ತಿರುವನಂತಪುರಂ; ಶತಮಾನದ ಮಹಾ ನೆರೆಗೆ ತತ್ತರಿಸಿ ಹೋಗಿರುವ ಕೇರಳ ಸಹಜ ಸ್ಥಿತಿಗೆ ಮರಳಲು ಬಹಳಷ್ಟು ಸಮಯ ಬೇಕಾಗಿದೆ. ಸದ್ಯ ಅಲ್ಲಿನ ಜನರು ಶುದ್ಧ ಕುಡಿಯುವ ನೀರು, ವಿದ್ಯುತ್, ವಾಸಿಸಲು ಮನೆಗಾಗಿ ಪರದಾಡುತ್ತಿದ್ದಾರೆ.
ನೆರೆಯಿಂದಾಗಿ ಬಹುತೇಕ ಮನೆಗಳ ವಿದ್ಯುತ್, ಪ್ಲಂಬಿಂಗ್ ಕೈಕೊಟ್ಟಿರುವುದರಿಂದ ನಮಗೆ ತಂತ್ರಜ್ಞರ ಸಹಕಾರದ ಅಗತ್ಯ ಸಾಕಷ್ಟಿದೆ ಎಂಬುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ.
ಕೇರಳವನ್ನು ಸಹಜ ಸ್ಥಿತಿಯತ್ತ ಮರಳಿಸುವ ಸಲುವಾಗಿ ನೂರಾರು, ಸಾವಿರಾರು ಸಂಖ್ಯೆಯ ಎಲೆಕ್ಟ್ರೀಶಿಯನ್ಗಳು, ಪ್ಲಂಬರ್ಗಳು, ಕಾರ್ಪೆಂಟರ್ ಮುಂತಾದ ತಂತ್ರಜ್ಞರು ಕೇರಳಕ್ಕೆ ಧಾವಿಸಬೇಕಾಗಿ ಮನವಿ ಮಾಡುತ್ತೇನೆ ಎಂದಿದ್ದಾರೆ.
Today we have close to a million people in relief camps. District collectors are working as coordinators & providing supplies. Central forces are providing amazing service to Kerala. Biggest heroes are fishermen,they came in 600 boats&are rescuing people:Union Minister KJ Alphons pic.twitter.com/BP2WEoHjSF
— ANI (@ANI) August 20, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.