ಕಠ್ಮಂಡು: ಭೂಕಂಪದಿಂದ ಈಗಾಗಲೇ ತತ್ತರಿಸಿರುವ ನೇಪಾಳ, ಇದೀಗ ಪಾಕಿಸ್ಥಾನ ಪರಿಹಾರಾರ್ಥವಾಗಿ ಕಳುಹಿಸಿಕೊಟ್ಟ ಆಹಾರವನ್ನು ಕಂಡು ಮತ್ತಷ್ಟು ಆಘಾತಕ್ಕೊಳಗಾಗಿದೆ.
ಪಾಕಿಸ್ಥಾನವು ಹಿಂದೂಗಳೇ ಹೆಚ್ಚಾಗಿರುವ ನೇಪಾಳಕ್ಕೆ ಪರಿಹಾರವಾಗಿ ದನದ ಮಾಂಸದ ಮಸಾಲೆಯನ್ನು ಕಳುಹಿಸಿಕೊಟ್ಟಿದೆ ಎಂದು ಇಂಗ್ಲೆಂಡಿನ ’ಡೈಲಿ ಮೇಲ್’ ಪತ್ರಿಕೆ ವರದಿ ಮಾಡಿದೆ.
ನೇಪಾಳ ಹಿಂದೂ ರಾಷ್ಟ್ರ, ಭೂಕಂಪಕ್ಕೆ ತುತ್ತಾಗಿರುವವರೂ ಹಿಂದೂಗಳೇ. ಹಿಂದೂಗಳು ಪವಿತ್ರ ಎನಿಸಿಕೊಂಡಿರುವ ಗೋವಿನ ಮಾಂಸವನ್ನೇ ಇದೀಗ ಪಾಕಿಸ್ಥಾನ ಪರಿಹಾರವಾಗಿ ಕಳುಹಿಸಿಕೊಟ್ಟಿರುವುದು ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಪಾಕಿಸ್ಥಾನವು ದನದ ಮಸಾಲೆಯನ್ನು ಕಳುಹಿಸಿಕೊಟ್ಟಿದೆ ಎಂಬ ಅಂಶವನ್ನು ಕಠ್ಮಂಡುವಿನಲ್ಲಿರುವ ಭಾರತೀಯ ವೈದ್ಯರುಗಳು ಸ್ಪಷ್ಟಪಡಿಸಿದ್ದಾರೆ.
‘ಆಹಾರ ಸಾಮಾಗ್ರಿಗಳನ್ನು ತೆಗೆದುಕೊಳ್ಳಲು ಏರ್ಪೋರ್ಟ್ಗೆ ತೆರಳಿದಾಗ ಅಲ್ಲಿ ಪಾಕಿಸ್ಥಾನದಿಂದ ಬಂದ ಆಹಾರ ಪದಾರ್ಥಗಳಿದ್ದವು. ಇದರಲ್ಲಿ ಹಲವು ಪ್ಯಾಕೇಟ್ ಬೀಫ್ ಮಸಾಲೆಗಳಿದ್ದವು. ಇದರಿಂದಾಗಿ ಅದನ್ನು ನಾವು ಮುಟ್ಟಲಿಲ್ಲ. ಬದಲಾಗಿ ಹೋಟೆಲ್ನಿಂದ ಆಹಾರವನ್ನು ತರಿಸಿ ತಿನ್ನಬೇಕಾಯಿತು’ ಎಂದು ಡಾ.ಬಲ್ವಿಂದರ್ ಸಿಂಗ್ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಪಾಕಿಸ್ಥಾನ ನೇಪಾಳಿಗರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯವನ್ನು ಪ್ರಧಾನಿ ಸುಶೀಲ್ ಕೊಯಿರಾಲ ಅವರಿಗೆ ತಿಳಿಸಲಾಗಿದೆ, ಈ ವಿಷಯವನ್ನು ಪಾಕಿಸ್ಥಾನದೊಂದಿಗೆ ಚರ್ಚಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪಕ್ಕೀಡಾದ ಜನರ ಧಾರ್ಮಿಕ ಭಾವನೆಯನ್ನು ಅರಿತು ಸೂಕ್ಷ್ಮವಾಗಿ ನಡೆದುಕೊಳ್ಳುವಲ್ಲಿ ಪಾಕಿಸ್ಥಾನ ನಿರ್ಲಕ್ಷ್ಯ ತೋರಿದೆ. ಈ ಬಗ್ಗೆ ಅದು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.