Date : Thursday, 16-03-2017
ಲಕ್ನೋ: ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಸಮಾಜವಾದಿ ನಾಯಕರುಗಳು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ತಮ್ಮ ಹಿಂದಿನ ದರ್ಪ, ಅಹಂಕಾರವನ್ನು ಈಗಲೂ ಮುಂದುವರೆಸುತ್ತಿದ್ದಾರೆ. ಸಮಾಜವಾದಿಯ ಮುಸ್ಲಿಂ ನಾಯಕನಾಗಿರುವ ಅಜಂಖಾನ್ ಗುರುವಾರ ರಾಮಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಕ್ಯಾಮೆರಾದ ಎದುರೇ ಧಮ್ಕಿ ಹಾಕಿದ್ದಾರೆ. ಚುನಾವಣೆಯಲ್ಲಿ ಗೆದ್ದ ಸರ್ಟಿಫಿಕೇಟ್...
Date : Thursday, 16-03-2017
ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಮಾರ್ಚ್ 16ರಂದು ರಾಷ್ಟ್ರೀಯ ಲಸಿಕಾ ದಿನವನ್ನು ಆಯೋಜಿಸಲಾಗುತ್ತದೆ. ಮೊದಲ ಬಾರಿ ಮಾ.16, 1995ರಂದು ಪೋಲಿಯೋ ಲಸಿಕೆ ನೀಡುವ ಮೂಲಕ ರಾಷ್ಟ್ರೀಯ ಲಿಸಿಕಾ ದಿನವನ್ನು ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರ ಲಸಿಕೆಯಿಂದ ತಡೆಗಟ್ಟಬಹುದಾದ 11 ರೋಗಗಳಿಗೆ ಉಚಿತ ಲಸಿಕೆ ಒದಗಿಸುತ್ತಿದೆ. ರಾಷ್ಟ್ರೀಯ...
Date : Thursday, 16-03-2017
ಚಂಡೀಗಢ: ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಅಮರೀಂದರ್ ಸಿಂಗ್ ಅವರು ಗುರುವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನೂತನ ಸಿಎಂರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಚಂಡೀಗಢದಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಸಿಂಗ್ ಬದ್ನೋರ್ ಅವರು ಅಮರೀಂದರ್ ಅವರಿಗೆ...
Date : Thursday, 16-03-2017
ಪಣಜಿ: ಗೋವಾದಲ್ಲಿ ಸರ್ಕಾರ ರಚಿಸಲು ತಮಗೆ ಬಹುಮತವಿದೆ ಎಂಬುದನ್ನು ಸಿಎಂ ಮನೋಹರ್ ಪರಿಕ್ಕರ್ ಅವರು ಗುರುವಾರ ಸಾಬೀತುಪಡಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆದಿದ್ದು, ಈ ವೇಳೆ ಬಿಜೆಪಿ ಪರ 22 ಮತಗಳು ಬಿದ್ದಿವೆ. 16ಮತಗಳು ವಿರುದ್ಧವಾಗಿ ಬಿದ್ದಿವೆ. ಗೋವಾದ 40 ಸದಸ್ಯ ಬಲದದ ವಿಧಾನಸಭೆಗೆ...
Date : Thursday, 16-03-2017
ನವದೆಹಲಿ: ಕೇಂದ್ರ ಸಚಿವ ಸಂಪುಟ ಜನವರಿ 1, 2017ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಶೇ.2 ಹಾಗೂ ಭತ್ಯೆ ಪರಿಹಾರ (ಡಿಆರ್)ದಲ್ಲಿ ಶೇ.4ರಷ್ಟು ಏರಿಕೆ ಮಾಡುವಂತೆ ಅನುಮೋದನೆ ನೀಡಿದೆ. ಇದು 48.65 ಕೇಂದ್ರ ಸರ್ಕಾರಿ ನೌಕರರು ಹಾಗೂ 55.51...
Date : Thursday, 16-03-2017
ನವದೆಹಲಿ: ನಿಂದಿಸುವ, ದೌರ್ಜನ್ಯಕ್ಕೊಳಪಡಿಸುವ ಮಕ್ಕಳನ್ನು ಹೆತ್ತವರು ತಮ್ಮ ಮನೆಯಿಂದ ಹೊರ ಹಾಕಬಹುದು ಎಂಬ ಮಹತ್ವದ ತೀರ್ಪನ್ನು ಗುರುವಾರ ದೆಹಲಿ ಹೈಕೋರ್ಟ್ ನೀಡಿದೆ. ಆಸ್ತಿಯನ್ನು ಕಾನೂನಾತ್ಮಕವಾಗಿ ಹೊಂದಿರುವವರೆಗೂ ಪೋಷಕರು ತಮ್ಮನ್ನು ಪೀಡಿಸುವ ಪುತ್ರ, ಪುತ್ರಿಯರನ್ನು ಹೊರಹಾಕಬಹುದಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹಿರಿಯ ನಾಗರಿಕರ...
Date : Thursday, 16-03-2017
ಜೈಪುರ: ಛಲ ಇದ್ದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದನ್ನು ಜೈಪುರದ ಮೂವರು ಬಾಲಕರು ತೋರಿಸಿಕೊಟ್ಟಿದ್ದಾರೆ. 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಚೇತನ್ಯ ಗೊಲೆಚ್ಚ, ಮ್ರಿಗಂಕ್ ಗುಜ್ಜರ್, ಉತ್ಸವ್ ಜೈನ್ ತಮ್ಮ ಪುಟ್ಟ ವಯಸ್ಸಲ್ಲೇ ‘ಸ್ಟಾರ್ಟ್ ಅಪ್’ ಒಂದನ್ನು ಆರಂಭಿಸಿದ್ದು ಮಾತ್ರವಲ್ಲ...
Date : Thursday, 16-03-2017
ಕಾರವಾರ: ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರಕನ್ನಡ ಕಳೆದ 36 ವರ್ಷದಲ್ಲಿ ಬರೋಬ್ಬರಿ 3,383 sq. km ಯಷ್ಟು ಅರಣ್ಯವನ್ನು ಕಳೆದುಕೊಂಡಿದೆ. ಈ ಮೂಲಕ ಆ ಜಿಲ್ಲೆ ತನ್ನ ಒಟ್ಟು ಅರಣ್ಯ ಪ್ರದೇಶ(10,280sq. km )ದ ಮೂರನೇ ಒಂದರಷ್ಟು ಭಾಗವನ್ನು ಕಳೆದುಕೊಂಡಿದೆ ಎಂದು ವರದಿಯೊಂದು...
Date : Thursday, 16-03-2017
ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ತನ್ನ ವಾರ್ಷಿಕ ಬಜೆಟ್ನ್ನು ಪ್ರಸ್ತುತಪಡಿಸಿದ್ದು, ರಾಜ್ಯದಲ್ಲಿ ಶಿಕ್ಷಣದ ಮೇಲಿನ ನಿಧಿಗಳ ಶೇರನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಅಂತೆಯೇ ರಾಜ್ಯದ ನಿರುದ್ಯೋಗಿ ಯುವಕರಿಗೆ ವಿಶೇಷ ನೆರವು ಒದಗಿಸಲಾಗುವುದು ಎಂದು ಘೋಷಿಸಿದೆ. ಆಂಧ್ರಪ್ರದೇಶ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸಕ್ತ...
Date : Thursday, 16-03-2017
ನವದೆಹಲಿ: ಸ್ಥಳಿಯಾಡಳಿತ ಚುನಾವಣೆಗಳಲ್ಲಿ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಲು ಬೇಡಿಕೆಯಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರು ಕಾಲದೊಂದಿಗೆ ಹಿಂದಕ್ಕೆ ಚಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ರಾಲೆಗಾಂವ್...