ನವದೆಹಲಿ: ತನ್ನ ದೇಶಕ್ಕೆ ಆಗಮಿಸುವ ಭಾರತೀಯರ ಬಗ್ಗೆ ಮೃದುವಾದ ನಿಲುವನ್ನು ಯುಕೆ ತೋರಿದ ಹಿನ್ನೆಲೆಯಲ್ಲಿ ಭಾರತವು ತನ್ನ ನೆಲಕ್ಕೆ ಭೇಟಿ ನೀಡುವ ಯುಕೆ ಪ್ರಜೆಗಳ ಮೇಲೆ ಇತ್ತೀಚೆಗೆ ವಿಧಿಸಿದ ನಿರ್ಬಂಧಗಳನ್ನು ತೆಗೆದುಹಾಕಿದೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದೇಶವನ್ನು ಹೊರಡಿಸಿದ್ದು, ಅಕ್ಟೋಬರ್ 1ರಿಂದ ಭಾರತಕ್ಕೆ ಬರುವ ಯುಕೆ ಪ್ರಜೆಗಳಿಗೆ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಫೆಬ್ರವರಿ 17, 2021 ರಂದು ಹೊರಡಿಸಲಾಗಿದ್ದ ಅಂತರಾಷ್ಟ್ರೀಯ ಆಗಮನದ ಹಿಂದಿನ ಮಾರ್ಗಸೂಚಿಗಳು ಯುಕೆಯಿಂದ ಭಾರತಕ್ಕೆ ಬರುವವರಿಗೆ ಈಗಲೂ ಅನ್ವಯವಾಗುತ್ತವೆ ಎಂದು ಸರ್ಕಾರವು ಹೇಳಿದೆ.
ಯುಕೆ ಪಿಎಂ ಬೋರಿಸ್ ಜಾನ್ಸನ್ ಜೊತೆಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಸಂಭಾಷಣೆಯ ನಂತರ ಈ ಬೆಳವಣಿಗೆ ನಡೆದಿದೆ.
ಭಾರತ ಸರ್ಕಾರದಿಂದ ನೀಡಲಾದ ಕೋವಿಡ್ ಲಸಿಕೆ ಪ್ರಮಾಣಪತ್ರಗಳಿಗೆ ಯುಕೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಮತ್ತು ಭೇಟಿ ನೀಡುವ ಭಾರತೀಯರಿಗೆ ಹೆಚ್ಚುವರಿ ಕ್ವಾರಂಟೈನ್ ಅವಧಿಗೆ ಕರೆ ನೀಡಿದ ನಂತರ ಪ್ರಯಾಣ ನಿರ್ಬಂಧಗಳಿಗೆ ಸಂಬಂಧಿಸಿದ ಜಿದ್ದಾಜಿದ್ದಿ ಉಭಯ ರಾಷ್ಟ್ರಗಳ ನಡುವೆ ಆರಂಭವಾಯಿತು.
ಯುಕೆ ನಿರ್ಧಾರದ ವಿರುದ್ಧ ಭಾರತ ತೀವ್ರ ಪ್ರತಿಭಟನೆಯನ್ನು ದಾಖಲಿಸಿತ್ತು. ಇದಕ್ಕೆ ತಿರುಗೇಟು ಎಂಬಂತೆ ಯುಕೆ ಯಿಂದ ಭಾರತಕ್ಕೆ ಭೇಟಿ ನೀಡುವ ಎಲ್ಲಾ ಪ್ರಯಾಣಿಕರಿಗೆ ದೇಶವು 10 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.