಾರ ಗೆದ್ದರೆ, ಭಾರತದ ಮತ್ತೊಬ್ಬ...

Read More

ಪೆಟ್ರೋಲ್ ದರ ತಗ್ಗಿಸಿದರೆ ಜನ ಕಲ್ಯಾಣ ಯೋಜನೆಗಳಿಗೆ ತೊಂದರೆಯಾಗಲಿದೆ: ಗಡ್ಕರಿ

ನವದೆಹಲಿ: ದೇಶದಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದೆ. ಆದರೂ ದರ ಕಡಿತಗೊಳಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ. ಒಂದು ವೇಳೆ ಪೆಟ್ರೋಲ್ ಮತ್ತು ಡಿಸೇಲ್‌ಗಳಿಗೆ ಸಬ್ಸಿಡಿ ನೀಡಲು ಆರಂಭಿಸಿದರೆ ಸರ್ಕಾರ ಅನುಷ್ಠಾನಗೊಳಿಸಲು ಯೋಜಿಸಿರುವ ಜನ ಕಲ್ಯಾಣ...

Read More

ಯುಪಿಯ 12 ಶಾಸಕರಿಗೆ ಬೆದರಿಕೆ ಕರೆ: ಎಸ್‌ಐಟಿ ತನಿಖೆಗೆ ಆದೇಶಿಸಿದ ಯೋಗಿ

ಲಕ್ನೋ: ಉತ್ತರಪ್ರದೇಶದ ಸುಮಾರು 12 ಮಂದಿ ಶಾಸಕರಿಗೆ, ಅದರಲ್ಲೂ ಬಹುತೇಕ ಬಿಜೆಪಿ ಶಾಸಕರಿಗೆ ಬೆದರಿಕೆ ಕರೆಗಳು ಬಂದಿದ್ದು, ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಳಪಡಿಸಲು ಸಿಎಂ ಯೋಗಿ ಆದಿತ್ಯನಾಥ ಅವರು ನಿರ್ಧರಿಸಿದ್ದಾರೆ. ಫೋನ್ ಕರೆ ಮತ್ತು ವಾಟ್ಸಾಪ್ ಮೆಸೇಜ್ ಮೂಲಕ 12...

Read More

ಕ್ರೀಡಾ ಸಚಿವರ ಚಾಲೆಂಜ್ ಸ್ವೀಕರಿಸಿದ ವಿರಾಟ್, ವಿರಾಟ್ ಚಾಲೆಂಜ್ ಸ್ವೀಕರಿಸಿದ ಮೋದಿ

ನವದೆಹಲಿ: ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ನೀಡಿದ ಫಿಟ್‌ನೆಟ್ ಚಾಲೆಂಜ್‌ನ್ನು ಸ್ವೀಕರಿಸಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ತಮ್ಮ ಫಿಟ್‌ನೆಸ್ ವರ್ಕ್‌ಔಟ್‌ನ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ, ಕ್ರಿಕೆಟಿಗ ಎಂಎಸ್ ಧೋನಿಗೆ...

Read More

8 ತಿಂಗಳ ಶಿಶು ಹತ್ಯೆ: ಪಾಕಿಸ್ಥಾನ ಹೈಕಮಿಷನರ್‌ಗೆ ಭಾರತ ಸಮನ್ಸ್

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂತರ ಕದನ ವಿರಾಮ ಉಲ್ಲಂಘನೆ ಮತ್ತು ಭಾರತೀಯ ನಾಗರಿಕರ ಹತ್ಯೆಯ ಹಿನ್ನಲೆಯಲ್ಲಿ ಭಾರತ ದೆಹಲಿಯಲ್ಲಿನ ಪಾಕಿಸ್ಥಾನ ಹೈಕಮಿಷನರ್‌ಗೆ ಸಮನ್ಸ್ ಜಾರಿಗೊಳಿಸಿ, ತನ್ನ ಖಂಡನೆಯನ್ನು ವ್ಯಕ್ತಪಡಿಸಿದೆ. ಪಾಕಿಸ್ಥಾನದ ಕಡೆಯಿಂದ ನಡೆದ ಗುಂಡಿನ ದಾಳಿಗೆ ಕಾಶ್ಮೀರದ 8 ತಿಂಗಳ ಮಗವೊಂದು...

Read More

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಹೆಚ್. ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಹೆಚ್. ಡಿ. ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಾ| ಜಿ. ಪರಮೇಶ್ವರ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ವಜುಬಾಯಿ ವಾಲಾ ಅವರು ವಿಧಾನಸೌಧದ...

Read More

ರಾಹುಲ್ ಗಾಂಧಿಗೆ 6ನೇ ಕ್ಲಾಸ್ ಪುಸ್ತಕ ಗಿಫ್ಟ್ ಮಾಡುತ್ತೇವೆ: ಬಿಜೆಪಿ

ನವದೆಹಲಿ: ತಮಿಳುನಾಡಿನಲ್ಲಿ ನಡೆಯುತ್ತಿರುವ ಸ್ಟೆರ್‌ಲೈಟ್ ಪ್ಲಾಂಟ್ ವಿರುದ್ಧದ ಪ್ರತಿಭಟನೆಯ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಕೊಲ್ಲಲಾಗುತ್ತಿದೆ ಎಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ‘ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸುತ್ತಿರುವುದಕ್ಕಾಗಿ...

Read More

‘ನಾವಿಕ ಸಾಗರ್ ಪರಿಕ್ರಮ’ ತಂಡವನ್ನು ಭೇಟಿಯಾದ ಮೋದಿ

ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ಯಶಸ್ವಿಯಾಗಿ ‘ನಾವಿಕ ಸಾಗರ್ ಪರಿಕ್ರಮ’ ನಡೆಸಿ ವಾಪಾಸ್ಸಾಗಿರುವ ಭಾರತೀಯ ನೌಕಾದಳದ ಮಹಿಳಾ ಸದಸ್ಯರನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ನೌಕಾಯಾನದ ಮೂಲಕ ಜಗತ್ತು ಸುತ್ತಿದ ದೇಶದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಈ...

Read More

ಮೋದಿಯೊಂದಿಗೆ ತೀಸ್ತಾ, ರೊಹಿಂಗ್ಯಾ ವಿಷಯ ಪ್ರಸ್ತಾಪಿಸಲಿದ್ದಾರೆ ಬಾಂಗ್ಲಾ ಪ್ರಧಾನಿ

ನವದೆಹಲಿ: ವಿಶ್ವ ಭಾರತಿ ಘಟಿಕೋತ್ಸವದ ಸಂದರ್ಭದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಭೇಟಿಯಾಗಲಿದ್ದು, ತೀಸ್ತಾ ನದಿ ನೀರು ಹಂಚಿಕೆ, ರೊಹಿಂಗ್ಯಾ ವಿಷಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ಸಾಂಸ್ಕೃತಿಕ...

Read More

450 ಲಷ್ಕರ್ ಉಗ್ರರು ಒಳನುಸುಳಲು ಸಜ್ಜಾಗಿದ್ದಾರೆ: ಬಂಧಿತ ಉಗ್ರನ ಎಚ್ಚರಿಕೆ

ಶ್ರೀನಗರ: ಸುಮಾರು 450 ತರಬೇತಿ ಹೊಂದಿದ ಲಷ್ಕರ್ ಇ ತೋಯ್ಬಾ ಉಗ್ರರು ಭಾರತದೊಳಕ್ಕೆ ನುಸುಳಲು ಸಜ್ಜಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಂಧಿತ ಉಗ್ರನೊಬ್ಬ ಎನ್‌ಐಎಗೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬಂಧಿತ ಲಷ್ಕರ್ ಉಗ್ರ ಝಬಿವುಲ್ಲಾ ಅಲಿಯಾಸ್ ಹಂಝ ತನಿಖೆಯ ವೇಳೆ ಎನ್‌ಐಎಗೆ...

Read More

Recent News

Back To Top