Date : Saturday, 25-04-2015
ಕರಾಚಿ: ಪಾಕಿಸ್ಥಾನದ ಮಾನವ ಹಕ್ಕು ಹೋರಾಟಗಾರ್ತಿ ಸಬೀನ ಮಹ್ಮೂದ್ರನ್ನು ಕರಾಚಿಯಲ್ಲಿ ದುಷ್ಕರ್ಮಿಯೊಬ್ಬ ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಭಯೋತ್ಪಾದನ ಪೀಡಿತ ಬಲೂಚಿಸ್ತಾನ ಪ್ರಾಂತ್ಯದ ರಾಜಕೀಯದ ಬಗ್ಗೆ ಅವರು ಚರ್ಚಾ ಕೂಟ ಮತ್ತು ಪ್ರದರ್ಶನ ಏರ್ಪಡಿಸಿದ ಹಿನ್ನಲೆಯಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೂಲಗಳು...
Date : Friday, 24-04-2015
ವಾಷಿಂಗ್ಟನ್: ಅಘ್ಫಾನಿಸ್ತಾನ-ಪಾಕಿಸ್ಥಾನ ಗಡಿಯಲ್ಲಿ ಜನವರಿಯಲ್ಲಿ ಆಲ್-ಖೈದಾ ಉಗ್ರರನ್ನು ಟಾರ್ಗೆಟ್ ಮಾಡಿ ಅಮೆರಿಕ ಭಯೋತ್ಪಾದನ ವಿರೋಧಿ ಕಾರ್ಯಾಚರಣೆ ನಡೆಸುವ ವೇಳೆ ಆಕಸ್ಮಿಕವಾಗಿ ಅಮೆರಿಕ ಮತ್ತು ಇಟಲಿಯ ಇಬ್ಬರು ಪ್ರಜೆಗಳು ಹತರಾಗಿದ್ದು, ಇವರು ಅಲ್ಖೈದಾದ ಒತ್ತೆಯಾಳುಗಳಾಗಿದ್ದರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗುರುವಾರ...
Date : Friday, 24-04-2015
ಮೆಲ್ಬೋರ್ನ್: ಹೆಣ್ಣು ಮಕ್ಕಳು ಓಡಿದರೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂಬ ಭೀತಿಯಿಂದ ಆಸ್ಟ್ರೇಲಿಯಾದ ಮುಸ್ಲಿಂ ಮಹಿಳಾ ಕಾಲೇಜೊಂದು ತಮ್ಮ ವಿದ್ಯಾರ್ಥಿನಿಯರು ಓಡುವುದಕ್ಕೆ ನಿಷೇಧ ಹೇರಿದೆ. ಅಲ್-ತಕ್ವಾ ಮುಸ್ಲಿಂ ಕಾಲೇಜಿನ ಪ್ರಾಂಶುಪಾಲ ಓಮರ್ ಹಲ್ಲಕ್ ಆದೇಶದಂತೆ ಹೆಣ್ಣುಮಕ್ಕಳಿಗೆ ಓಡುವುದಕ್ಕೆ ನಿಷೇಧ ಹೇರಲಾಗಿದೆ. ಈತನ...
Date : Thursday, 23-04-2015
ಲಂಡನ್: ಮೈಸೂರಿನ ರಾಜ ಟಿಪ್ಪು ಸುಲ್ತಾನನಿಗೆ ಸಂಬಂಧಪಟ್ಟ ಶಸ್ತ್ರಾಸ್ತ್ರ ಮತ್ತು ರಕ್ಷಾ ಕವಚಗಳ ಸಂಗ್ರಹವನ್ನು ಲಂಡನ್‌ನಲ್ಲಿ ಸುಮಾರು 6 ಮಿಲಿಯನ್ ಪೌಂಡ್‌ಗಳಿಗೆ ಮಾರಾಟ ಮಾಡಲಾಗಿದೆ. ‘ಬೋನ್ಹಾಮ್ಸ್ ಇಸ್ಲಾಮಿಕ್ ಆಂಡ್ ಇಂಡಿಯನ್ ಆರ್ಟ್ ಸೇಲ್’ ಎ.21ರಂದು ಸಂಸ್ಥೆ ಟಿಪ್ಪುವಿಗೆ ಸೇರಿದ ಒಟ್ಟು 30...
Date : Thursday, 23-04-2015
ವಾಷಿಂಗ್ಟನ್: ಅಮೆರಿಕದ ಪ್ರಧಾನ ಸರ್ಜನ್ ಜನರಲ್ ಆಗಿ ಭಾರತೀಯ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ (37) ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಅವರಿಗೆ ಉಪ ಅಧ್ಯಕ್ಷ ಜೋ ಬಿಡನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಭಗದ್ಗೀತೆ ಹೆಸರಿನಲ್ಲಿ ಮೂರ್ತಿ ಪ್ರಮಾಣ ವಚನ ಸ್ವೀಕರಿಸಿದರು....
Date : Wednesday, 22-04-2015
ಕಠ್ಮಂಡು: ನೇಪಾಳದಲ್ಲಿ ಬುಧವಾರ ಬಸ್ಸೊಂದು ನದಿಗೆ ಬಿದ್ದ ಪರಿಣಾಮ ಅದರಲ್ಲಿದ್ದ 17 ಮಂದಿ ಭಾರತೀಯರು ದುರ್ಮರಣಕ್ಕೀಡಾಗಿದ್ದಾರೆ. 20 ಮಂದಿಗೆ ಗಾಯಗಳಾಗಿವೆ. ಕಠ್ಮಂಡುವಿನಿಂದ 50 ಕಿ.ಮೀ ದೂರವಿರುವ ಧಾಡಿಂಗ್ ಜಿಲ್ಲೆಯ ಜೈಪ್ರೆ ಎಂಬಲ್ಲಿ ಈ ಘಟನೆ ನಡೆದಿದೆ. ಬಸ್‌ನಲ್ಲಿ ಯಾತ್ರಾರ್ಥಿಗಳಿದ್ದು ಇವರು ಪಶುಪತಿನಾಥ...
Date : Wednesday, 22-04-2015
ಇಸ್ಲಾಮಾಬಾದ್: ತಾನು ಮೊದಲ ದೇಶಿ ನಿರ್ಮಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದಾಗಿ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಹೇಳಿಕೊಂಡಿದೆ. ಅಲ್ಲದೇ ಈ ಬಗ್ಗೆ ಪ್ರಕಟಣೆಯನ್ನು ಅದು ಹೊರಡಿಸಿದ್ದು, ವಿಡಿಯೋವನ್ನೂ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೋಮವಾರ ’ಒಮರ್ 1’ ಎಂಬ ಹೆಸರಿನ...
Date : Tuesday, 21-04-2015
ಹೈದರಾಬಾದ್: ತನ್ನ ನಾಲ್ಕು ಮಂದಿ ಶಾಸಕರನ್ನು ಪ್ರಗತಿಪರ ರೈತರು ಎಂದು ಬಿಂಬಿಸಿ ಇಸ್ರೇಲ್‌ಗೆ ಪ್ರವಾಸಕ್ಕೆ ಕಳುಹಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇದಕ್ಕೆ ದೇಶದೆಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಎ.27ರಿಂದ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ 19ನೇ ಅಂತಾರಾಷ್ಟ್ರೀಯ ಕೃಷಿ ಮೇಳ ನಡೆಯಲಿದೆ. ಇದರಲ್ಲಿ...
Date : Monday, 20-04-2015
ಟೊಕಿಯೋ: ಜಪಾನಿನ ದಕ್ಷಿಣ ಭಾಗವಾದ ತೈವಾನ್ ಮತ್ತು ಇತರ ದ್ವೀಪಗಳಲ್ಲಿ ಸೋಮವಾರ ಪ್ರಬಲ ಭೂಕಂಪವಾಗಿದೆ. ಇದರಿಂದಾಗಿ ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.8 ಪರಿಮಾಣ ಎಂದು ದಾಖಲಾಗಿದೆ. ಭೂಕಂಪದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ...
Date : Monday, 20-04-2015
ಪೇಶಾವರ: 26/11 ಮುಂಬಯಿ ದಾಳಿಯ ಪ್ರಮುಖ ರುವಾರಿ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಮತ್ತೆ ಭಾರತದ ವಿರುದ್ಧ ಗುಡುಗಿದ್ದಾನೆ. ಭಾರತವನ್ನು ಪಾಕಿಸ್ಥಾನದ ನಂಬರ್ 1 ಶತ್ರು ಎಂದು ಘೋಷಿಸಿದ್ದಾನೆ. ಪೇಶವಾರದಲ್ಲಿ ಸಮಾವೇಶವನ್ನು ನಡೆಸಿ ಮಾತನಾಡಿರುವ ಆತ...