
ಜಾಗತಿಕ ಮಟ್ಟದಲ್ಲಿ ಹರಡಿದ್ದ ಬರೋಬ್ಬರಿ 7,800 ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಸಂಬಂಧ ಹೊಂದಿದ್ದ ವಿದೇಶಿ ಮಿಷನರಿ ಮೈಕೆಲ್, ತನ್ನ ಶೈಕ್ಷಣಿಕ ಪಾಲುದಾರಿಕೆಯನ್ನು ಬಲಪಡಿಸಲು 2025 ರ ಆರಂಭದಲ್ಲಿ ಭಾರತಕ್ಕೆ ಬಂದಿಳಿದ. ಬಳಿಕ ಹನ್ನೆರಡು ತಿಂಗಳುಗಳಲ್ಲಿ, ಅವನು ಒಂಬತ್ತು ರಾಜ್ಯಗಳಲ್ಲಿ 15,000 ಕಿಲೋಮೀಟರ್ಗಳಿಗಿಂತಲೂ ಹೆಚ್ಚು ಪ್ರಯಾಣ ಮಾಡಿದ. ಈ ವೇಳೆ ಆತ ಮಿಷನರಿ ಶಾಲೆಗಳ ವಿರುದ್ಧ ದಾಖಲಾದ 32 ಪ್ರಕರಣಗಳ ಮೇಲೆ ಕಣ್ಣಾಡಿಸಿದ. ಹಿಂದೂ ಆಚರಣೆಗಳನ್ನು ನಿಗ್ರಹಿಸಿದ್ದಕ್ಕಾಗಿ, ತಿಲಕಗಳನ್ನು ಅಳಿಸಿ ಹಾಕಿದ್ದಕ್ಕಾಗಿ, ರಾಖಿಗಳನ್ನು ಕತ್ತರಿಸಿದ್ದಕ್ಕಾಗಿ, ಹಿಂದೂ ಮಂತ್ರ ಪಠಿಸಿದವರನ್ನು ಶಿಕ್ಷಿಸಿದ್ದಕ್ಕಾಗಿ ಹೀಗೆ ಹಲವು ಕಾರಣಗಳಿಗಾಗಿ ಪ್ರಕರಣಗಳು ದಾಖಲಾಗಿದ್ದು ಆತನ ಗಮನಕ್ಕೆ ಬಂತು. ಇನ್ನೊಂದೆಡೆ ಹಿಂದೂ ಆಚರಣೆಗಳನ್ನು ತೀವ್ರವಾಗಿ ವಿರೋಧಿಸುವ ಈ ಶಾಲೆಗಳಲ್ಲಿ ಕ್ರಿಸ್ಮಸ್ ಆಚರಣೆ ಮಾತ್ರ ವಿಜ್ರಂಭಣೆಯಿಂದ ಎಲ್ಲಾ ಧರ್ಮದ ಮಕ್ಕಳು ಸೇರಿಕೊಂಡು ಆಚರಿಸುತ್ತಿರುವುದನ್ನು ನೋಡಿ ಆತ ಖುಷಿಯೂ ಪಟ್ಟ.
ಜನವರಿ 16, 2025 ರಂದು, ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಕಾರ್ವಿ ಪಟ್ಟಣದ ಸೇಂಟ್ ಥಾಮಸ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿರುವ ಅಪ್ರಾಪ್ತ ಹಿಂದೂ ವಿದ್ಯಾರ್ಥಿ ಹರ್ಷ್ ಪಾಂಡೆ “ಜೈ ಶ್ರೀ ರಾಮ್” ಹೇಳಿದ್ದಕ್ಕೆ ಆತ ಪರೀಕ್ಷೆ ಬರೆಯದಂತೆ ತಡೆಯಲಾದ ಪ್ರಕರಣ ಆತನ ಆಸಕ್ತಿ ಕೆರಳಿಸಿತು. 10 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಹರ್ಷ್ ಜೈ ಶ್ರೀರಾಮ್ ಹೇಳಿ ಇನ್ನೊಬ್ಬ ವಿದ್ಯಾರ್ಥಿಯನ್ನು ಶಾಲಾ ಕೊಠಡಿಯೊಳಗೆ ಸ್ವಾಗತ ಮಾಡಿದ್ದಕ್ಕೆ ಕೋಪಗೊಂಡ ಶಾಲಾ ಆಡಳಿತ ಮಂಡಳಿಯು ಅವನನ್ನು ಪರೀಕ್ಷೆಗೆ ಹಾಜರಾಗದಂತೆ ತಡೆದಿತ್ತು. ನಂತರ ಹರ್ಷ್ ತಂದೆ ಪೊಲೀಸರನ್ನು ಸಂಪರ್ಕಿಸಿದ್ದ ದೂರು ನೀಡಿದ್ದರಿಂದ ಶಾಲೆಯ ಮೇಲೆ ಪ್ರಕರಣ ದಾಖಲಾಗಿತ್ತು. ಇದು ಭಾರೀ ಸುದ್ದಿಯನ್ನೂ ಮಾಡಿತ್ತು.
ಮೈಕೆಲ್ ಮಾರ್ಚ್ 2025 ರಲ್ಲಿ ರಾಜಸ್ಥಾನಕ್ಕೆ ಪ್ರಯಾಣಿಸುತ್ತಿದ್ದಾಗ, ಜೈಪುರದ ಸೋಫಿಯಾ ಶಾಲೆಯು ವಿದ್ಯಾರ್ಥಿಗಳು ಶಾಲೆಗೆ ಹೋಳಿ ಬಣ್ಣಗಳನ್ನು ತರುವುದನ್ನು ನಿಷೇಧಿಸಿದ ಬಗ್ಗೆ ತಿಳಿದುಕೊಂಡ. ಆ ಶಾಲೆ ಮಕ್ಕಳ ಪೋಷಕರಿಗೆ ನೀಡಿದ ಸಂದೇಶದಲ್ಲಿ
“ಹೋಳಿ ಹಬ್ಬ ಸಮೀಪಿಸುತ್ತಿರುವುದರಿಂದ, ನಾವು ಹೋಳಿ ಬಣ್ಣಗಳನ್ನು ಶಾಲೆಗೆ ತರದಂತೆ ವಿದ್ಯಾರ್ಥಿಗಳನ್ನು ವಿನಂತಿಸುತ್ತೇವೆ. ಎಲ್ಲಾ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಈ ಕ್ರಮ. ಯಾವುದೇ ವಿದ್ಯಾರ್ಥಿ ಬಣ್ಣ ಮತ್ತೆಕೊಂಡು ಬರುವುದು ಕಂಡುಬಂದರೆ, ಅವನು/ಅವಳು ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ” ಎಂದಿತ್ತು
ಮೈಕೆಲ್ ರಾಜಸ್ಥಾನದಿಂದ ಬಿಹಾರಕ್ಕೆ ತೆರಳುತ್ತಿದ್ದಾಗ, ಮುಂಗೇರ್ ಜಿಲ್ಲೆಯಲ್ಲಿ 24ಕ್ಕೂ ಅಧಿಕ ಹಿಂದೂ ವಿದ್ಯಾರ್ಥಿಗಳು ಕೈಗೆ ರಕ್ಷೆ ಕಟ್ಟಿದ್ದಕ್ಕಾಗಿ ಶಾಲಾ ಶಿಕ್ಷಕರಿಂದ ಥಳಿಸಲ್ಪಟ್ಟ ವಿಷಯ ಆತನ ಗಮನ ಸೆಳೆಯಿತು. ಮಕ್ಕಳನ್ನು ಥಳಿಸಿದ ನಂತರ ಗಲಾಟೆ ಭುಗಿಲೆದ್ದಿತು. ಮಾಧ್ಯಮ ವರದಿಗಳ ಪ್ರಕಾರ, ಸುಮಾರು 30 ವಿದ್ಯಾರ್ಥಿಗಳ ಪೋಷಕರು ಮೇ 15, 2025 ರಂದು ಟೌನ್ ಹೈಸ್ಕೂಲ್ ಆವರಣಕ್ಕೆ ಆಗಮಿಸಿ, ಘಟನೆಯನ್ನು ಆಕ್ಷೇಪಿಸಿ ಪ್ರತಿಭಟಿಸಿದ್ದರು ಇಬ್ಬರು ಕ್ರಿಶ್ಚಿಯನ್ ಶಿಕ್ಷಕರು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಲ್ಲೆ ಮಾಡಿರುವುದನ್ನು ಖಂಡಿಸಿದ್ದರು. ಸೆಪ್ಟೆಂಬರ್ 25, 2024 ರಂದು ಬಕ್ಸಾರ್ ಜಿಲ್ಲೆಯಲ್ಲಿ ವರದಿಯಾದ ಇದೇ ರೀತಿಯ ಘಟನೆಯಲ್ಲಿ, ತಿಲಕ ಹಚ್ಚಿ ರಕ್ಷಾ ಸೂತ್ರ ಧರಿಸಿದ್ದ ವಿದ್ಯಾರ್ಥಿಯನ್ನು ಥಳಿಸಲಾಗಿತ್ತು.
ಜೂನ್ 2025 ರಲ್ಲಿ ಈಶಾನ್ಯ ಭಾರತ ಅಸ್ಸಾಂನ ಸೋನಿತ್ಪುರ ಜಿಲ್ಲೆಯ ಸಿರ್ಜುಲಿಯ ಡಾನ್ ಬಾಸ್ಕೋ ಶಾಲೆಯ ಕ್ಯಾಥೋಲಿಕ್ ಶಿಕ್ಷಕನೊಬ್ಬ ಹಿಂದೂ ಮಗುವಿನ ಹಣೆಯಿಂದ ತಿಲಕವನ್ನು ಬಲವಂತವಾಗಿ ತೆಗೆದಿದ್ದ ಪ್ರಕರಣ ಮೈಕೆಲ್ ಆಸಕ್ತಿ ಕೆರಳಿಸಿತ್ತು. ಮತ್ತೆ ತಿಲಕ ಹಚ್ಚಿ ಬಂದರೆ ಶಾಲೆಯಿಂದ ಹೊರಕಳುಹಿಸುವ ಬೆದರಿಕೆಯನ್ನೂ ಮಗುವಿಗೆ ಹಾಕಲಾಗಿತ್ತು. ಮಗು ಘಟನೆಯನ್ನು ತನ್ನ ಪೋಷಕರಿಗೆ ವಿವರಿಸಿದ್ದ ನಂತರ ವಿವಾದ ಭುಗಿಲೆದ್ದಿತ್ತು
ಜುಲೈ 31, 2025 ರಂದು, ದುರ್ಗ್ನ ಬಾಗ್ದುಮಾರ್ ಗ್ರಾಮದ ಮದರ್ ತೆರೇಸಾ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಇಲಾ ಇವಾನ್ ಕೊಲ್ವಿನ್ ನರ್ಸರಿಯ ಮೂರುವರೆ ವರ್ಷದ ಪುಟಾಣಿ ʼರಾಧೆ ರಾಧೆʼ ಎಂದು ಹೇಳಿದ್ದಕ್ಕೆ ಹೊಡೆದು ಶಿಕ್ಷೆಯಾಗಿ ಅದರ ಬಾಯಿಗೆ ಟೇಪ್ ಹಾಕಿದ್ದಳು. ಘಟನೆ ದೊಡ್ಡದಾಗಿ ಸುದ್ದಿ ಮಾಡುತ್ತಿದ್ದಂತೆ ಆಕೆಯನ್ನು ಬಂಧಿಸಲಾಯಿತು.
ಆಗಸ್ಟ್ 10, 2025 ರಂದು ಭಾರತ ರಕ್ಷಾ ಬಂಧನವನ್ನು ಆಚರಿಸುತ್ತಿದ್ದಂತೆ, ವಿಕಾಸ್ ನಗರದ ಫಿಡೆಲಿಸ್ ಶಾಲೆಯು ಬೆಳಗಿನ ಪ್ರಾರ್ಥನಾ ಸಭೆಯ ಸಮಯದಲ್ಲಿ ವಿದ್ಯಾರ್ಥಿಗಳ ರಾಖಿಗಳನ್ನು ಬಲವಂತವಾಗಿ ಕತ್ತರಿಸಿತು. ಆರೋಪದ ನಂತರ ಉತ್ತರ ಪ್ರದೇಶದ ಲಕ್ನೋದಲ್ಲಿ ವಿವಾದ ಭುಗಿಲೆದ್ದಿತು.
2025 ರಲ್ಲಿ ಮಾತ್ರವಲ್ಲದೆ ಅದರ ಹಿಂದಿನ ವರ್ಷಗಳಲ್ಲಿಯೂ ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಮೈಕೆಲ್ ಇಂತಹ ಬಹಳಷ್ಟು ಪ್ರಕರಣಗಳ ಬಗ್ಗೆಯೂ ಸ್ವವಿವರವಾದ ಮಾಹಿತಿಯನ್ನು ಸಂಗ್ರಹಿಸಿಟ್ಟಿದ್ದ.
ತಿಂಗಳು ಉರುಳುತ್ತಿತ್ತು, ಡಿಸೆಂಬರ್ ಬಂದಿತ್ತು, ಮೈಕೆಲ್ ಭಾರತದಾದ್ಯಂತ ಶಾಲಾ ಕ್ಯಾಲೆಂಡರ್ಗಳಲ್ಲಿ ಏಕರೂಪತೆಯನ್ನು ಕಂಡುಕೊಂಡ. ಡಿಸೆಂಬರ್ನಲ್ಲಿ ಯಾವುದೇ ಶಾಲೆಗಳು ಸಲಹೆಗಳು, ನಿಷೇಧಗಳು ಅಥವಾ ಶಿಸ್ತಿನ ಸೂಚನೆಗಳನ್ನು ನೀಡಿಲ್ಲ. ಬದಲಾಗಿ, ಶಾಲೆಗಳ ಕಾರಿಡಾರ್ಗಳು ಹಬ್ಬದ ಸ್ಥಳಗಳಾಗಿ ರೂಪಾಂತರಗೊಂಡವು – ಕ್ರಿಸ್ಮಸ್ ಮರಗಳು ತರಗತಿ ಕೊಠಡಿಗಳನ್ನು ಅಲಂಕರಿಸಿದವು, ಕ್ರೈಸ್ಥನ ಜನನ ದೃಶ್ಯಗಳು ಆವರಣಗಳಲ್ಲಿ ಕಾಣಿಸಿಕೊಂಡವು ಮತ್ತು ವಿದ್ಯಾರ್ಥಿಗಳು ಶಾಲಾ ಸಮಯದಲ್ಲಿ ಕ್ಯಾರೋಲ್ಗಳನ್ನು ಪೂರ್ವಾಭ್ಯಾಸ ಮಾಡಿದರು. ಅವರ ಪೋಷಕರನ್ನು ಆಹ್ವಾನಿಸಲಾಯಿತು, ಅಧಿಕೃತ ಶಾಲಾ ಹ್ಯಾಂಡಲ್ಗಳಲ್ಲಿ ಕ್ರಿಸ್ಮಸ್ ಹಬ್ಬದ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಯಿತು ಮತ್ತು ಆಚರಣೆಗಳನ್ನು “ಸಂತೋಷ,” “ಮೌಲ್ಯಗಳು” ಮತ್ತು “ಜಾಗತಿಕ ಸಂಸ್ಕೃತಿ”ಯ ಪಾಠಗಳಾಗಿ ರೂಪಿಸಲಾಯಿತು.
ಅನೇಕ ಸಂಸ್ಥೆಗಳಲ್ಲಿ, ಕ್ರಿಸ್ಮಸ್ ಸಭೆಗಳು ನಿತ್ಯದ ಪ್ರಾರ್ಥನೆಗಳನ್ನು ಬದಲಾಯಿಸಿದವು, ಸಾಂಟಾ ಕ್ಲಾಸ್ ಭೇಟಿಗಳನ್ನು ಬೋಧನೆಯ ಸಮಯದಲ್ಲೇ ಆಯೋಜಿಸಲಾಯಿತು ಮತ್ತು ವಿದ್ಯಾರ್ಥಿಗಳನ್ನು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಸ್ಪಷ್ಟವಾಗಿ ಬೇರೂರಿರುವ ನಾಟಕಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಯಿತು – ಕೆಲವೊಮ್ಮೆ ಇದು ಕಡ್ಡಾಯವಾಗಿತ್ತು. ಈ ಚಟುವಟಿಕೆಗಳನ್ನು ಧಾರ್ಮಿಕ ಅಥವಾ ಐಚ್ಛಿಕ ಎಂದು ಲೇಬಲ್ ಮಾಡಲಾಗಿಲ್ಲ; ಅವು ನಿರ್ವಹಣೆಯಿಂದ ಅನುಮೋದಿಸಲ್ಪಟ್ಟ ಸಾಂಸ್ಥಿಕ ಕಾರ್ಯಕ್ರಮಗಳಾಗಿದ್ದವು ಮತ್ತು ಒಳಗೊಳ್ಳುವಿಕೆಯ ಸಂಕೇತಗಳಾಗಿ ಆಚರಿಸಲ್ಪಟ್ಟವು.
ಈ ವ್ಯತ್ಯಾಸವು ವ್ಯವಸ್ಥಿತವಾಗಿತ್ತು ಎಂದು ಮೈಕೆಲ್ ಗಮನಿಸಿದ. ಶಿಸ್ತು ಅಥವಾ ಜಾತ್ಯಾತೀತೆಯ ಹೆಸರಿನಲ್ಲಿ ಹಿಂದೂ ಚಿಹ್ನೆಗಳನ್ನು ನಿಯಂತ್ರಿಸಲಾಯಿತು, ಪ್ರಶ್ನಿಸಲಾಯಿತು ಅಥವಾ ಅಳಿಸಿಯೇ ಹಾಕಲಾಯಿತು. ಆದರೆ ಕ್ರಿಸ್ಮಸ್ ಆಚರಣೆಗಳನ್ನು ಸಾಂಸ್ಕೃತಿಕ ರೂಢಿಗಳಿಗೆ ಏರಿಸಲಾಯಿತು. ಕ್ರಿಸ್ಮಸ್ ಅಲಂಕಾರಗಳ ವಿಷಯದಲ್ಲಿ ಯಾವುದೇ ಸುರಕ್ಷತೆಯ ಬಗೆಗಿನ ಸುತ್ತೋಲೆಗಳನ್ನು ಹೊರಡಿಸಿರಲಿಲ್ಲ. ಶಿಲುಬೆಗಳು, ಕ್ಯಾರೋಲ್ಗಳು ಅಥವಾ ಬೈಬಲ್ ನಿರೂಪಣೆಗಳ ಬಗ್ಗೆ ಯಾವುದೇ ಎಚ್ಚರಿಕೆಗಳನ್ನು ನೀಡಲಾಗಿಲ್ಲ. ಆದರೆ ಭಾರತದ ಅವಿಭಾಜ್ಯ ಭಾಗವೆಂಬಂತೆ ಅವುಗಳನ್ನು ಆಚರಿಸಲಾಯಿತು. ಹಿಂದೂ ಹಬ್ಬಗಳು ಸಾವಿರ ನಿಯಮಗಳ ನಡುವೆ ಕಳೆಗುಂದುವಂತೆ ಬೇರೆ ಮತಗಳ ಆಚರಣೆಗಳು ಕಳೆಗುಂದುವುದಿಲ್ಲ ಎಂಬುದನ್ನು ಮೈಕೆಲ್ ಈಗ ಅರ್ಥಮಾಡಿಕೊಂಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



