Date : Thursday, 03-12-2015
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶೀಘ್ರದಲ್ಲೇ ಪಾಕಿಸ್ಥಾನಕ್ಕೆ ಭೇಟಿ ಕೊಡುವ ಸಾಧ್ಯತೆಗಳು ಇವೆ ಎಂದು ವರದಿಗಳು ತಿಳಿಸಿದ್ದು, ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಫ್ಘಾನಿಸ್ತಾನದ ಬಗ್ಗೆ ನಡೆಯಲಿರುವ 14 ದೇಶಗಳ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಸುಷ್ಮಾ...
Date : Thursday, 03-12-2015
ಚೆನ್ನೈ: ತಮಿಳುನಾಡಿನಾದ್ಯಂತ ಸಂಭವಿಸುತ್ತಿರುವ ಭಾರೀ ಮಳೆಯಿಂದಾಗಿ ಸಾವಿರಾರು ಮಂದಿ ತಮ್ಮ ಮನೆಗಳಿಂದ ಹೊರಗುಳಿದಿದ್ದು, ಈ ಸಂಬಂಧ ಫೇಸ್‌ಬುಕ್ ಸೇಫ್ಟಿ ಚೆಕ್ ವೈಶಿಷ್ಟ್ಯತೆಯನ್ನು ಸಕ್ರಿಯಗೊಳಿಸಿದೆ. ಪೀಡಿತ ಪ್ರದೇಶದಲ್ಲಿರುವ ಫೇಸ್‌ಬುಕ್ ಬಳಕೆದಾರರು ತಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ’ಸುರಕ್ಷಿತ’ ಎಂದು ಗುರುತಿಸುವ ಮೂಲಕ ಭರವಸೆಯನ್ನು ಮೂಡಿಸಲು...
Date : Thursday, 03-12-2015
ನವದೆಹಲಿ: ನ್ಯಾ.ತೀರತ್ ಸಿಂಗ್ ಥಾಕೂರ್ ಅವರು ಗುರುವಾರ ದೇಶದ 43ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು 63 ವರ್ಷದ ತೀರತ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯನ್ಯಾಯಮೂರ್ತಿ ಎಚ್‌ಎಲ್ ದತ್ತು...
Date : Thursday, 03-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಿಧ ಸಂದರ್ಭಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು, ಮೋದಿಯೊಬ್ಬ ಪ್ರಾಮಾಣಿಕ ರಾಜಕಾರಣಿ ಮತ್ತು ಭಾರತದ ಬಗ್ಗೆ ಅವರಿಗೆ ಸ್ಪಷ್ಟ ದೃಷ್ಟಿಕೋನವಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ...
Date : Thursday, 03-12-2015
ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸುವರ್ಣ ಮಹೋತ್ಸವದ ಪ್ರಯುಕ್ತ ಡಿ. 15 ರಿಂದ ಎರಡು ದಿನಗಳ ಕಾಲ ವಿಶೇಷ ವರ್ಣಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದುಶ್ಚಟ ದುರಾಭ್ಯಾಸಗಳ ವಿರುದ್ಧಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ...
Date : Thursday, 03-12-2015
ಕಾಸರಗೋಡು : ಕುಂಬಳೆಗೆ ಸಮೀಪದ ನಾಯಿಕಾಪಿನಲ್ಲಿ ಹದಿನಾಲ್ಕನೇ ವರ್ಷದ ಏಕಾಹ ಭಜನೆ ಡಿಸೆಂಬರ್ 5ರಂದು ಬೆಳಗ್ಗಿನಿಂದ ಡಿ.6ರಂದು ಬೆಳಗ್ಗಿನ ತನಕ ನಿರಂತರ ನಡೆಯಲಿದೆ. ಊರ ಪರವೂರ ಇಪ್ಪತ್ತೈದಕ್ಕೂ ಹೆಚ್ಚು ತಂಡಗಳು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಆ ಪ್ರಯುಕ್ತ ಡಿಸೆಂಬರ್ ನಾಲ್ಕರಂದು ಹಸಿರುವಾಣಿ ಹೊರೆಕಾಣಿಕೆ...
Date : Thursday, 03-12-2015
ನವದೆಹಲಿ: ತೀವ್ರ ಸ್ವರೂಪದಲ್ಲಿ ಸುರಿದ ಮಳೆ ಚೆನ್ನೈ ಜನತೆಯನ್ನು ಸಂಕಷ್ಟದಲ್ಲಿ ದೂಡಿದೆ. ಅಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು ಇತರರೊಂದಿಗೆ ಸಂಪರ್ಕ ಸಾಧಿಸುವುದೇ ದೊಡ್ಡ ಸಾಹಸವಾಗಿದೆ. ಈ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳು ನೆರವಿನ ಹಸ್ತ ಚಾಚಿದೆ. ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಕಾಂ, ವೋಡಾಫೋನ್ ಚೆನ್ನೈ ಜನತೆಗೆ ಉಚಿತ...
Date : Thursday, 03-12-2015
ಸ್ಯಾನ್ ಬರ್ನಾರ್‌ಡಿನೋ: ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್‌ಡಿನೋದಲ್ಲಿ ವಿಕಲಚೇತನರಿಗಾಗಿ ಇರುವ ಸೋಶಲ್ ಸರ್ವಿಸಸ್ ಸೆಂಟರ್ ಮೇಲೆ ಬುಧವಾರ ಶಸ್ತ್ರಸಜ್ಜಿತ ಆಗಂತುಕರು ಗುಂಡಿನ ದಾಳಿ ನಡೆಸಿದ ಪರಿಣಾಮ 14 ಮಂದಿ ಮೃತರಾಗಿದ್ದಾರೆ, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ವಿಕಲಚೇತನರಾಗಿದ್ದು, ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವುದು...
Date : Thursday, 03-12-2015
ನವದೆಹಲಿ: 2012ರ ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪ್ರಾಪ್ತ ಆರೋಪಿಯ ಶಿಕ್ಷೆಯ ಅವಧಿ ಮುಕ್ತಾಯಗೊಂಡಿದೆ. ಡಿ.22ರಂದು ಆತ ಬಿಡುಗಡೆಯಾಗಬೇಕಿದೆ. ಆದರೆ ಸದ್ಯಕ್ಕೆ ಆತನನ್ನು ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಆತನನ್ನು...
Date : Thursday, 03-12-2015
ಚೆನ್ನೈ: ಜಲಪ್ರಳಯಕ್ಕೆ ತುತ್ತಾಗಿರುವ ಚೆನ್ನೈ ಮಹಾನಗರಿ ಇತರ ರಾಜ್ಯಗಳ ಸಂಪರ್ಕವನ್ನು ಸಂಪೂರ್ಣ ಕಳೆದುಕೊಂಡಿದೆ. ರಸ್ತೆ, ರೈಲ್ವೇ, ವಾಯು ಮಾರ್ಗ ಎಲ್ಲವೂ ಸ್ಥಗಿತಗೊಂಡಿದೆ. ಕಳೆದ ರಾತ್ರಿಯಿಂದ ಮಳೆಯ ತೀವ್ರತೆ ಕಡಿಮೆಯಾದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆ. ನೌಕಾಪಡೆಯ ಐಎನ್ಎಸ್ ಐರಾವತ ವೈದ್ಯರು...