Date : Monday, 28-05-2018
ಬೆಂಗಳೂರು: ಗರ್ಭಪಾತ ನಿರಾಕರಣೆಯಿಂದ 2012ರಲ್ಲಿ ಐರ್ಲೆಂಡ್‌ನಲ್ಲಿ ಸಾವಿಗೀಡಾದ ಭಾರತೀಯ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಅವರ ತಂದೆ, ತನ್ನ ಮಗಳ ಕಾರಣಕ್ಕೆ ಐರ್ಲೆಂಡ್ ದೇಶದ ಕಾನೂನು ಬದಲಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಸವಿತಾಳ ಸಾವಿಗೆ ನ್ಯಾಯ ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಸವಿತಾ...
Date : Friday, 25-05-2018
ಬೆಂಗಳೂರು: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಇಂದು ವಿಶ್ವಾಸಮಯಾಚನೆ ಮಾಡಲಿದ್ದಾರೆ. ಅವರು ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ನೀಡಿರುವ ಹೇಳಿಕೆ ಮಾತ್ರ ಈಗ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ವಿಶ್ವಾಸಮತಯಾಚನೆ ಬಳಿಕವಷ್ಟೇ ಕುಮಾರಸ್ವಾಮಿ 5 ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆಯೋ...
Date : Thursday, 24-05-2018
ಮಂಗಳೂರು: ಧರ್ಮಸ್ಥಳದ ಮಂಜುನಾಥೇಶ್ವರನ ಪಾದೋದಕವಾಗಿ ಸಹಸ್ರಾರು ಭಕ್ತರ ಪಾಲಿಗೆ ಪಾಪನಾಶಿನಿ ಎನಿಸಿರುವ ನೇತ್ರಾವತಿ ಮಾಲಿನ್ಯಗೊಂಡಿದ್ದಾಳೆ. ಆಸ್ತಿಕರ ಪಾಲಿನ ಶ್ರದ್ಧೆ, ಲಕ್ಷಾಂತರ ಜನರಿಗೆ ಜೀವಗಂಗೆ, ರೈತರ ಆಶಾಕಿರಣವಾಗಿರುವ ಈ ನದಿಯನ್ನು ಶುದ್ಧೀಕರಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಯುವಾ ಬ್ರಿಗೇಡ್, ಜೂನ್...
Date : Thursday, 24-05-2018
ಬೆಂಗಳೂರು: ನಾಳೆ ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಮತ್ತು ಕಾಂಗ್ರೆಸ್‌ನ ರಮೇಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಮೇಶ್ ಕುಮಾರ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸ್ಪೀಕರ್ ಅಭ್ಯರ್ಥಿಯಾಗಿದ್ದು, ಸುರೇಶ್ ಕುಮಾರ್ ಬಿಜೆಪಿಯ...
Date : Thursday, 24-05-2018
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಸಾಗಿಸಲಾಗುತ್ತಿದ್ದ ರೂ.87 ಕೋಟಿಗಿಂತಲೂ ಅಧಿಕ ಹಣವನ್ನು ವಸಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದರು, ಇದು 2013ರ ಚುನಾವಣೆಗಿಂತ ಐದು ಪಟ್ಟು ಹೆಚ್ಚಾಗಿದೆ. ಚುನಾವಣೆ ಘೋಷಣೆಯಾದ ಬಳಿಕ ಮೇ.11ರವರೆಗೆ ರೂ.87...
Date : Wednesday, 23-05-2018
ಮಂಗಳೂರು : ನಿಫಾ ವೈರಸ್‍ನ ಯಾವುದೇ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯಾಗಲೀ ಅಥವಾ ಮಂಗಳೂರು ನಗರದಲ್ಲಾಗಲೀ ಪತ್ತೆಯಾಗಿಲ್ಲ. ಮಂಗಳೂರು ನಗರಕ್ಕೆ ಹೊರ ರಾಜ್ಯಗಳಿಂದ ಬರುವ ರೋಗಿಗಳ ಬಗ್ಗೆ ತೀವ್ರ ನಿಗಾ ಇಡುವ ವ್ಯವಸ್ಥೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ನಿಫಾ ವೈರಸ್...
Date : Wednesday, 23-05-2018
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ದಿನವಾದ ಇಂದು ಬಿಜೆಪಿ ‘ಜನಮತ ವಿರೋಧಿ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಣ ಮೈತ್ರಿ ಅಪವಿತ್ರವಾದುದು, ಇವರುಗಳು ಜನಾದೇಶವನ್ನು ಹೈಜಾಕ್ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂಈ ಬಿಜೆಪಿ...
Date : Wednesday, 23-05-2018
ಬೆಂಗಳೂರು: ಜೆಡಿಎಸ್‌ನ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ ಪ್ರಮಾಣವಚನ ಸಮಾರಂಭಕ್ಕೆ ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರುಗಳು, ಸಿಎಂಗಳು ಆಗಮಿಸಲಿದ್ದಾರೆ. ಕಾಂಗ್ರೆಸ್...
Date : Tuesday, 22-05-2018
ಬೆಂಗಳೂರು: ಇತ್ತೀಚಿಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ಚುನಾವಣೆಗೂ ಮುನ್ನ ಹಲವಾರು ಅಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗಳು ಪತ್ತೆ...
Date : Monday, 21-05-2018
ಬೆಂಗಳೂರು: ಹಣದ ಆಮಿಷವೊಡ್ಡಿ ಬಿಜೆಪಿಗರು ತನ್ನ ಪತ್ನಿಗೆ ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ನಕಲಿಯಾಗಿದ್ದು, ಆ ಆಡಿಯೋದಲ್ಲಿನ ಮಹಿಳೆಯ ಧ್ವನಿ ನನ್ನ ಪತ್ನಿಯದ್ದಲ್ಲ ಎಂದು ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ‘ಬಿಜೆಪಿಗರು...