ನವದೆಹಲಿ: ನಿಂದಿಸುವ, ದೌರ್ಜನ್ಯಕ್ಕೊಳಪಡಿಸುವ ಮಕ್ಕಳನ್ನು ಹೆತ್ತವರು ತಮ್ಮ ಮನೆಯಿಂದ ಹೊರ ಹಾಕಬಹುದು ಎಂಬ ಮಹತ್ವದ ತೀರ್ಪನ್ನು ಗುರುವಾರ ದೆಹಲಿ ಹೈಕೋರ್ಟ್ ನೀಡಿದೆ.
ಆಸ್ತಿಯನ್ನು ಕಾನೂನಾತ್ಮಕವಾಗಿ ಹೊಂದಿರುವವರೆಗೂ ಪೋಷಕರು ತಮ್ಮನ್ನು ಪೀಡಿಸುವ ಪುತ್ರ, ಪುತ್ರಿಯರನ್ನು ಹೊರಹಾಕಬಹುದಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಹಿರಿಯ ನಾಗರಿಕರ ಮೇಲೆ ಸ್ವಂತ ಮಕ್ಕಳೇ ದೈಹಿಕ ಹಲ್ಲೆ, ಮಾನಸಿಕ ಕಿರುಕುಳಗಳನ್ನು ನೀಡುವುದನ್ನು ತಡೆಯುವ ಸಲುವಾಗಿ ಮತ್ತು ಮನೆಬಿಟ್ಟು ಹೋಗುವಂತೆ ಪೀಡಿಸುವುದನ್ನು ನಿಲ್ಲಿಸುವ ಸಲುವಾಗಿ ಈ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.
2016ರ ನವೆಂಬರ್ನಲ್ಲೂ ನ್ಯಾಯಾಲಯ ‘ಪುತ್ರನ ವೈವಾಹಿಕ ಸ್ಥಾನವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪೋಷಕರು ಆತನನ್ನು ಹೊರಹಾಕಬಹುದು. ಪುತ್ರ ಹೆತ್ತವರ ಕೃಪೆಯಲ್ಲಿ ಮಾತ್ರ ಅವರ ಮನೆಯಲ್ಲಿ ನೆಲೆಸಬಹುದಾಗಿದೆ’ ಎಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.