ನವದೆಹಲಿ: ಭಯೋತ್ಪಾದನೆಯು ಶಾಂತಿ ಮತ್ತು ಭದ್ರತೆಯ ವಿಚಾರಕ್ಕೆ ಬೆದರಿಕೆ ಒಡ್ಡುವ ಏಕೈಕ ಸಮಸ್ಯೆಯಾಗಿದೆ. ಇದು ವಿಶ್ವಸಂಸ್ಥೆಯ ಸಾಮಾನ್ಯ ಕಾರ್ಯಸೂಚಿಗಳನ್ನು ಸಾಧಿಸುವಲ್ಲಿ ಅಡೆತಡೆಗಳನ್ನು ಉಂಟು ಮಾಡುತ್ತಿದೆ ಎಂದು ಭಾರತ UNGA ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ UNGA ಸಭೆಯಲ್ಲಿ ಯುಎನ್ನ ಖಾಯಂ ಪ್ರತಿನಿಧಿ, ಪ್ರಧಾನ ಕಾರ್ಯದರ್ಶಿ ಆರ್. ರವೀಂದ್ರ ಅವರು ಭಾರತದ ಪರ ಮಾತನಾಡಿ, ಸಾಮಾನ್ಯ ಕಾರ್ಯಸೂಚಿಗೆ ಸಂಬಂಧಿಸಿದಂತೆ ಭಾರತದ ಪ್ರಾಥಮಿಕ ದೃಷ್ಟಿಕೋನವನ್ನು ಹಂಚಿಕೊಂಡರು. ಹಾಗೆಯೇ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯೋ ಗುಟೆರಸ್ ಅವರ ಪ್ರಸ್ತಾಪಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಮ್ಮ ಸಾಮಾನ್ಯ ಅಜೆಂಡಾ ವರದಿ ಜಗತ್ತಿನ ಮುಂದಿನ 25 ವರ್ಷಗಳ ದೂರಾಲೋಚನೆಯನ್ನು ಹೊಂದಿದೆ. ಇದು ಜಾಗತಿಕ ಸಹಕಾರದ ಭವಿಷ್ಯದ ಬಗೆಗೆ ಗುಟೆರಸ್ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಪರಿಣಾಮಕಾರಿ ಬಹುಪಕ್ಷೀಯತೆಯ ಪುನರುಜ್ಜೀವನವನ್ನು ಈ ದೃಷ್ಟಿಕೋನ ಸಾಧಿಸಲಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮ ದೃಷ್ಟಿಕೋನವು ಸುಧಾರಿತ ಬಹುಪಕ್ಷೀಯತೆ, ಲಿಂಗ, ಮಾನವ ಹಕ್ಕುಗಳು, ಅಭಿವೃದ್ಧಿ, ಭಯೋತ್ಪಾದನೆ ವಿರುದ್ಧ, ಹವಾಮಾನ ಬದಲಾವಣೆ, ಶಾಂತಿ, ಭದ್ರತೆ, ಆರೋಗ್ಯ ಮೊದಲಾದ ಆದ್ಯತೆಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.