Date : Tuesday, 14-07-2015
ಚೆನ್ನೈ: ಕೆಲ ದಿನಗಳಿಂದ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಜಯ ಅವರಿಗೆ ಲಿವರ್ ಅಥವಾ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡುವ ಅಗತ್ಯವಿದೆ ಎಂಬ ಸುದ್ದಿಗಳು ತಮಿಳುನಾಡಿನಾದ್ಯಂತ ಹರಿದಾಡುತ್ತಿದೆ. ಇದು ಅವರ ಅಭಿಮಾನಿಗಳ...
Date : Tuesday, 14-07-2015
ಮುಂಬಯಿ: ಅಕ್ರಮವಾಗಿ ವಿದೇಶಿ ದೇಣಿಗೆ ಸಂಗ್ರಹಿಸಿದ ಆರೋಪ ಹೊತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಮುಂಬಯಿ ನಿವಾಸ ಮತ್ತು ಕಛೇರಿ ಮೇಲೆ ಸಿಬಿಐ ದಾಳಿ ನಡೆದಿದೆ. ಮಂಗಳವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳ ಎರಡು ತಂಡ ಕಛೇರಿ ಮತ್ತು ಮನೆ ಮೇಲೆ...
Date : Tuesday, 14-07-2015
ಬಲೂರ್‌ಘಾಟ್: ನರ್ಸ್‌ವೊಬ್ಬಳು ಮಗುವಿಗೆ ಅಳವಡಿಸಲಾಗಿದ್ದ ಬ್ಯಾಂಡೇಜನ್ನು ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಮಗುವಿನ ಹೆಬ್ಬೆರಳನ್ನೇ ಕತ್ತರಿಸಿದ ಘಟನೆ ಪಶ್ಚಿಮಬಂಗಾಳದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ತನ್ನ ಕೃತ್ಯವನ್ನು ಮರೆಮಾಚುವುದಕ್ಕಾಗಿ ಆ ನರ್ಸ್ ಮಗುವಿನ ತುಂಡಾದ ಹೆಬ್ಬೆರಳನ್ನು ಕಸದ ಬುಟ್ಟಿಗೆ ಎಸೆದಿದ್ದಾಳೆ. ಹೆಬ್ಬೆರಳು ತಡವಾಗಿ ಪತ್ತೆಯಾದ...
Date : Tuesday, 14-07-2015
ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಕೊನೆ ಇಲ್ಲದಂತಾಗಿದೆ, ಸೋಮವಾರ ರಾತ್ರಿ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ನಾಲ್ವರು ಪೊಲೀಸ್ ಅಧಿಕಾರಿಗಳನ್ನೇ ಅಪಹರಿಸಿದ್ದಾರೆ. ಕುಟ್ರು ಪೊಲೀಸ್ ಸ್ಟೇಶನ್ನಿಗೆ ಸೇರಿದ ಪೊಲೀಸರು ಇವರಾಗಿದ್ದು, ಪ್ರಯಾಣಿಕ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಕ್ಸಲರು ಇವರನ್ನು ಅಪಹರಿಸಿದ್ದಾರೆ. ಅಪಹೃತ...
Date : Tuesday, 14-07-2015
ವಿಜಯವಾಡ: ಆಂಧ್ರಪ್ರದೇಶದ ರಾಜಮುಂಡ್ರೆಯಲ್ಲಿ ನಡೆಯುತ್ತಿರುವ ಗೋದಾವರಿ ಪುಷ್ಕರಂನಲ್ಲಿ ಮಂಗಳವಾರ ಕಾಲ್ತುಳಿತ ಸಂಭವಿಸಿದ್ದು 17 ಮಂದಿ ಮೃತರಾಗಿದ್ದಾರೆ. ಅಧಿಕ ಮಂದಿ ಗಾಯಗೊಂಡಿದ್ದಾರೆ. ಗೋದಾವರಿ ನದಿ ತಟದಲ್ಲಿನ ಕೊಟಗುಮ್ಮಮ್ ಪುಷ್ಕರ್ ಘಾಟ್ ಬಳಿ ಪವಿತ್ರ ಸ್ನಾನ ಮಾಡಲು ಸಾವಿರಾರು ಜನರು ಒಮ್ಮೆಲೆ ನುಗ್ಗಿದ್ದೇ ಈ...
Date : Tuesday, 14-07-2015
ನಾಸಿಕ್: ಈ ಭೂಮಿಯ ಮೇಲಿನ ಅತಿದೊಡ್ಡ ಧಾರ್ಮಿಕ ಆಚರಣೆ ಸಿಂಹಸ್ತ ಕುಂಭ ಮೇಳ ಮಂಗಳವಾರ ಆರಂಭಗೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧುಗಳು, ಭಕ್ತರು ಈ ಮೇಳದಲ್ಲಿ ಪಾಲ್ಗೊಳ್ಳಲು ನಾಸಿಕ್‌ನತ್ತ ಹರಿದು ಬರುತ್ತಿದ್ದಾರೆ. ನಾಸಿಕ್ ನಗರದ ರಾಮಕುಂಡದಲ್ಲಿ ಬೆಳಿಗ್ಗೆ 6.16ರ ಸುಮಾರಿಗೆ ಧ್ವಜಾರೋಹಣ ನೆರವೇರಿಸಲಾಗಿದೆ....
Date : Tuesday, 14-07-2015
ನವದೆಹಲಿ: 8 ದಿನಗಳ ಕಾಲ ರಷ್ಯಾ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಪಲಾಮ್ ಟೆಕ್ನಿಕಲ್ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಅವರು, ‘ಐತಿಹಾಸಿಕ ಮಧ್ಯ ಏಷ್ಯಾ ಭೇಟಿಯನ್ನು ಮುಗಿಸಿ ತಾಯ್ನಾಡಿಗೆ...
Date : Monday, 13-07-2015
ನವದೆಹಲಿ: 26/11 ಮುಂಬಯಿ ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸುವ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆಯನ್ನು ರಷ್ಯಾದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದರು. ಈ ಬಾರಿಯಾದರೂ ಪಾಕಿಸ್ಥಾನ ನುಡಿದಂತೆ ನಡೆಯುತ್ತದೆ ಎಂಬ ಆಶಾವಾದ ಭಾರತೀಯರಿಗಿತ್ತು. ಆದರೆ...
Date : Monday, 13-07-2015
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ಸೋಮವಾರ ಇಫ್ತಾರ್ ಕೂಟ ಆಯೋಜನೆ ಮಾಡಲಿದ್ದು, ಎನ್‌ಡಿಎ ವಿರುದ್ಧ ಬಲ ಪ್ರದರ್ಶನಕ್ಕೆ ಇದನ್ನು ವೇದಿಕೆಯನ್ನಾಗಿಸಿಕೊಳ್ಳಲಿದ್ದಾರೆ. ಲಲಿತ್ ಮೋದಿ ವಿವಾದ, ವ್ಯಾಪಮ್ ಹಗರಣಗಳ ಬಿಸಿಯನ್ನು ಎದುರಿಸುತ್ತಿರುವ ಬಿಜೆಪಿಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಕಟ್ಟಿ ಹಾಕುವ ಸಲುವಾಗಿ...
Date : Monday, 13-07-2015
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ಗ್ರಹಚಾರ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ವಿದೇಶಿ ವಿನಿಮಯ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕೈಬಿಡುವಂತೆ ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು ಸೋಮವಾರ...