Date : Tuesday, 12-10-2021
ನವದೆಹಲಿ: ಪ್ರಧಾನಿ ಮೋದಿ ಅವರು ಸೋಮವಾರ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಮಾತಕತೆ ನಡೆಸಿ, ಭಾರತ-ಯುಕೆ ಅಜೆಂಡಾ 2030 ರ ಪ್ರಗತಿಯನ್ನು ಚರ್ಚಿಸಿದರು. ಹಾಗೆಯೇ ಮುಂಬರುವ 2021ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಸಮ್ಮೇಳನದ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು....
Date : Monday, 11-10-2021
ನವದೆಹಲಿ: ಭಾರತ ಮತ್ತು ಚೀನಾ ನಡುವಿನ 13 ನೇ ಸುತ್ತಿನ ಮಿಲಿಟರಿ ಮಾತುಕತೆಗಳು ಪೂರ್ವ ಲಡಾಖ್‌ನಲ್ಲಿ ತಲೆದೋರಿರುವ ಸಮಸ್ಯೆಗಳಿಗೆ ಯಾವುದೇ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಭಾರತೀಯ ಸೇನೆ ಇಂದು ಹೇಳಿದೆ. ಸಮಸ್ಯೆ ಪರಿಹರಿಸಲು ಭಾರತದ ಕಡೆಯವರು ರಚನಾತ್ಮಕ ಸಲಹೆಗಳನ್ನು ನೀಡಿದರು...
Date : Monday, 11-10-2021
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಕಿರ್ಗಿಸ್ಥಾನ, ಕಜಕಿಸ್ಥಾನ್ ಮತ್ತು ಅರ್ಮೇನಿಯಾಕ್ಕೆ ತಮ್ಮ ನಾಲ್ಕು ದಿನಗಳ ಭೇಟಿ ನೀಡುತ್ತಿದ್ದಾರೆ. ತಮ್ಮ ಪ್ರಯಾಣದ ಭಾಗವಾಗಿ ಅವರು ಕಿರ್ಗಿಸ್ಥಾನಕ್ಕೆ ಇಂದು ಬಂದಿಳಿದಿದ್ದಾರೆ. ಕಿರ್ಗಿಸ್ಥಾನದ ವಿದೇಶಾಂಗ ವ್ಯವಹಾರಗಳ ಸಚಿವ ರುಸ್ಲಾನ್ ಕಜಕ್‌ಬೇವ್...
Date : Saturday, 09-10-2021
ನವದೆಹಲಿ: ಭಾರತೀಯ ಸಾಂಪ್ರದಾಯಿಕ ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಮತ್ತು ಅದನ್ನು ಅಭಿವೃದ್ಧಿಪಡಿಸಲು, ಯುರೋಪಿನಲ್ಲಿ ಆಯುರ್ವೇದವನ್ನು ಉತ್ತೇಜಿಸಲು ಭಾರತವು ಕ್ರೊಯೇಷಿಯಾದೊಂದಿಗೆ ಕೈಜೋಡಿಸಿದೆ. ಯುರೋಪಿನ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾದ ಕ್ರೊಯೇಷಿಯಾದ ಸರ್ಕಾರವು ಪ್ರವಾಸೋದ್ಯಮದೊಂದಿಗೆ ಭಾರತೀಯ ಆಯುರ್ವೇದ ಮತ್ತು ಯೋಗವನ್ನು ಪ್ಯಾಕೇಜ್ ಮಾಡಲು...
Date : Saturday, 09-10-2021
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಇಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಫ್ರೆಡೆರಿಕ್ಸನ್ ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ನಿನ್ನೆ ತಡರಾತ್ರಿ ನವದೆಹಲಿಗೆ ಬಂದಿಳಿದಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ...
Date : Saturday, 09-10-2021
ನವದೆಹಲಿ: ಕೋವಿಶೀಲ್ಡ್ ಅಥವಾ ಯಾವುದೇ ಯುಕೆ ಅನುಮೋದಿತ ಲಸಿಕೆಯಿಂದ ಸಂಪೂರ್ಣವಾಗಿ ಲಸಿಕೆ ಪಡೆದು ಯುಕೆಗೆ ತೆರಳುವ ಭಾರತೀಯರು ಅಕ್ಟೋಬರ್ 11ರಿಂದ ಕ್ವಾರಂಟೈನ್‌ಗೆ ಒಳಗಾಗಬೇಕಾಗಿಲ್ಲ ಎಂದು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ. ಎಲ್ಲಿಸ್ ಈ ಬಗ್ಗೆ ಟ್ವೀಟ್ ಮಾಡಿದ್ದು,...
Date : Friday, 08-10-2021
ಓಸ್ಲೋ: ಫಿಲಿಪೈನ್ಸ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ ಅವರಿಗೆ ಈ ಬಾರಿಯ ನೋಬೆಲ್ ಶಾಂತಿ ಪುರಸ್ಕಾರವನ್ನು ಘೋಷಿಸಲಾಗಿದೆ. ತಮ್ಮ ತಮ್ಮ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಕ್ಕಾಗಿ ಇವರಿಗೆ ಪುರಸ್ಕಾರ ಒಲಿದು ಬಂದಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯ...
Date : Friday, 08-10-2021
ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕೆಲವು ಚೀನಾದ ಸೈನಿಕರು ಗಡಿ ದಾಟಿದ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಕಳೆದ ವಾರ ವಾಸ್ತವ ನಿಯಂತ್ರಣ ರೇಖೆಯಲ್ಲಿ ಮುಖಾಮುಖಿ ಸಂಭವಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಸ್ಥಳೀಯ ಕಮಾಂಡರ್‌ಗಳು ಸಮಸ್ಯೆಯನ್ನು ಪರಿಹರಿಸಿದ...
Date : Thursday, 07-10-2021
ನವದೆಹಲಿ: ತಾಲಿಬಾನ್ ನಿಯಂತ್ರಣದಲ್ಲಿರುವ ಅಫಘಾನಿಸ್ಥಾನದಲ್ಲಿ ಆಹಾರಕ್ಕೆ ಹಾಹಾಕಾರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಗೋದಿ ದಾನ ಮಾಡುವಂತೆ ಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕಿ ಮೇರಿ ಎಲ್ಲೆನ್ ಮೆಕ್ಗ್ರೋತಿ...
Date : Thursday, 07-10-2021
ನವದೆಹಲಿ: ಪಾಕಿಸ್ಥಾನ ವಿರುದ್ಧ 1971 ರಲ್ಲಿ ನಡೆದ ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದ ಹತ್ತು ಭಾರತೀಯ ನೌಕಾ ಯುದ್ಧ ಯೋಧರನ್ನು ಭಾರತದಲ್ಲಿನ ಬಾಂಗ್ಲಾದೇಶದ ಹೈ ಕಮಿಷನರ್ ಮುಹಮ್ಮದ್ ಇಮ್ರಾನ್ ಅವರು ಬುಧವಾರ ಗೌರವಿಸಿದರು. ವಿಶಾಖಪಟ್ಟಣಂನಲ್ಲಿ ಭೇಟಿ ನೀಡಿಥ ಬಾಂಗ್ಲಾದೇಶ ನೌಕಾ ಹಡಗು...