ಜೈಪುರ: ಛಲ ಇದ್ದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದನ್ನು ಜೈಪುರದ ಮೂವರು ಬಾಲಕರು ತೋರಿಸಿಕೊಟ್ಟಿದ್ದಾರೆ. 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಚೇತನ್ಯ ಗೊಲೆಚ್ಚ, ಮ್ರಿಗಂಕ್ ಗುಜ್ಜರ್, ಉತ್ಸವ್ ಜೈನ್ ತಮ್ಮ ಪುಟ್ಟ ವಯಸ್ಸಲ್ಲೇ ‘ಸ್ಟಾರ್ಟ್ ಅಪ್’ ಒಂದನ್ನು ಆರಂಭಿಸಿದ್ದು ಮಾತ್ರವಲ್ಲ ಅದಕ್ಕೆಬರೋಬ್ಬರಿ 3 ಕೋಟಿ ರೂ ಬಂಡವಾಳ ತರಲು ಯಶಸ್ವಿಯಾಗಿದ್ದಾರೆ.
‘ಇನ್ಫ್ಯೂಶನ್ ಬೆವರೇಜಸ್’ ಎಂಬ ಸ್ಟಾರ್ಟ್ಅಪ್ನ್ನು ಈ ಮೂವರು ಹುಟ್ಟುಹಾಕಿದ್ದಾರೆ. ಇವರ ಶಾಲೆಯಲ್ಲಿ ನಡೆದ ಎಂಟರ್ಪ್ರನರ್ಶಿಪ್ ಫೆಸ್ಟ್ ಇವರ ಅದೃಷ್ಟವನ್ನೇ ಬದಲಾಯಿಸಿದೆ. ಫ್ಲೇವರ್ಡ್ ವಾಟರ್ ಬಾಟಲಿಯನ್ನು ತಯಾರಿಸಿ ಇವರು ಫೆಸ್ಟ್ನಲ್ಲಿ ಭಾಗವಹಿಸಿದ್ದರು ಆದರೆ ಜಡ್ಜ್ಗಳನ್ನು ಇಂಪ್ರೆಸ್ ಮಾಡುವಲ್ಲಿ ಸೋತು ಮೊದಲ ರೌಂಡ್ನಲ್ಲೇ ಔಟ್ ಆದರು. ಆದರೆ ಅದೃಷ್ಟ ಎಂಬಂತೆ ಇದೇ ಫೆಸ್ಟ್ನಲ್ಲಿ 150 ಫ್ಲೇವರ್ಡ್ ವಾಟರ್ ಬಾಟಲಿ ನೀಡುವಂತೆ ಇವರಿಗೆ ಆರ್ಡರ್ ಸಿಕ್ಕಿತು.
ಅಲ್ಲಿ ವಾಟರ್ ಬಾಟಲ್ ಸಪ್ಲೈ ಮಾಡಿದ ಬಳಿಕ ಈ ಹುಡುಗರು ಹಿಂದೆ ತಿರುಗಿ ನೋಡಿಯೇ ಇಲ್ಲ. ಯಾವುದೇ ಸಂರಕ್ಷಕಗಳನ್ನು ಹಾಕದೆ ಫ್ಲೇವರ್ಡ್ ವಾಟರ್ ತಯಾರಿಸುವುದು ಇವರ ವಿಶೇಷತೆ. ತಮ್ಮ ಪ್ರೊಡಕ್ಟ್ನೊಂದಿಗೆ ಐಐಟಿ ಕಾನ್ಪುರ, ಐಐಎಂ-ಇಂಧೋರ್ನಲ್ಲಿ ಎಂಟರ್ಪ್ರೆನರ್ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರಿಗೆ ಬಂಡವಾಳ ಬರಲಾರಂಭಿಸಿದೆ. ಮಾಳವಿಯಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇವರಿಗೆ ಪೆಟೆಂಟ್ ದೊರಕಿಸಿ ಕೊಡಲು ಮುಂದಾಗಿದೆ.
ಜನವರಿಯಿಂದ ಇದುವರೆಗೆ ಒಟ್ಟು 8 ಸಾವಿರ ಕೆರ್ವ, ರೋಸ್, ಬೆಲ್ ಫ್ಲೇವಡ್ ವಾಟರ್ ಬಾಟಲ್ಗಳನ್ನು ಇವರು ಮಾರಾಟ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.