ಬೀಜಿಂಗ್: ಭೂಕಂಪ ಪೀಡಿತ ನೇಪಾಳಕ್ಕೆ ಸಹಾಯ ಮಾಡುವ ವಿಷಯದಲ್ಲಿ ಭಾರತದೊಂದಿಗೆ ಸ್ಪರ್ಧೆ ನಡೆಸುತ್ತಿಲ್ಲ. ಭಾರತದ ಜೊತೆ ಸೇರಿ ನೇಪಾಳಕ್ಕೆ ಸಹಾಯ ಮಾಡಲು ಬಯಸುತ್ತೇವೆ ಎಂದು ಚೀನಾ ಸ್ಪಷ್ಟಪಡಿಸಿದೆ.
‘ಭಾರತ ಮತ್ತು ಚೀನಾ ನೇಪಾಳದ ನೆರೆಹೊರೆಯ ರಾಷ್ಟ್ರಗಳು. ನಾವು ಪರಸ್ಪರ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ಬಯಸುತ್ತೇವೆ. ಸಂಕಷ್ಟದಲ್ಲಿರುವ ನೇಪಾಳಕ್ಕೆ ಜೊತೆ ಸೇರಿ ಸಹಕಾರ ನೀಡಬಯಸುತ್ತೇವೆ. ತನ್ನ ನೆಲವನ್ನು ಪುನರ್ ನಿರ್ಮಾಣ ಮಾಡುವುದಕ್ಕೆ ನೇಪಾಳಕ್ಕೆ ಸಹಾಯಹಸ್ತ ಚಾಚುತ್ತೇವೆ’ ಎಂದು ಚೀನಾ ವಿದೇಶಾಂಗ ವಕ್ತಾರ ಹಾಂಗ್ ಲೀ ತಿಳಿಸಿದ್ದಾರೆ.
‘ನೇಪಾಳ ದುರಂತಕ್ಕೀಡಾದ ಬಳಿಕ ಚೀನಾ, ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಅದರ ನೆರವಿಗೆ ಧಾವಿಸಿದೆ. ನಮ್ಮ ಸಹಕಾರ ಇದೇ ರೀತಿ ಮುಂದುವರೆಯುತ್ತದೆ. ಪರಿಹಾರ ಕಾರ್ಯದಲ್ಲಿ ಯಾವುದೇ ಸ್ಪರ್ಧೆ ಇಲ್ಲ’ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.