ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ತನ್ನ ವಾರ್ಷಿಕ ಬಜೆಟ್ನ್ನು ಪ್ರಸ್ತುತಪಡಿಸಿದ್ದು, ರಾಜ್ಯದಲ್ಲಿ ಶಿಕ್ಷಣದ ಮೇಲಿನ ನಿಧಿಗಳ ಶೇರನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಅಂತೆಯೇ ರಾಜ್ಯದ ನಿರುದ್ಯೋಗಿ ಯುವಕರಿಗೆ ವಿಶೇಷ ನೆರವು ಒದಗಿಸಲಾಗುವುದು ಎಂದು ಘೋಷಿಸಿದೆ.
ಆಂಧ್ರಪ್ರದೇಶ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸಕ್ತ ಹಣಕಾಸು ವರ್ಷದ ವಾರ್ಷಿಕ ಬಜೆಟ್ನಲ್ಲಿ 20,000 ಕೋಟಿ ರೂ. ನಿಯೋಜಿಸಿದೆ. ರಾಜ್ಯ ಹಣಕಾಸು ಸಚಿವ ಯಮನಾಲ ರಾಮಕೃಷ್ಣುಡು ಬಜೆಟ್ ಮಂಡಿಸಿದರು.
ಮೂಲಗಳ ಪ್ರಕಾರ, ಆಂಧ್ರ ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ 20,384 ಕೋಟಿ ರೂ. ನಿಯೋಜಿಸಿದ್ದು, ತಾಂತ್ರಿಕ ಶಿಕ್ಷಣಕ್ಕೆ 765 ಕೋಟಿ ರೂ. ನಿಗದಿಪಡಿಸಿದೆ. ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಪ್ರತ್ಯೇಕವಾಗಿ 398 ಕೋಟಿ ರೂ. ಹಂಚಿಕೆ ಮಾಡಿದೆ. ರಾಜ್ಯದ ನಿರುದ್ಯೋಗಿ ಯುವಕರಿಗಾಗಿ 500 ಕೋಟಿ ರೂ. ನಿಯೋಜನೆ ಮಾಡಿದೆ.
2016-17ನೇ ಆರ್ಥಿಕ ವರ್ಷದಲ್ಲಿ ಆಂಧ್ರ ಸರ್ಕಾರ ಶಿಕ್ಷಕ್ಕೆ 17,503 ಕೋಟಿ ರೂ. ನಿಯೋಜಿಸಿದ್ದು, 2017-18ನೇ ಆರ್ಥಿಕ ವರ್ಷದಲ್ಲಿ ಇದು ಶೇ.20ರಷ್ಟು ಏರಿಕೆಯಾಗಿದೆ.
ಮತ್ತೊಂದೆಡೆ, ಆಂಧ್ರ ಸರ್ಕಾರ ೧೧ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅಮರಾವತಿಯಲ್ಲಿ ಕ್ಯಾಂಪಸ್ ತೆರೆಯಲು ಅನುಮತಿಸಿದೆ. ಅದು ಮುಂಬರುವ ವರ್ಷಗಳಲ್ಲಿ ಆಂಧ್ರಪ್ರದೇಶವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಾಂತರಗೊಳಿಸಲು ಬಯಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.