ನವದೆಹಲಿ: ಭಾರತ ಶೀಘ್ರದಲ್ಲೇ ಮೊದಲ ಮಹಿಳಾ ಫೈಟರ್ ಪೈಲೆಟ್ನ್ನು ಹೊಂದಲಿದೆ. ಭಾರತೀಯ ವಾಯು ಸೇನೆ ಈಗಾಗಲೇ ಹೈದರಾಬಾದ್ನ ಏರ್ಫೋರ್ಸ್ ಅಕಾಡಮಿಯಿಂದ ಮೂವರು ಸಮರ್ಥ ತರುಬೇತು ನಿರತ ಮಹಿಳಾ ಪೈಲೆಟ್ಗಳನ್ನು ಆಯ್ಕೆ ಮಾಡಿದೆ,
ಈ ಮಹಿಳೆಯರು ಕಳೆದ ಜನವರಿಯಲ್ಲಿ ಅಕಾಡಮಿಗೆ ಸೇರ್ಪಡೆಗೊಂಡಿದ್ದರು. ಈ ಅಕಾಡಮಿಯಲ್ಲಿ ಒಟ್ಟು 125 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಅವರಲ್ಲಿ 45 ಮಂದಿಯನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಇದರಲ್ಲಿ ಮೂವರು ಮಹಿಳೆಯರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯ್ಕೆಗೊಂಡವರು 2016ರಿಂದ ಕರ್ನಾಟಕದಲ್ಲಿ 12 ತಿಂಗಳು ನಡೆಯಲಿರುವ 3ನೇ ಹಂತದ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಪ್ರಾಯೋಗಿಕವಾಗಿ 5 ವರ್ಷಗಳ ಅವಧಿಗೆ ಮಹಿಳಾ ಪೈಲೆಟ್ಗಳ ನೇಮಕಕ್ಕೆ ಅನುಮತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.