ವಿಶ್ವಸಂಸ್ಥೆ: ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 2022-24 ರ ಅವಧಿಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹುಮತದೊಂದಿಗೆ ಮರು ಆಯ್ಕೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಪ್ರತಿನಿಧಿ, ಈ ಆಯ್ಕೆಯನ್ನು ದೇಶದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಜಾಪ್ರಭುತ್ವ, ಬಹುತ್ವ ಮತ್ತು ಮೂಲಭೂತ ಹಕ್ಕುಗಳ ದೃಢವಾದ ಅನುಮೋದನೆ ಎಂದು ಬಣ್ಣಿಸಿದ್ದಾರೆ.
ಯುಎನ್ ಮಾನವ ಹಕ್ಕುಗಳ ಮಂಡಳಿಯ 18 ಹೊಸ ಸದಸ್ಯರಿಗೆ 76 ನೇ ಯುಎನ್ ಸಾಮಾನ್ಯ ಸಭೆ ಗುರುವಾರ ಚುನಾವಣೆಗಳನ್ನು ನಡೆಸಿತು, ಇದು ಜನವರಿ 2022 ರಿಂದ ಆರಂಭಗೊಂಡು ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದೆ.
193 ಸದಸ್ಯರ ಸಭೆಯಲ್ಲಿ ಭಾರತವು 184 ಮತಗಳನ್ನು ಪಡೆಯಿತು, ಅಗತ್ಯ ಬಹುಮತ ಕೇವಲ 97 ಆಗಿತ್ತು.
The @UN🇺🇳 General Assembly elected 18 members of the #HumanRights Council https://t.co/Eun8lCLGDL
Argentina🇦🇷
Benin🇧🇯
Cameroon🇨🇲
Eritrea🇪🇷
Finland🇫🇮
Gambia🇬🇲
Honduras🇭🇳
India🇮🇳
Kazakhstan🇰🇿
Lithuania🇱🇹
Luxembourg🇱🇺
Malaysia🇲🇾
Montenegro🇲🇪
Paraguay🇵🇾
Qatar🇶🇦
Somalia🇸🇴
UAE🇦🇪
USA🇺🇸 pic.twitter.com/jVV1X38xka— United Nations Human Rights Council (@UN_HRC) October 14, 2021
“ಮಾನವ ಹಕ್ಕುಗಳ ಮಂಡಳಿಗೆ ನಡೆದ ಚುನಾವಣೆಯಲ್ಲಿ ಭಾರತಕ್ಕೆ ದೊರೆತ ಈ ಅಗಾಧವಾದ ಬೆಂಬಲದಿಂದ ನಾನು ನಿಜವಾಗಿಯೂ ಸಂತೋಷಗೊಂಡಿದ್ದೇನೆ. ಇದು ಪ್ರಜಾಪ್ರಭುತ್ವ, ಬಹುತ್ವ ಮತ್ತು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಲ್ಲಿನ ನಮ್ಮ ಬಲವಾದ ಬೇರುಗಳ ದೃಢವಾದ ಅನುಮೋದನೆಯಾಗಿದೆ. ನಮಗೆ ಬಲವಾದ ಗೆಲುವು ನೀಡಿದ ಎಲ್ಲಾ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ.
Proud day for India 🇮🇳
India gets elected to UN #HumanRightsCouncil by a overwhelming majority
As a democratic & pluralistic country adhering to fundamental rights, 🇮🇳will continue to further #HumanRights issues
Thank you colleagues of all UN Member States for your support 🙏 pic.twitter.com/1UlvVmPC4e
— Amb T S Tirumurti (@ambtstirumurti) October 14, 2021
ವಿಶ್ವಸಂಸ್ಥೆಗೆ ಭಾರತದ ಖಾಯಂ ಮಿಷನ್ ಟ್ವೀಟ್ ಮಾಡಿದ್ದು, ‘ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ 6 ನೇ ಅವಧಿಗೆ ಭಾರತವು ಬಹುಮತದೊಂದಿಗೆ ಮರು ಆಯ್ಕೆಯಾಗಿದೆ. ಭಾರತದ ಮೇಲೆ ತನ್ನ ನಂಬಿಕೆಯನ್ನು ಮರು ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಸದಸ್ಯತ್ವ ರಾಷ್ಟ್ರಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು” ಎಂದಿದೆ.
India🇮🇳 gets re-elected to the @UN_HRC (2022-24) for a 6th term with overwhelming majority.
Heartfelt gratitude to the @UN membership for reposing its faith in 🇮🇳.
We will continue to work for promotion and protection of Human Rights through #Samman #Samvad #Sahyog pic.twitter.com/ltqktWcat1
— India at UN, NY (@IndiaUNNewYork) October 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.