News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಆಪರೇಷನ್‌ ಸಿಂಧೂರ್‌ʼ : ಭಾರತದ ಪ್ರತಿಕಾರದ ದಾಳಿಗೆ 9 ಪಾಕ್‌ ಉಗ್ರ ನೆಲೆಗಳು ಧ್ವಂಸ  

ನವದೆಹಲಿ: ಪಹಲ್ಗಾಮ್‌ ದಾಳಿಗೆ ʼಆಪರೇಷನ್‌ ಸಿಂಧೂರ್‌ʼ ಮೂಲಕ ಭಾರತ ತಕ್ಕ ಪ್ರತಿಕಾರವನ್ನೇ ತೀರಿಸಿಕೊಂಡಿದೆ. ದಾಳಿ ನಡೆದ ಕೇವಲ 15 ದಿನಗಳಲ್ಲಿ ಪರಮ ಶತ್ರು, ಉಗ್ರ ಪೋಷಕ ಪಾಕಿಸ್ಥಾನಕ್ಕೆ ಅರಗಿಸಿಕೊಳ್ಳಲಾಗದ ತಿರುಗೇಟು ದೊರೆತಿದೆ. ಶತ್ರುಗಳ ಅಡ್ಡಾದೊಳಗೆ ನುಗ್ಗಿ ಹೊಡೆಯುವ ತಾಕತ್ತು ನವ ಭಾರತಕ್ಕಿದೆ...

Read More

ಆಕ್ರಮಣದ ಮಾತನಾಡುತ್ತಿದ್ದ ಬಿಲಾವಲ್‌ ಭುಟ್ಟೋ ಬಾಯಲ್ಲಿ ಈಗ ಶಾಂತಿ ಮಂತ್ರ

ಇಸ್ಲಾಮಾಬಾದ್‌: ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಮಂಗಳವಾರ ಪಾಕಿಸ್ತಾನ ಭಾರತದೊಂದಿಗೆ ಶಾಂತಿಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ, ಕೆಲವು ದಿನಗಳ ಹಿಂದೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದರೆ ರಕ್ತಪಾತವಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಇವರು ಈಗ ಶಾಂತಿ ಪಠಿಸುತ್ತಿದ್ದಾರೆ. ಮಂಗಳವಾರ...

Read More

ಶ್ರೀನಗರದ ದಾಲ್ ಸರೋವರದಲ್ಲಿ ನಡೆದ ‌ʼಮಾಕ್‌ ಡ್ರಿಲ್ʼ

ಶ್ರೀನಗರ: ದೇಶಾದ್ಯಂತ ನಾಗರಿಕ ರಕ್ಷಣಾ ಸನ್ನದ್ಧತೆಗಾಗಿ ಗೃಹ ಸಚಿವಾಲಯ ನಡೆಸಲು ಆದೇಶಿಸಿರುವ ಮಾಕ್‌ ಡ್ರಿಲ್ ಉಪಕ್ರಮದ ಭಾಗವಾಗಿ, ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಸಿಬ್ಬಂದಿ ಮಂಗಳವಾರ ಶ್ರೀನಗರದ ದಾಲ್ ಸರೋವರದಲ್ಲಿ ದೋಣಿ ಮಗುಚಿದ ಸನ್ನಿವೇಶದ ಮೇಲೆ...

Read More

ಕಳೆದ 48 ಗಂಟೆಗಳಲ್ಲಿ ಅಜಿತ್‌ ದೋವಲ್‌ ಜೊತೆ ಎರಡನೇ ಸಭೆ ನಡೆಸಿದ ಮೋದಿ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕದ ನಿರಂತರ ಉದ್ವಿಗ್ನತೆ ಮತ್ತು ಊಹಾಪೋಹಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದರು. ಕಳೆದ 48 ಗಂಟೆಗಳಲ್ಲಿ ಪ್ರಧಾನಿಯವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಿಂದ ಮಾಹಿತಿ...

Read More

LoC ಸಮೀಪ ಪಾಕಿಸ್ಥಾನಿ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನ ನಿಯಂತ್ರಣ ರೇಖೆಯಿಂದ (LoC) ಪಾಕಿಸ್ಥಾನಿ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂಜಾಬ್‌ನ ಗುರುದಾಸ್ಪುರ್ ಜಿಲ್ಲೆಯಲ್ಲೂ ಭಾನುವಾರ ರಾತ್ರಿ 24 ವರ್ಷದ ಪಾಕಿಸ್ಥಾನಿ ಪ್ರಜೆ ಅಕ್ರಮವಾಗಿ ಭಾರತೀಯ ಪ್ರದೇಶಕ್ಕೆ ನುಸುಳಿದ ಹಿನ್ನೆಲೆಯಲ್ಲಿ...

Read More

ಮೇ 18ರಂದು ಶಬರಿಮಲೆಗೆ ದ್ರೌಪದಿ ಮುರ್ಮು: ಪವಿತ್ರ ಕ್ಷೇತ್ರಕ್ಕೆ ತೆರಳುತ್ತಿರುವ ಮೊದಲ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿ ಮಲೆಗೆ ತೆರಳಿ ಸ್ವಾಮಿ ಅಯ್ಯಪ್ಪನ ದರ್ಶನವನ್ನು ಪಡೆದುಕೊಳ್ಳಲಿದ್ದಾರೆ. ಮುರ್ಮು ಮೇ 18ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು. ಮುರ್ಮು ಅವರು ಪಂಪಾದಿಂದ ಇರುಮುಡಿ...

Read More

ನ್ಯಾಯಾಧೀಶರ ಆಸ್ತಿ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಸುಪ್ರೀಂಕೋರ್ಟ್

ನವದೆಹಲಿ:  ಪಾರದರ್ಶಕತೆಯನ್ನು ಸುಧಾರಿಸಲು ಶ್ರಮಿಸುತ್ತಿರುವ ಸುಪ್ರೀಂಕೋರ್ಟ್, ಸೋಮವಾರ ನ್ಯಾಯಾಧೀಶರ ಆಸ್ತಿ ಪಟ್ಟಿಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದಾಗಿ ಘೋಷಿಸಿದೆ. ಈ ಕ್ರಮವು ಆಸ್ತಿ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಪೂರ್ಣ-ನ್ಯಾಯಾಲಯದ ನಿರ್ಣಯದೊಂದಿಗೆ ಹೊಂದಿಕೆಯಾಗುತ್ತದೆ. “ಭಾರತೀಯ ಸುಪ್ರೀಂಕೋರ್ಟ್‌ನ ಪೂರ್ಣ ನ್ಯಾಯಾಲಯವು ಏಪ್ರಿಲ್ 1, 2025...

Read More

ಅಯೋಧ್ಯೆ: ಸ್ಮಾರಕವಾಗಲಿದೆ ರಾಮಲಲ್ಲಾನನ್ನು ಇರಿಸಲಾಗಿದ್ದ ಡೇರೆ ಮತ್ತು ಸಿಂಹಾಸನ

ಅಯೋಧ್ಯೆ:  ರಾಮ ಲಲ್ಲಾನನ್ನು ಮೂರು ದಶಕಗಳಿಂದ ಇರಿಸಿದ್ದ ತಾತ್ಕಾಲಿಕ ಡೇರೆ ಮತ್ತು 1949 ರಿಂದ ದೇವರು ನೆಲೆಸಿದ್ದ ಸಿಂಹಾಸನವನ್ನು ಸ್ಮಾರಕಗಳಾಗಿ ಪರಿವರ್ತಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಾನುವಾರ ಘೋಷಿಸಿದೆ. ಶನಿವಾರ ನಡೆದ ದೇವಾಲಯ ನಿರ್ಮಾಣ ಸಮಿತಿಯ...

Read More

ಸಿವಿಲ್ ಡಿಫೆನ್ಸ್ ಮ್ಯಾಕ್ ಡ್ರಿಲ್‌ನಲ್ಲಿ ಸ್ವಯಂಸೇವಕರಾಗಿ ಭಾಗವಹಿಸುವಂತೆ ಕಾರ್ಯಕರ್ತರಿಗೆ ಬಿಜೆಪಿ ಮನವಿ

ನವದೆಹಲಿ: ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸನ್ನದ್ಧತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಮೇ 7 ರಂದು ʼಸಿವಿಲ್‌ ಡಿಫೆನ್ಸ್‌ ಮಾಖ್‌ ಡ್ರಿಲ್‌ʼ ನಡೆಸುವಂತೆ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ  ಮಾಕ್‌ ಡ್ರಿಲ್‌ನಲ್ಲಿ ಸ್ವಯಂಸೇವಕರಾಗಿ ಭಾಗಿಯಾಗುವಂತೆ ತನ್ನ...

Read More

ಇಸ್ರೇಲ್‌ ರಾಜಧಾನಿ ಟೆಲ್ ಅವೀವ್‌ಗೆ ಮೇ 8 ರವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್‌ ಇಂಡಿಯಾ

ನವದೆಹಲಿ: ಏರ್ ಇಂಡಿಯಾವು ಇಸ್ರೇಲ್‌ ರಾಜಧಾನಿ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ವಿಮಾನಗಳ ಸ್ಥಗಿತವನ್ನು ಮೇ 8 ರವರೆಗೆ ವಿಸ್ತರಿಸಿದೆ. ಇಸ್ರೇಲ್ ನಗರದ ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ದಾಳಿ ಸಂಭವಿಸಿದ ಹಿನ್ನೆಲೆಯಲ್ಲಿ ದೆಹಲಿಯಿಂದ ಟೆಲ್ ಅವೀವ್‌ಗೆ ಹಾರಾಟ...

Read More

Recent News

Back To Top